Asianet Suvarna News Asianet Suvarna News

ಜಿಯೋ ಮೀರಿಸಿದ ಬಂಪರ್ ಆಫರ್ ಪ್ರಕಟಿಸಿದ ಬಿಎಸ್'ಎನ್'ಎಲ್! ನಿತ್ಯ ಎಷ್ಟು ಉಚಿತ ಡಾಟಾ ಗೊತ್ತೆ ?

ಜಿಯೋ, ಏರ್'ಟೆಲ್,ಐಡಿಯಾ ಹಾಗೂ ವೊಡಾ'ಫೋನ್ ಸಂಸ್ಥೆ'ಗಳು ನಿತ್ಯ ರೂ 300 ರಿಂದ 350ರೊಳಗೆ 1 ಜಿಬಿ ಉಚಿತ ಡಾಟಾ, ಕರೆ ಹಾಗೂ ಉಳಿದ ಆಫರ್'ಗಳನ್ನು ಪ್ರಕಟಿಸಿವೆ. ಜಿಯೋ ಈಗಾಗಲೆ 3 ತಿಂಗಳಿಗೆ 1ಜಿಬಿಯಂತೆ ಉಚಿತ ಆಫರ್' ಪ್ರಕಟಿಸಿದೆ. ಆದರೆ ಇವೆಲ್ಲವನ್ನು ಮೀರಿಸಿದ ಸೂಪರ್ ಬಂಪರ್ ಸೌಲಭ್ಯವುಳ್ಳ 3 ಆಫರ್'ಅನ್ನು ಬಿಎಸ್'ಎನ್'ಎಲ್ ಪ್ರಕಟಿಸಿದೆ.

BSNL launches new plans with up to 3GB per day data
  • Facebook
  • Twitter
  • Whatsapp

ಮುಂಬೈ(ಏ.22): ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್'ಎನ್'ಎಲ್ ಸಂಸ್ಥೆ ಜಿಯೋ'ಗೂ ಮೀರಿಸಿದ ಬಂಪರ್ ಆಫರ್'ನ್ನು ಪ್ರಕಟಿಸಿದೆ.

ಜಿಯೋ, ಏರ್'ಟೆಲ್,ಐಡಿಯಾ ಹಾಗೂ ವೊಡಾ'ಫೋನ್ ಸಂಸ್ಥೆ'ಗಳು ನಿತ್ಯ ರೂ 300 ರಿಂದ 350ರೊಳಗೆ 1 ಜಿಬಿ ಉಚಿತ ಡಾಟಾ, ಕರೆ ಹಾಗೂ ಉಳಿದ ಆಫರ್'ಗಳನ್ನು ಪ್ರಕಟಿಸಿವೆ. ಜಿಯೋ ಈಗಾಗಲೆ 3 ತಿಂಗಳಿಗೆ 1ಜಿಬಿಯಂತೆ ಉಚಿತ ಆಫರ್' ಪ್ರಕಟಿಸಿದೆ. ಆದರೆ ಇವೆಲ್ಲವನ್ನು ಮೀರಿಸಿದ ಸೂಪರ್ ಬಂಪರ್ ಸೌಲಭ್ಯವುಳ್ಳ 3 ಆಫರ್'ಅನ್ನು ಬಿಎಸ್'ಎನ್'ಎಲ್ ಪ್ರಕಟಿಸಿದೆ.

ಮೊದಲ ಆಫರ್ : ರೂ.333 ರಿಚಾರ್ಜ್ ಮಾಡಿಸಿದರೆ 3 ತಿಂಗಳು ನಿತ್ಯ 3 ಜಿಬಿ ವೇಗದ 3ಜಿಬಿ ಉಚಿತ ಡಾಟಾ ಅನಿಯಮಿತ ಡಾಟಾ ದೊರೆಯುತ್ತದೆ.3 ಜಿಬಿ ಡಾಟಾ ಮುಗಿದ ನಂತರ 80 ಎಂಬಿಪಿಎಸ್ ಡಾಟಾ ಲಭ್ಯವಾಗಲಿದೆ.

ಎರಡನೆಯ ಆಫರ್: 349 ರೂ.ಗಳಿಗೆ 'ದಿಲ್ ಕೋಲ್ ಕೆ ಬೋಲ್' ಎಂಬ ಆಫರ್'ನಲ್ಲಿ 3 ತಿಂಗಳು ಅನಿಯಮಿತ ಸ್ಥಳೀಯ, ಎಸ್'ಟಿಡಿ  ಉಚಿತ ಕರೆಗಳು ಹಾಗೂ ನಿತ್ಯ 3ಜಿ ವೇಗದ 2ಜಿಬಿ ಡಾಟಾ ದೊರೆಯುತ್ತದೆ. 2 ಜಿಬಿ ಡಾಟಾ ಮುಗಿದ ನಂತರ 80ಎಂ'ಬಿಪಿಎಸ್ ಡಾಟಾ ದೊರೆಯಲಿದೆ.

 ಮೂರನೇ ಆಫರ್: 395 ರೂ.ಗಳಿಗೆ 3,000 ನಿಮಿಷ  ಬಿಎಸ್'ಎನ್'ಎಲ್'ಗೆ ಉಚಿತ ಕರೆ ಹಾಗೂ 1.800 ನಿಮಿಷ   ಇತರ ಕಂಪನಿಗಳಿಗೆ ಉಚಿತ ಕರೆ ಲಭ್ಯವಾಗಲಿದೆ. ಅಲ್ಲದೆ ನಿತ್ಯ 3ಜಿ ವೇಗದೊಂದಿಗೆ 2ಜಿಬಿ ಡಾಟಾ ಸಿಗಲಿದೆ. ಅವಧಿ: 71 ದಿನಗಳು

Follow Us:
Download App:
  • android
  • ios