ಕರ್ನಾಟಕ ಸೇರಿದಂತೆ ದಕ್ಷಿಣ ಮತ್ತು ಪಶ್ಚಿಮ ಭಾರತದ ಪ್ರಾಂತ್ಯಗಳಲ್ಲಿ 4 ಜಿ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಸಂಪರ್ಕ ವ್ಯವಸ್ಥೆಯಾದ ಬಿಎಸ್‌ಎನ್‌ಎಲ್‌, ಫಿನ್‌ಲೆಂಡ್‌ ಮೂಲದ ನೋಕಿಯಾ ಮೊಬೈಲ್‌ ಕಂಪನಿ ಜತೆಗಿನ ಒಪ್ಪಂದಕ್ಕೆ ಸಹಿ ಹಾಕಿದೆ.

ಬಾರ್ಸಿಲೋನಾ: ಕರ್ನಾಟಕ ಸೇರಿದಂತೆ ದಕ್ಷಿಣ ಮತ್ತು ಪಶ್ಚಿಮ ಭಾರತದ ಪ್ರಾಂತ್ಯಗಳಲ್ಲಿ 4 ಜಿ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಸಂಪರ್ಕ ವ್ಯವಸ್ಥೆಯಾದ ಬಿಎಸ್‌ಎನ್‌ಎಲ್‌, ಫಿನ್‌ಲೆಂಡ್‌ ಮೂಲದ ನೋಕಿಯಾ ಮೊಬೈಲ್‌ ಕಂಪನಿ ಜತೆಗಿನ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಬಗ್ಗೆ ಸೋಮವಾರ ಮಾತನಾಡಿದ ಬಿಎಸ್‌ಎನ್‌ಎಲ್‌ ಸಿಎಂಡಿ ಅನುಪಮ್‌ ಶ್ರೀವಸ್ತವ, ‘ನೋಕಿಯಾ ಕಂಪನಿ ಜತೆಗಿನ ತಂತ್ರಜ್ಞಾನ ಪಾಲುದಾರಿಕೆ ಬಗ್ಗೆ ನಮಗೆ ಹೆಮ್ಮೆಯಿದೆ. ಇದು 5ಜಿ ಸ್ಪೀಡ್‌ನತ್ತ ದಾಪುಗಾಲು ಹಾಕಲು ನೆರವಾಗಲಿದೆ,’ ಎಂದು ತಿಳಿಸಿದರು

ಇದರ ಪ್ರಕಾರ 3.8 ಕೋಟಿ ಬಿಎಸ್‌ಎನ್‌ಎಲ್‌ ಚಂದಾದಾರರನ್ನು ಹೊಂದಿದ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ, ಚತ್ತೀಸ್‌ಗಢ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ತೆಲಂಗಾಣದಲ್ಲಿ 10 ಟೆಲಿಕಾಂ ಸರ್ಕಲ್‌ಗಳ ಸ್ಥಾಪನೆಗೆ ನೋಕಿಯಾ ತಂತ್ರಜ್ಞಾನ ನೆರವು ನೀಡಲಿದೆ.