ಬಜಾಜ್ ಕಂಪೆನಿಯ ಜನಪ್ರೀಯ ಬೈಕ್‌ ಪಲ್ಸಾರ್ ಇನ್ಮುಂದೆ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಪಲ್ಸಾರ್ 125 ಸಿಸಿ ಬೈಕ್ ಹಾಗೂ ಪ್ಲಾಟಿನ 125 ಸಿಸಿ ಬೈಕ್ ಬಿಡುಗಡೆಗೆ ಬಜಾಜ್ ಸಿದ್ದವಾಗಿದೆ. ಹಾಗಾದರೆ ಈ ಬೈಕ್‌ಗಳ ವಿಶೇಷತೆ ಇಲ್ಲಿದೆ.

ಬೆಂಗಳೂರು(ಜು.31): ಭಾರತದ ಖ್ಯಾತ ಬೈಕ್ ತಯಾರಿಕ ಕಂಪೆನಿ ಬಜಾಜ್ ಇದೀಗ 110 ಹಾಗೂ 125 ಸಿಸಿ ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಮಧ್ಯಮ ವರ್ಗದ ಜನರನ್ನ ಆಕರ್ಷಿಸಿದ್ದ ಬಜಾಬ್ ಪ್ಲಾಟಿನ ಹಾಗೂ 135 ಸಿಸಿ ಪಲ್ಸಾರ್ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ.

ಪ್ಲಾಟಿನ ಹಾಗೂ ಪಲ್ಸಾರ್ ಇದೀಗ 125 ಸಿಸಿ ಇಂಜಿನ್‌ಗಳಲ್ಲೂ ಲಭ್ಯವಾಗಲಿದೆ. ಈ ಮೂಲಕ ಮುಂಬರವ ದಿನಗಳಲ್ಲಿ ಶೇಕಡಾ 20 ರಷ್ಟು ಮಾರಾಟದಲ್ಲಿ ಏರಿಕೆ ಕಾಣಲು ಬಜಾಜ್ ಯೋಜನೆ ಹಾಕಿಕೊಂಡಿದೆ. 4 ವ್ಯಾಲ್ಯೂ ಸಿಂಗಲ್ ಸಿಲಿಂಡರ್ ಇಂಜಿನ್, 13 ಬಿಹೆಚ್‌ಪಿ ಪವರ್‌ನಿಂದ 9000 ಆರ್‌ಪಿಎಮ್ ಹಾಗೂ 10.8 ಎನ್‌ಎಮ್ ಟಾರ್ಕ್ಯೂ ಉತ್ಪಾದಿಸೋ ಇಂಜಿನ್ ಅಳವಡಿಸಲು ಬಜಾಜ್ ನಿರ್ಧರಿಸಿದೆ. 5 ಸ್ವೀಡ್ ಗೇರ್ ಕೂಡ ಹೊಂದಿರಲಿದೆ.

ಬಜಾಬ್ ಕಂಪೆನಿಯ ಪಲ್ಸಾರ್ ಬೈಕ್ ಅತ್ಯಂತ ಜನಪ್ರೀಯ ಬೈಕ್. ಜನಸಾಮಾನ್ಯರಿಗೆ ಪಲ್ಸಾರ್ ತಲುಪಿಸಲು ಇದೀಗ 125 ಸಿಸಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೂಲಕ ಕಡಿಮೆ ಬೆಲೆಗೆ ಜನಸಾಮಾನ್ಯರು ಪಲ್ಸಾರ್ ಖರೀದಿಸಲು ಅವಕಾಶವಾಗಲಿದೆ ಎಂದು ಕಂಪೆನಿ ಹೇಳಿದೆ.

125 ಸಿಸಿ ಪ್ಲಾಟಿನ ಹಾಗೂ ಪಲ್ಸಾರ್ ಮೈಲೇಜ್ ಕೂಡ ಪ್ರಾಮುಖ್ಯತೆ ಪಡೆಯಲಿದೆ. ಕಾರಣ ಪ್ಲಾಟಿನಂ 100 ಸಿಸಿ ಬೈಕ್ ಗರಿಷ್ಠ ಮೈಲೇಜ್‌ನಿಂದ ಗ್ರಾಹಕರ ಮನಗೆದ್ದಿತ್ತು. ಇದೀಗ ನೂತನ 125 ಸಿಸಿ ಬೈಕ್ ಕೂಡ ಅತ್ಯುತ್ತಮ ಮೈಲೇಜ್ ನೀಡಲಿದೆ ಎಂದಿದೆ. ಆದರೆ ಸದ್ಯ ಕಂಪೆನಿ ಈ ನೂತನ ಬೈಕ್‌ಗಳ ಬೆಲೆ ನಿಗಧಿಪಡಿಸಿಲ್ಲ. 2019ರ ಆರಂಭದಲ್ಲೇ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಬಜಾಜ್ ಹೇಳಿದೆ.