ಬೆಂಗಳೂರು ಟೆಕ್ ಕಂಪನಿಯಿಂದ ಎಲೆಕ್ಟ್ರಿಕ್ ಬೈಕ್

technology | Sunday, May 27th, 2018
Suvarna Web Desk
Highlights

ಬೆಂಗಳೂರು ಮೂಲದ ಟೆಕ್ ಸ್ಟಾರ್ಟ್ ಅಪ್ ಕಂಪನಿಯೊಂದು ಎಲೆಕ್ಟ್ರಿಕ್ ಬೈಕ್ ವೊಂದನ್ನು ನಿರ್ಮಿಸುತ್ತಿದೆ.  ಒಂದು ಸಲ ರಿಚಾರ್ಜ್ ಮಾಡಿದರೆ 500 ಕಿ.ಮೀ ಓಡಬಲ್ಲ ಸಾಮರ್ಥ್ಯ ಈ ಬೈಕ್ ಇರಲಿದೆ.

ಬೆಂಗಳೂರು (ಮೇ.27): ಬೆಂಗಳೂರು ಮೂಲದ ಟೆಕ್ ಸ್ಟಾರ್ಟ್ ಅಪ್ ಕಂಪನಿಯೊಂದು ಎಲೆಕ್ಟ್ರಿಕ್ ಬೈಕ್ ವೊಂದನ್ನು ನಿರ್ಮಿಸುತ್ತಿದೆ.  ಒಂದು ಸಲ ರಿಚಾರ್ಜ್ ಮಾಡಿದರೆ 500 ಕಿ.ಮೀ ಓಡಬಲ್ಲ ಸಾಮರ್ಥ್ಯ ಈ ಬೈಕ್ ಇರಲಿದೆ.

ಹೌದು ಬೆಂಗಳೂರು ಮೂಲದ ಮ್ಯಾನಕಾಮೆ ಇಪಿ-1 ಎಂಬ ಟೆಕ್ ಸ್ಟಾರ್ಟ್ ಅಪ್ ಕಂಪನಿ ಈ ಬೈಕ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, ಗಂಟೆಗೆ 250 ಕಿ.ಮೀ ದೂರ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.  ಅಲ್ಲದೇ ಈ ಬೈಕ್ ನಿರ್ಮಾಣ ಕಾರ್ಯಕ್ಕೆ  ಸಾವರ್ವಜನಿಕರಿಂದ ದೇಣಿಗೆ ಕೂಡ ಸಂಗ್ರಹಿಸುತ್ತಿದೆ.

18.4 kWh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಕಡಿಮೆ ವಿದ್ಯುತ್ ಬಳಕೆಯಾಗಲಿದೆ ಎನ್ನಲಾಗಿದೆ. ಈಗಾಗಲೇ ಬೈಕ್ ನಿರ್ಮಾಣ ಕಾರ್ಯ ಮುಂದುವರೆದಿದ್ದು, ಶೀಘ್ರದಲ್ಲೇ ಮೊದಲ ಭಾರತೀಯ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಅಪ್ಪಳಿಸಲಿದೆ. ಈ ಎಲೆಕ್ಟ್ರಿಕ್ ಬೈಕ್ ಕುರಿತು ಇನ್ನಷ್ಟು ಮಾಹಿತಿಗಳು ಹೊರಬೀಳಬೇಕಿದ್ದು,  ಮ್ಯಾನಕಾಮೆ ಕಂಪನಿ ಈ ಬೈಕ್ ತಂತ್ರಜ್ಞಾನದ ಕುರಿತು ಮತ್ತಷ್ಟು ಮಾಹಿತಿ ನೀಡಲಿದೆ.

Comments 0
Add Comment

  Related Posts

  Election Bulletin Part 1

  video | Wednesday, April 11th, 2018

  Lingayath Religion Suvarna News Survey Part 1

  video | Wednesday, April 11th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Sujatha NR