ಕಾಯ್ದಿರಿಸದ ಟಿಕೆಟ್‌ ಗೋಳಿಗೆ ಗುಡ್ ಬೈ: ಬಂದಿದೆ ಯುಟಿಎಸ್ ಆ್ಯಪ್

Book train tickets via UTS app even at stations
Highlights

ಅನ್ ರಿಸರ್ವ್‌ಡ್ ಗ್ರಾಹಕರಿಗೆ ಇಂಡಿಯನ್ ರೈಲ್ವೆಯಿಂದ ಸಿಹಿ ಸುದ್ದಿಯೊಂದು ಬಂದಿದೆ. ಯುಟಿಎಸ್ ಆ್ಯಪ್ ಮೂಲಕ ಮೊಬೈಲ್‌ನಲ್ಲೇ ಟಿಕೆಟ್ ಪಡೆಯಲು ಅವಕಾಶ ಒದಗಿಸಲಾಗಿದೆ. ಕನಿಷ್ಠ 100 ರಿಂದ 10 ಸಾವಿರ ರಿಚಾರ್ಚ್ ಮಾಡಲು ಅವಕಾಶ ನೀಡಲಾಗಿದೆ.

ಬೆಂಗಳೂರು(ಮೇ 31): ಅನ್ ರಿಸರ್ವ್‌ಡ್ ಗ್ರಾಹಕರಿಗೆ ಇಂಡಿಯನ್ ರೈಲ್ವೆಯಿಂದ ಸಿಹಿ ಸುದ್ದಿಯೊಂದು ಬಂದಿದೆ. ಯುಟಿಎಸ್ ಆ್ಯಪ್ ಮೂಲಕ ಮೊಬೈಲ್‌ನಲ್ಲೇ ಟಿಕೆಟ್ ಪಡೆಯಲು ಅವಕಾಶ ಒದಗಿಸಲಾಗಿದೆ. ಕನಿಷ್ಠ 100 ರಿಂದ 10 ಸಾವಿರ ರಿಚಾರ್ಚ್ ಮಾಡಲು ಅವಕಾಶ ನೀಡಲಾಗಿದೆ.

ಅಲ್ಲದೇ ಶೇ. 5 ಕ್ಯಾಶ್ ಬ್ಯಾಕ್ ಆಫರ್ ಕೂಡ ಘೋಷಿಸಿದ್ದು, ಸ್ಟೇಷನ್‌ನಿಂದ 5 ಕಿಮೀ ಒಳಗೆ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಅನ್ ರಿಸರ್ವ್‌ಡ್ ಟಿಕೆಟಿಂಗ್ ಸಿಸ್ಟಂ (ಯುಟಿಎಸ್) ಎನ್ನುವ ಹೆಸರಿನ ಮೊಬೈಲ್ ಆ್ಯಪ್ ಅನ್ನು ದೇಶದ ಎಲ್ಲಾ ವಿಭಾಗಗಳಲ್ಲೂ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಆ ಮೂಲಕ ಕಾಗದ ರಹಿತ ಟಿಕೆಟ್, ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಅನುವು ಮಾಡಿಕೊಡುತ್ತಿದೆ.

ಇನ್ನು ಮೊಬೈಲ್ ಆ್ಯಪ್ ಅನ್ನು ಹೆಚ್ಚಿನ ಪ್ರಯಾಣಿಕರಿಗೆ ತಲುಪುವಂತೆ ಮಾಡಲು ವಿಶೇಷ ಪ್ಯಾಕೇಜ್ ನೀಡುತ್ತಿದೆ ಇಂಡಿಯನ್ ರೈಲ್ವೆ. ಪ್ರತಿ ರಿಚಾರ್ಜ್ ಮೇಲೆ ಶೇ.  5ರಷ್ಟು ಕ್ಯಾಶ್ ಬ್ಯಾಕ್ ಅವಕಾಶವಿದೆ. ಅಂದರೆ, ಆರ್-ವ್ಯಾಲೆಟ್ ಮೂಲಕ ಸಾವಿರ ರೂ. ರಿಚಾರ್ಜ್ ಮಾಡಿಕೊಂಡರೆ ಶೇ. 5ರಂತೆ 50 ರೂ. ಗಳು ಹೆಚ್ಚುವರಿಯಾಗಿ ನಿಮ್ಮ ಯುಟಿಎಸ್ ಅಕೌಂಟ್‌ಗೆ ಕ್ರೆಡಿಟ್ ಆಗಲಿದೆ.

ಶೇ. 5 ಕ್ಯಾಶ್ ಬ್ಯಾಕ್ ಆಫರ್

ಆ್ಯಪ್ ವಿಶೇಷತೆ ಜಿಪಿಎಸ್ ಮೂಲಕ ಮೊಬೈಲ್ ಲೊಕೇಷನ್ ಟ್ರ್ಯಾಕ್ ಆಗುತ್ತದೆ. ರೈಲ್ವೆ ಸ್ಟೇಷನ್‌ನಿಂದ ಐದು ಕಿಮೀ ಅಂತರದ ಒಳಗೆ ಇದ್ದಾಗ ಮಾತ್ರ ಟಿಕೆಟ್ ಬುಕ್ ಮಾಡಿಕೊಳ್ಳಲು ಸಾಧ್ಯವಾಗುವಂತೆ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಒಮ್ಮೆ ನಾವು ರೈಲ್ವೆ ಸ್ಟೇಷನ್ ಒಳಗೆ ಪ್ರವೇಶ ಪಡೆದರೆ ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ. ಬುಕ್ ಮಾಡಿದ ಟಿಕೆಟ್ ಮೂರು ಗಂಟೆಯವರೆಗೆ ವ್ಯಾಲಿಡಿಟಿ  ಹೊಂದಿರುತ್ತದೆ. 

