ಜಿಯೋ ಲೈವ್ ಟಿವಿ ಮಕಾಡೆ ಮಲಗಿಸಲು BSNL ಬಳಿ ಮಹಾ ಅಸ್ತ್ರ; ನೆಟ್ ಸ್ಲೋ ಆದ್ರೂ ಸಿಗುತ್ತೆ ಲೈವ್ ಸ್ಟ್ರೀಮಿಂಗ್

ಬಿಎಸ್‌ಎನ್‌ಎಲ್ ಶೀಘ್ರದಲ್ಲೇ ಕಮರ್ಷಿಯಲ್ ಲೈವ್ ಟಿವಿ ಸೇವೆಯನ್ನು ಆರಂಭಿಸಲಿದೆ. ಈ ಸೇವೆಯ ಪ್ರಾಯೋಗಿಕ ಟೆಸ್ಟಿಂಗ್ ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ನಡೆಯಲಿದ್ದು, BSNL FTTH ಬಳಕೆದಾರರಿಗೆ ಲಭ್ಯವಾಗಲಿದೆ.

Bharat Sanchar Nigam Limited is launching Live TV service commercially soon mrq

ನವದೆಹಲಿ: ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್) ಸರ್ಕಾರದಿಂದ ನಡೆಯುತ್ತಿರುವ ಟೆಲಿಕಾಂ ಕಂಪನಿಯಾಗಿದೆ. 4G ಮತ್ತು 5G ಸೇವೆಗಳ ಆರಂಭಿಸುವ ಹೊತ್ತಿನಲ್ಲಿಯೇ ಬಿಎಸ್‌ಎನ್ಎಲ್ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಬಿಎಸ್‌ಎನ್‌ಎಲ್ 5G ಸ್ಮಾರ್ಟ್‌ಫೋನ್ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಸುದ್ದಿಗಳು ಪ್ರಕಟವಾಗಿದ್ದವು. ಇದೀಗ ಬಿಎಸ್‌ಎನ್‌ಎಲ್ ಮತ್ತೊಂದು ಹೆಜ್ಜೆ ಮುಂದಿರಿಸಿದ್ದು, ಕಮರ್ಷಿಯಲ್ ಲೈವ್ ಟಿವಿ ಸರ್ವಿಸ್ ಶೀಘ್ರದಲ್ಲಿಯೇ ಆರಂಭಿಸಲಿದೆ. ಈ ಸೇವೆಯ ಪ್ರಾಯೋಗಿಕ ಟೆಸ್ಟಿಂಗ್ ತಮಿಳು ನಾಡು ಮತ್ತು ಮಧ್ಯಪ್ರದೇಶದ ವ್ಯಾಪ್ತಿಯಲ್ಲಿ ನಡೆಯಲಿದೆ.

ಬಿಎಸ್‌ಎನ್ಎಲ್ ಈ ಸೇವೆಗೆ "ಫಸ್ಟ್ ಇನ್ ಇಂಡಿಯಾ" ಎಂದು ಹೆಸರಿಟ್ಟಿದೆ. ಆದ್ರೆ ಟೆಲಿಕಾಂ ಅಂಗಳದಲ್ಲಿ ಜಿಯೋ ಬಳಕೆದಾರರಿಗೆ  JioTV+ ಸರ್ವಿಸ್ ಲಭ್ಯವಿದೆ. ಭವಿಷ್ಯದಲ್ಲಿ ಬಳಕೆದಾರರು "first in India" ಹೇಗೆ ಸ್ವೀಕರಿಸಬಹುದು? ಈ ಸೇವೆಯ ಬೆಲೆ ಎಷ್ಟು ಎಂಬಿತ್ಯಾದಿಯ ಮಾಹಿತಿ ಈ ಲೇಖನದಲ್ಲಿದೆ. 

