ಹೊಸದಾಗಿ ಆಟೋಮೇಟೆಡ್ ಸಿಮ್ ಕಿಯೋಸ್ಕ್‌ಗಳು ಮತ್ತು 5G ಸೇವೆಗಳನ್ನು ಪರಿಚಯಿಸಲಾಗುತ್ತಿದೆ. ಮುಂಬೈ ಮತ್ತು ದಿಲ್ಲಿಯಲ್ಲಿ ಮೊದಲು 5G ಸೇವೆ ಆರಂಭವಾಗಲಿದೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್‌ ನಿಗಮ್‌ ಲಿಮಿಡೆಟ್‌ (ಬಿಎಸ್ಸೆನ್ನೆಲ್‌) ಸದ್ಯಕ್ಕೆ ಕರೆ ದರ ಏರಿಕೆ ಮಾಡುವುದಿಲ್ಲ ಎಂದು ಬಿಎಸ್‌ಎನ್‌ಎಲ್‌ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾರ್ಬಟ್‌ ರವಿ ಹೇಳಿದ್ದಾರೆ, ಇತ್ತೀಚೆಗೆ ಜಿಯೋ, ಏರ್‌ಟೆಲ್‌, ವೊಡಾಫೋನ್‌ಗಳು ಭಾರಿ ಪ್ರಮಾಣದಲ್ಲಿ ದರ ಹೆಚ್ಚಿಸಿದ ಬೆನ್ನಲ್ಲೇ ರವಿ ಈ ಹೇಳಿಕೆ ನೀಡಿ, ‘ನಮಗೆ ಗ್ರಾಹಕರ ಸಂತೋಷ ಮುಖ್ಯ. ಹೀಗಾಗಿ ಸದ್ಯೋಭವಿಷ್ಯದಲ್ಲಿ ದರ ಏರಿಕೆ ಇಲ್ಲ’ ಎಂದಿದ್ದಾರೆ.

ಈ ನಡುವೆ ಮಂಗಳವಾರದಿಂದ ಬಿಎಸ್ಸೆನ್ನೆಲ್‌ ಕೆಲವು ಹೊಸ ಸೇವೆ ಪರಿಚಯಿಸಿದೆ. ಇದರಲ್ಲಿ ಆಟೋಮೇಟೆಡ್‌ ಸಿಮ್‌ ಕಿಯೋಸ್ಕ್‌ ಕೂಡ ಸೇರಿದೆ. ಇಲ್ಲಿ ದಿನದ 24 ಗಂಟೆಯೂ ಹೊಸ ಸಿಮ್‌ ಖರೀದಿಸಬಹುದು. ಅಪ್‌ಗ್ರೇಡ್‌ ಮಾಡಬಹುದು. ಪೋರ್ಟ್‌ ಮಾಡಬಹುದು. ಕ್ಯುಆರ್‌ ಕೋಡ್‌ನಲ್ಲೇ ಪೇಮೆಂಟ್‌ ಮಾಡಬಹುದು. ಸದ್ಯ 1.8 ಕೋಟಿ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಸೇರಿದ್ದಾರೆ.

ಮುಂಬೈ, ದಿಲ್ಲಿಯಲ್ಲಿ 5ಜಿ ಸೇವೆ: 
ಈಗಾಗಲೇ 4ಜಿ ಸೇವೆ ಆರಂಭಿಸಿರುವ ಬಿಎಸ್‌ಎನ್‌ಎಲ್, ಎಲ್ಲ ಕಡೆ ಅದನ್ನು ವಿಸ್ತರಿಸುವ ಪ್ರಕ್ರಿಯೆ ನಡೆದಿದೆ. ಇನ್ನು ಮುಂದೆ 5ಜಿ ಸೇವೆಯನ್ನೂ ಆರಂಭಿಸಲಿದೆ. ಮೊದಲು ಈ ಸೇವೆ ಮುಂಬೈ ಹಾಗೂ ದಿಲ್ಲಿ ನಗರಗಳಲ್ಲಿ ಆರಂಭವಾಗಲಿದೆ.

BSNL ಮಾಸ್ಟರ್‌ಸ್ಟ್ರೋಕ್‌ಗೆ ಬೆಚ್ಚಿದ ಜಿಯೋ,ಏರ್‌ಟೆಲ್, ಗೇಮ್ ಚೇಂಜರ್ ಪ್ಲಾನ್ ಘೋಷಣೆ!

ಬಿಎಸ್ಸೆನ್ನೆಲ್ ಹೊಸ ಲೋಗೋ ಬಿಡುಗಡೆ, ಕೆಲವು ಹೊಸ ಸೇವೆ
ನವದೆಹಲಿ: ಮಂಗಳವಾರ ಬಿಎಸ್‌ಎನ್‌ಎಲ್ ಹೊಸ ಲೋಗೋ ಬಿಡುಗಡೆ ಮಾಡಲಾಯಿತು. ಹೊಸ ಲೋಗೋದಲ್ಲಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣ ಬಳಸಲಾಗಿದೆ. ಅಲ್ಲದೆ, ಮಂಗಳವಾರದಿಂದ ಬಿಎಸ್‌ಎನ್‌ಎಲ್ 7 ಹೊಸ ಸೇವೆ ಪರಿಚಯಿಸಿದೆ. ಇದರಲ್ಲಿ ಆಟೋಮೇ ಟೆಡ್ ಸಿಮ್ ಕಿಯೋಸ್ಟ್ ಕೂಡ ಸೇರಿದೆ. ಇಲ್ಲಿ ದಿನದ 24 ಗಂಟೆಯೂ ಹೊಸ ಸಿಮ್ ಖರೀದಿಸಬಹುದು. ಅಪ್‌ಗ್ರೇಡ್ ಮಾಡಬಹುದು. ಪೋರ್ಟ್ ಮಾಡಬಹುದು. ಕ್ಯುಆರ್ ಕೋಡ್‌ನಲ್ಲೇ ಪೇಮೆಂಟ್ ಮಾಡಬಹುದು.

ಜಿಯೋಗೆ ಟಕ್ಕರ್ ಕೊಡಲು ಏರ್‌ಟೆಲ್‌ನಿಂದ ಹೊಸ 365 ದಿನದ ಪ್ಲಾನ್

Scroll to load tweet…
Scroll to load tweet…
Scroll to load tweet…