ರಸ್ತೆಗಿಳಿದ BMW ಗ್ರಾನ್ ಟರಿಸ್ಮೋ ಸ್ಪೋರ್ಟ್! ಬೆಲೆ ಎಷ್ಟು?

BMW 3 Series Gran Turismo Sport Launched In India
Highlights

ಬಿಎಮ್‌ಡಬ್ಲ್ಯೂ ಕಾರು ಭಾರತದಲ್ಲಿ ನೂತನ ಕಾರು ಬಿಡುಗಡೆಗೊಳಿಸಿದೆ. ನೂತನ ಗ್ರಾನ್ ಟರಿಸ್ಮೋ ಸ್ಪೋರ್ಟ್ ಕಾರಿನ ಬೆಲೆ ಎಷ್ಟು? ಇದರ ವಿಶೇಷತೆ ಏನು? ಇಲ್ಲಿದೆ ವಿವರ

ಬೆಂಗಳೂರು(ಜು.12): ಲಕ್ಸುರಿ ಹಾಗೂ ದುಬಾರಿ ಕಾರಿನಲ್ಲಿ ಬಿಎಮ್‌ಡಬ್ಲ್ಯೂ ಭಾರತದಲ್ಲಿ ಹೆಚ್ಚು ಜನಪ್ರೀಯವಾಗಿದೆ. ಇದೀಗ ಬಿಎಮ್‌ಡಬ್ಲ್ಯೂ ಸಂಸ್ಥೆ ಭಾರತದಲ್ಲಿ ಬಿಎಮ್‌ಡಬ್ಲ್ಯೂ 3 ಸೀರಿಸ್ ಗ್ರಾನ್ ಟರಿಸ್ಮೋ ಸ್ಪೋರ್ಟ್ ಕಾರನ್ನ ಬಿಡುಗಡೆಗೊಳಿಸಿದೆ. 

ಡಿಸೆಲ್ ಇಂಜಿನ್‌ನಲ್ಲಿ ಮಾತ್ರ ಲಭ್ಯವಿರೋ ಈ ನೂತನ ಕಾರಿನ ಬೆಲೆ 46.60 ಲಕ್ಷ(ಎಕ್ಸ್ ಶೋರೂಂ). 2.0 ಲೀಟರ್ ಇಂಜಿನ್ ಹೊಂದಿರುವ ಈ ನೂತನ ಕಾರು ಆಧುನಿಕ ತಂತ್ರಜ್ಞಾನ ಹಾಗೂ ಅತ್ಯುತ್ತಮ ವಿನ್ಯಾಸ ಹೊಂದಿದೆ.

1995 ಸಿಸಿ ಇಂಜಿನ್, 4 ಸಿಲೆಂಡರ್ ಡೀಸೆಲ್ ಇಂಜಿನ್, 190 ಬಿಹೆಚ್‌ಪಿ ಪವರ್ ಹಾಗೂ 4000 ಆರ್‌ಪಿ ಹೊಂದಿದೆ. 8 ಸ್ಪೀಡ್ ಸ್ಪೋರ್ಟ್ ಅಟೋಮೆಟಿಕ್ ಟ್ರಾನ್ಸ್‌ಮಿಶನ್ ಹೊಂದಿರೋ ನೂತನ ಬಿಎಮ್‌ಡಬ್ಲ್ಯೂ 3 ಸೀರಿಸ್ ಗ್ರಾನ್ ಟರಿಸ್ಮೋ ಕಾರು 0-100 ಕೀಮಿ ತಲುಪಲು ತೆಗೆದುಕೊಂಡ ಸಮಯ ಕೇವಲ 7.7 ಸೆಕೆಂಡ್‌ಗಳು. 

ಬಿಎಮ್‌ಡಬ್ಲ್ಯೂ 3 ಸೀರಿಸ್ ಗ್ರಾನ್ ಟರಿಸ್ಮೋ  ಕಾರಿನಲ್ಲಿ 3 ವೆರೆಯೆಂಟ್‌ಗಳು ಲಭ್ಯವಿದೆ. ಟಿರಿಸ್ಮೋ ಸ್ಪೋರ್ಟ್, ಮಿಡ್ ವೇರಿಯೆಂಟ್ ಲೈನ್ ಹಾಗೂ ಟಾಪ್ ವೆರಿಯೆಂಟ್ ಎಮ್ ಸ್ಪೋರ್ಟ್ ಲಭ್ಯವಿದೆ. ಎಮ್ ಸ್ಪೋರ್ಟ್ ಟಾಪ್ ವೆರಿಯೆಂಟ್ ಬೆಲೆ 51.20 ಲಕ್ಷ(ಎಕ್ಸ್ ಶೋರೂಂ).
 

loader