ಲೈವ್ ಟಿವಿ ಸರ್ವಿಸ್ ಆರಂಭಕ್ಕೆ ಮತ್ತೊಂದು ಕಂಪನಿಯ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಟೆಲಿಕಾಂ ಟಾಕ್ ಜೊತೆ ಮಾತನಾಡಿರುವ ಅಧಿಕಾರಿಯೊಬ್ಬರು, ಮೊದಲು ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ಲೈವ್ ಟಿವಿ ಕಮಿಷನಿಂಗ್ ಆರಂಭವಾಗಲಿದೆ. ಒಮ್ಮೆ ಈ ಸೇವೆ ಆರಂಭವಾದ್ರೆ ಹಂತ ಹಂತವಾಗಿ ದೇಶದ ಎಲ್ಲಾ ಭಾಗಕ್ಕೂ ವಿಸ್ತರಿಸಲಾಗುವುದು. ಈ ಸೇವೆ ಕೇವಲ  BSNL FTTH (Fiber-to-the-Home)  ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ :ಅತಿ ಕಡಿಮೆ ಬೆಲೆಯಲ್ಲಿ ಜಿಯೋದಿಂದ 108MP ಕ್ಯಾಮೆರಾ, 6600mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್

JioTV+ ಸಂಪೂರ್ಣವಾಗಿ HLS ಆಧರಿತ  ಸ್ಟ್ರೀಮಿಂಗ್ ಆಗಿದ್ದು, ಇಂಟರ್‌ನೆಟ್ ಬಳಕೆದಾರರಿಗೆ ಈ ಸೇವೆಯನ್ನು ನೀಡಲಾಗುತ್ತಿದೆ. ಈ ಸೇವೆ ಬಳಕೆ ಮಾಡಿದಾಗ ಗ್ರಾಹಕರ ಡೇಟಾ ಪ್ಲಾನ್‌ನಿಂದ ಇಂಟರ್‌ನೆಟ್ ಬಳಸಲಾಗುತ್ತದೆ. ಆದರೆ ಫಸ್ಟ್ ಇನ್ ಇಂಡಿಯಾ ಆ ರೀತಿಯಾಗಿರಲ್ಲ. BSNL FTTH ಬಳಕೆದಾರರ ಇಂಟರ್‌ನೆಟ್ ಸ್ಲೋ ಆಗಿದ್ದರೂ ಲೈವ್ ಸ್ಟ್ರೀಮಿಂಗ್ ಆಗಿರುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಭವಿಷ್ಯದಲ್ಲಿ FTTH ಪ್ಲಾನ್ ಜೊತೆಯಲ್ಲಿಯೇ ಲೈವ್ ಸ್ಟ್ರೀಮಿಂಗ್ ಸಹ ಲಭ್ಯವಾಗುವ ಸಾಧ್ಯತೆಗಳಿವೆ.

ಸದ್ಯ ಬಿಎಸ್‌ಎನ್ಎಲ್ ಲೈವ್ ಟಿವಿ ಆಪ್ ಕೇವಲ ಆಂಡ್ರಾಯ್ಡ್ ಟಿವಿ ಪ್ಲಾಟ್‌ಫಾರಂಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಲೈವ್ ಟಿವಿ ಚಾನೆಲ್‌ಗಳ ಜೊತೆಗೆ VOD (ವಿಡಿಯೋ ಆನ್ ಡಿಮ್ಯಾಂಡ್) ಸೇವೆಯನ್ನು ಸಹ ಒಳಗೊಂಡಿರುತ್ತದೆ. ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಎಸ್‌ಎನ್ಎಲ್ ಲೈವ್ ಟಿವಿ ಆಪ್ ಲಾಗಿನ್ ಆಗಬಹುದು. ಲಾಗಿನ್‌ನಲ್ಲಿ FTTH ಖರೀದಿಯ ಸಂಖ್ಯೆ ಮತ್ತು ನಿಮ್ಮ ಮೊಬೈಲ್‌ಗೆ ಬರೋ  OTP ಎಂಟ್ರಿ ಮಾಡಿದಾಗ ಲಾಗಿನ್ ಆಗುತ್ತದೆ. 

ಇದನ್ನೂ ಓದಿ: ಮಾರುಕಟ್ಟೆಗೆ ಬರ್ತಿದೆ ಬಿಎಸ್‌ಎನ್‌ಎಲ್ 5G ಸ್ಮಾರ್ಟ್‌ಫೋನ್: ಏನಿದರ ವಿಶೇಷ? ಬೆಲೆ ಎಷ್ಟು?

Latest Videos
Follow Us:
Download App:
  • android
  • ios