ಬಿಎಸ್ಎನ್ಎಲ್ ನಿಂದ ಬಂಪರ್ ಫ್ಯಾಮಿಲಿ ಆಫರ್..!

First Published 26, May 2018, 1:37 PM IST
BSNL Family Plan Offer many Benefits
Highlights

ಖಾಸಗಿ ಸಿಮ್ ಕಂಪನಿಗಳ ಡಾಟಾ ಯುದ್ದದ ಅಬ್ಬರದ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಹಲವು ಆಕರ್ಷಕ ಯೋಜನೆಗಳ ಮೂಲಕ ಸೈಲಾಂಟಾಗಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಹೊಸ ಹೊಸ ಆಫರ್‌ಗಳ ಮೂಲಕ ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಿದೆ.

ಬೆಂಗಳೂರು(ಮೇ. 26): ಖಾಸಗಿ ಸಿಮ್ ಕಂಪನಿಗಳ ಡಾಟಾ ಯುದ್ದದ ಅಬ್ಬರದ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಹಲವು ಆಕರ್ಷಕ ಯೋಜನೆಗಳ ಮೂಲಕ ಸೈಲಾಂಟಾಗಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಹೊಸ ಹೊಸ ಆಫರ್‌ಗಳ ಮೂಲಕ ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆಯುತ್ತಿದೆ.

ಹೊಸ ಫ್ಯಾಮಿಲಿ ಪ್ಲ್ಯಾನ್ ಯೋಜನೆ ಜಾರಿಗೊಳಿಸಿರುವ ಬಿಎಸ್ಎನ್ಎಲ್, ಬ್ರಾಡಬ್ಯಾಂಡ್ ಸೇವೆ ಅಡಿಯಲ್ಲಿ ಮೂರು ಪ್ರಿಪೇಯ್ಡ್ ಸಿಮ್ ಗಳಿಗೆ ದಿನಕ್ಕೆ 1 ಜಿಬಿ ಡಾಟಾ ಹಾಗೂ ಹಾಗೂ ಉಚಿತ ವಾಯ್ಸ್ ಕಾಲ್ ಆಫರ್ ಘೋಷಿಸಿದೆ. ಈ ಕುರಿತು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿರುವ ಬಿಎಸ್ಎನ್ಎಲ್, ಫ್ಯಾಮಿಲಿ ಪ್ಲ್ಯಾನ್ ಯೋಜನೆ ಅಡಿಯಲ್ಲಿ ಬ್ರಾಡಬ್ಯಾಂಡ್ ನ ಒಂದೇ ದರಕ್ಕೆ ಮೂರು ಸಿಮ್ ಗಳಿಗೆ ಡಾಟಾ ಮತ್ತು ವಾಯ್ಸ್ ಕಾಲ್ ಅವಕಾಶ ಒದಗಿಸಲಾಗಿದೆ ಎಂದು ಹೇಳಿದೆ.

ಈ ಮೊದಲು ಬ್ರಾಡಬ್ಯಾಂಡ್ ಸೇವೆಯಲ್ಲಿ  2Mbps ಸ್ಪೀಡ್ ನಲ್ಲಿ 30 ಜಿಬಿ ಡಾಟಾ ಕೊಡುತ್ತಿದ್ದ ಬಿಎಸ್ಎನ್ಎಲ್, ಇದೀಗ 10Mbps ಸ್ಪೀಡ್ ಗೆ 30 ಜಿಬಿ ಡಾಟಾ ನೀಡುತ್ತಿದೆ. ರೂ.1,199 ಕ್ಕೆ ಈ ಸೇವೆಯ ಜೊತೆ ಮೂರು ಪ್ರಿಪೇಯ್ಡ್ ಸಿಮ್ ಗಳಿಗೆ ಈ ಯೋಜನೆ ವಿಸ್ತರಿಸಿದೆ.

loader