ಅಕ್ಟೋಬರ್‌ನಲ್ಲಿ ಭರ್ಜರಿ ಡಿಸ್ಕೌಂಟ್-ಬೈಕ್ ಕೊಳ್ಳಲು ಇದು ಸಕಾಲ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Oct 2018, 12:15 PM IST
Bike and scooter discount in october month
Highlights

ಹಬ್ಬದ ಪ್ರಯುಕ್ತ ಬೈಕ್ ಕಂಪೆನಿಗಳ ಜೊತೆಗೆ ಶೋ ರೂಂಗಳು ಕೂಡ ಡಿಸ್ಕೌಂಟ್ ಆಫರ್ ನೀಡಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರದ ಶೋ ರೂಂಗಳು ಬೈಕ್ ಹಾಗೂ ಸ್ಕೂಟರ್ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದೆ. ಅಕ್ಟೋಬರ್ ತಿಂಗಳ ಡಿಸ್ಕೌಂಟ್ ವಿವರ ಇಲ್ಲಿದೆ.

ನವದೆಹಲಿ(ಅ.09): ಅಕ್ಟೋಬರ್‌ನಲ್ಲಿ ಸಾಲು ಸಾಲು ಹಬ್ಬಗಳಿಂದ ಬೈಕ್ ಹಾಗೂ ಸ್ಕೂಟರ್‌ ಕೊಳ್ಳಲು ಸಕಾಲ. ಬೆಂಗಳೂರು ಸೇರಿದಂತ ದೇಶದ  ಪ್ರಮುಖ ನಗರಗಳ  ಹಲವು ಶೋ ರೂಂಗಳು  ಈಗಾಗಲೇ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಅಕ್ಟೋಬರ್ ತಿಂಗಳ ಡಿಸ್ಕೌಂಟ್ ಆಫರ್ ಕುರಿತ ಮಾಹಿತಿ ಇಲ್ಲಿದೆ.

ಹೊಂಡಾ:
ಸಿಲಿಕಾನ್ ಹೊಂಡಾ ಬೆಂಗಳೂರು ಹಾಗೂ ಝಾವೆರಿ ಹೊಂಡಾ ಮುಂಬೈ ಶೋ ರೂಂಗಳು ಹೊಂಡಾ ಎವಿಯೇಟರ್ ಹಾಗೂ ಆಕ್ಟೀವಾ 125 ಸ್ಕೂಟರ್‌ಗೆ 2,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.

ಹೀರೋ ಮೋಟಾರ್‌ಕಾರ್ಪ್:
ಬೆಂಗಳೂರು(ನಿಧಿ), ಮುಂಬೈ(ಫೋರ್ಟ್ ಪಾಯಿಂಟ್), ಕೋಲ್ಕತ್ತಾ(ಹೈ ಟೆಕ್) ಶೋ ರೂಂ ಹೀರೋ ಮೋಟಾರ್ ಕಾರ್ಪ್ ಬೈಕ್‌ಗಳಿಗೆ 3000  ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.

ಸುಜುಕಿ:
ಬೆಂಗಳೂರಿನ ನೈನ್ ಸ್ಟಾರ್ ಸುಜುಕಿ ಶೋ ರೂಂ ಸುಜುಕಿ ಜಿಕ್ಸರ್ ಬೈಕ್‌ಗೆ 9,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಇಂಟ್ರುಡರ್ ಬೈಕ್‌ಗೆ 14,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಮುಂಬೈ ಸುಜುಕಿ ಶೋ ರೂಂಗಳಲ್ಲಿ 8000 -10,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಬಜಾಜ್ :
ಬಜಾಜ್ ಆಟೋ ಕಂಪೆನಿ ತನ್ನ ಎಲ್ಲಾ ಬೈಕ್‌ಗಳಿಗೆ 5-5-5 ಸ್ಕೀಮ್ ಆಫರ್ ಘೋಷಿಸಿದೆ. ಈ ಆಫರ್ ಮೂಲಕ ಗ್ರಾಹಕರಿಗೆ 5 ವರ್ಷದ ಉಚಿತ ಡ್ಯಾಮೇಜ್ ಇನ್ಶುರೆನ್ಸ್, 5 ವರ್ಷ ಫ್ರೀ ಸರ್ವೀಸ್ ಹಾಗೂ 5 ವರ್ಷ ಫ್ರೀ ವಾರೆಂಟಿ ನೀಡಿದೆ. ಈ ಮೂಲಕ ಬಜಾಜ್ ಗ್ರಾಹಕರು 9,800 ರೂಪಾಯಿ ಉಳಿತಾಯ ಮಾಡಬಹುದಾಗಿದೆ.

ಯಮಹಾ:
ಚೆನ್ನೈನ ವಾಲ್ಟರ್ ಯಮಹಾ ಶೋ ರೂಂ ಯಮಹಾ ಬೈಕ್‌ಗಳ 2500 ರೂಪಾಯಿ ಮೌಲ್ಯದ ಆಕ್ಸೆಸರಿ ಕಿಟ್ ಡಿಸ್ಕೌಂಟ್ ನೀಡಿದೆ.

loader