ಈ ಆಫರ್'ನಿಂದಾಗಿ ಜಿಯೋ ಸಂಸ್ಥೆಗೂ ಶಾಕ್ ಆಗಲಿದೆ

First Published 31, Mar 2018, 3:52 PM IST
BSNL unveils new prepaid plan for Rs 118
Highlights

28 ದಿನಗಳ ಅವಧಿಯ ಈ ಆಫರ್'ನಲ್ಲಿ ನಿತ್ಯ 1ಜಿಬಿ 3ಜಿ/4ಜಿ ಡಾಟಾ, ರಾಷ್ಟ್ರೀಯ ರೋಮಿಂಗ್ ಒಳಗೊಂಡಂತೆ ಅನಿಯಮಿತ ವಾಯ್ಸ್ ಕರೆ ಒಳಗೊಳ್ಳುತ್ತದೆ.

ಮುಂಬೈ(ಮಾ.31): ವರ್ಷಕ್ಕೂ ಹೆಚ್ಚು ಹಲವು ಉಚಿತ ಆಫರ್ ನೀಡಿದ ಜಿಯೋಗೆ ಸೆಡ್ಡು ಹೊಡೆಯಲು ಹಲವು ಸಂಸ್ಥೆಗಳು ಮುಂದಾಗಿವೆ. ಆದರೂ ಎಲ್ಲ ಕಂಪನಿಗಳ ಆಫರ್'ಗಳನ್ನು ಮೀರಿಸುವ ರೀತಿಯಲ್ಲಿ ಹೊಸ ಹೊಸ ಕೊಡುಗೆಗಳನ್ನು ಜಿಯೋ ನೀಡುತ್ತಿದೆ.

ದೇಶಿಯ ಸರ್ಕಾರಿ ಸ್ವಾಮ್ಯದ ಬಿಎಸ್'ಎನ್'ಎಲ್ ಸಂಸ್ಥೆ ಜಿಯೋ ರೀತಿಯಲ್ಲಿ ನೂತನ ಆಫರ್'ಅನ್ನು ನೀಡಲು ಮುಂದಾಗಿದೆ. ಸ್ಪೆಷಲ್ ಟಾರೀಫ್ ವೋಚರ್ (ಎಸ್'ಟಿವಿ) ಹೆಸರಿನ 118 ರೂ.ಗಳ ಕೊಡುಗೆ ಇದಾಗಿದೆ.  28 ದಿನಗಳ ಅವಧಿಯ ಈ ಆಫರ್'ನಲ್ಲಿ ನಿತ್ಯ 1ಜಿಬಿ 3ಜಿ/4ಜಿ ಡಾಟಾ, ರಾಷ್ಟ್ರೀಯ ರೋಮಿಂಗ್ ಒಳಗೊಂಡಂತೆ ಅನಿಯಮಿತ ವಾಯ್ಸ್ ಕರೆ ಒಳಗೊಳ್ಳುತ್ತದೆ.

ಪ್ರಸ್ತುತ ಈ ಆಫರ್ ತಮಿಳುನಾಡಿನಲ್ಲಿ ಮಾತ್ರ ಲಭ್ಯವಿದ್ದು ನಂತರದ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸಲಾಗುತ್ತದೆ.  ಬಿಎಸ್'ಎನ್'ಎಲ್ ಕೇರಳ, ಮಧ್ಯಪ್ರದೇಶ, ಛತ್ತೀಸ್'ಘಡ, ಕೋಲ್ಕತ್ತಾ, ಪಶ್ಚಿಮ ಬಂಗಾಳ ಹಾಗೂ ಅಂಡಮಾನ್ ನಿಕೋಬಾರ್, ಅಸ್ಸಾಂ ಹಾಗೂ ಈಶಾನ್ಯ ಭಾರತದಲ್ಲಿ 5000 ವೈಫೈ ಹಾಟ್'ಸ್ಪಾಟ್ ಕೇಂದ್ರಗಳನ್ನು ಸ್ಥಾಪಿಸಲು ಬಿಡ್'ಗಳನ್ನು ಆಹ್ವಾನಿಸಿದೆ. ಕಳೆದ 2 ವರ್ಷಗಳಲ್ಲಿ ಭಾರತದಾತ್ಯಂತ 10 ಸಾವಿರ ಹಾಟ್'ಸ್ಪಾಟ್ ಕೇಂದ್ರ ಸ್ಥಾಪಿಸಲಾಗಿದೆ.

loader