ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುವಲ್ಲಿ ಸರ್ಕಾರಿ ಸ್ವಾಮ್ಯದ BSNL ಹಿಂದೆ ಬಿದ್ದಿಲ್ಲ. ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಪ್ಲಾನ್‌ವೊಂದನ್ನು BSNL ಬಿಡುಗಡೆ ಮಾಡಿದೆ. ಅಭಿನಂದನ್ ಹೆಸರಿನ ಈ ಪ್ಲಾನ್ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ಹೊತ್ತುಕೊಂಡು ಬಂದಿದೆ.

ಅಭಿನಂದನ್ 151 ಪ್ಲಾನ್ ಅನ್ವಯ, ₹151 ರೀಚಾರ್ಜ್ ಮಾಡಿಸಿದರೆ, ಬಳಕೆದಾರರಿಗೆ ಅನಿಯಮಿತ ಕರೆ, 24 ದಿನಗಳವರೆಗೆ ಪ್ರತಿನಿತ್ಯ 100 SMS ಲಭ್ಯವಿರಲಿದೆ. ಇದೆಲ್ಲಾ ಬಿಡಿ... ಡೇಟಾ ಎಷ್ಟು ಸಿಗುತ್ತೆ ಹೇಳಿ ಎಂಬೋದು ನಿಮ್ಮ ಪ್ರಶ್ನೆಯಲ್ವಾ?  ಅಭಿನಂದನ್ ಪ್ಲಾನ್‌ನಲ್ಲಿ  ಪ್ರತಿದಿನ 1GB ಡೇಟಾ ಕೂಡಾ ಸಿಗಲಿದೆ!

ಇದನ್ನೂ ಓದಿ | ಗಮನಿಸಿ.. BSNLನ ಪ್ರಮುಖ ಎರಡು ಪ್ಲ್ಯಾನ್ ಸ್ಥಗಿತ

ದೇಶಾದ್ಯಂತ BSNLನ ಎಲ್ಲಾ ವಲಯಗಳಲ್ಲಿ ಈ ಪ್ಲಾನ್ ಲಭ್ಯವಿದ್ದು, ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳಲ್ಲಿ ಅನಿಯಮಿತ ಕರೆ, STD ಮತ್ತು ರೋಮಿಂಗ್ ಕಾಲ್ ಸೌಲಭ್ಯ ಲಭ್ಯವಿದೆ.

ಅಂದ ಹಾಗೆ, ಈ ಅಭಿನಂದನ್ ಪ್ಲಾನ್ 180 ದಿವಸಗಳ ವ್ಯಾಲಿಡಿಟಿ ಹೊಂದಿದೆಯಾದರೂ, ಆಫರ್‌ಗಳು 24 ದಿನಗಳಿಗೆ ಮಾತ್ರ ಸೀಮಿತ. ಬಳಿಕ ನೀವು ಮತ್ತೆ ₹151 ರೀಚಾರ್ಜ್ ಮಾಡಿಸಿಕೊಳ್ಳಬೇಕು.