ಒಮ್ಮೆ ಟಿಕೆಟ್ ಬುಕ್ ಮಾಡಿದರೆ ಅದು ಶೋ ಟಿಕೆಟ್ ಆಯ್ಕೆಯಲ್ಲಿ ಸಿಕ್ಕುತ್ತದೆ. ನಂತರ ಇಂಟರ್‌ನೆಟ್ ಸಂಪರ್ಕ ಇಲ್ಲದೇ ಇದ್ದರೂ ಆಫ್ ಲೈನ್‌ನಲ್ಲಿಯೇ ಅಧಿಕಾರಿಗಳಿಗೆ ಟಿಕೆಟ್ ತೋರಿಸಬಹುದು. ಕ್ಯಾನ್ಸಲ್ ಟಿಕೆಟ್ ಆಯ್ಕೆಯೂ ಇದ್ದು, ಬುಕ್ ಮಾಡಿದ ಮೂರು ಗಂಟೆಯ ಒಳಗೆ ಟಿಕೆಟ್ ಕ್ಯಾನ್ಸಲ್ ಮಾಡಿಕೊಳ್ಳಬಹುದು. ಪ್ಲೇ ಸ್ಟೋರ್, ಐಒಎಸ್‌ಗಳಲ್ಲಿ ಯುಟಿಎಸ್ ಎಂದು ಟೈಪ್ ಮಾಡಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ನಗರ ವ್ಯಾಪ್ತಿಯಲ್ಲಿ ಆ್ಯಪ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.

ಆ್ಯಪ್ ಬಳಕೆ ಹೇಗೆ? 

ಪ್ಲೇ ಸ್ಟೋರ್ ಮೂಲಕ ಯುಟಿಎಸ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಮೊಬೈಲ್ ನಂಬರ್ ನ್ನು ಎಂಟರ್ ಮಾಡಬೇಕು. ನಂತರ ರೈಲ್ವೇ ಡಿವಿಷನ್, ಬಳಕೆದಾರರ ಹೆಸರು, ಹುಟ್ಟಿದ ದಿನಾಂಕ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಲೆಕ್ಷನ್ ಐಡಿ ಅಥವಾ ಸರಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ಐಡಿ ನಂಬರ್ ಅನ್ನು ನಮೂದಿಸಬೇಕು. ಇದೆಲ್ಲವನ್ನೂ ಮಾಡಿದ ಮೇಲೆ ನಮೂದಿಸಿದ ಮೊಬೈಲ್ ನಂಬರ್‌ಗೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಬರುತ್ತದೆ. ಅದನ್ನು ನಮೂದಿಸಿದರೆ, ಅದರ ಹಿಂದೆಯೇ ಅಕೌಂಟ್ ಕ್ರಿಯೇಟ್ ಆಗಿ ತಾತ್ಕಾಲಿಕ ಪಾಸ್‌ವರ್ಡ್ ಮೆಸೇಜ್ ಮೂಲಕ ಸಿಕ್ಕುತ್ತದೆ. ಮುಂದೆ ಬೇಕಾದ ಪಾಸ್‌ವರ್ಡ್ ಅನ್ನು ಬದಲಿಸಿಕೊಳ್ಳುವ ಅವಕಾಶವೂ ಇದೆ.

ಬುಕ್ ಟಿಕೆಟ್, ಕ್ಯಾನ್ಸಲ್ ಟಿಕೆಟ್, ಬುಕ್ಕಿಂಗ್ ಹಿಸ್ಟರಿ, ಆರ್-ವ್ಯಾಲೆಟ್, ಪ್ರೋಫೈಲ್, ಶೋ ಟಿಕೆಟ್, ಲಾಗ್ ಔಟ್ ಆಯ್ಕೆಗಳಿರುವ ಪರದೆ ತೆರೆದುಕೊಳ್ಳುತ್ತದೆ. ಆರ್-ವ್ಯಾಲೆಟ್ ಆಯ್ಕೆಯ ಮೂಲಕ ನಮ್ಮ ಅಕೌಂಟ್‌ಗೆ ಕನಿಷ್ಟ ನೂರು ರೂ. ದಿಂದ ಗರಿಷ್ಟ ಹತ್ತು ಸಾವಿರ ರೂ. ವರೆಗೆ  ಪೇಟಿಎಂ, ಮೊಬೈಲ್ ಬ್ಯಾಂಕಿಂಗ್, ನೆಟ್‌ಬ್ಯಾಂಕಿಗ್ ಮೂಲಕ ರಿಚಾರ್ಜ್ ಮಾಡಿಕೊಳ್ಳಬಹುದು.

loader