Asianet Suvarna News Asianet Suvarna News

ಹೊಸ ಅವತಾರದಲ್ಲಿ ಬರುತ್ತಿದೆ ಬಜಾಜ್ ಡೊಮಿನಾರ್!

ಬಜಾಜ್ ಕಂಪೆನಿಯ 400 ಸಿಸಿ ಡೊಮಿನಾರ್ ಬೈಕ್ ಮತ್ತೆ ಬಿಡುಗಡೆಯಾಗುತ್ತಿದೆ. ಈ ಬಾರಿ  ಕೆಲ ಬದಲಾವಣೆಗಳೊಂದಿಗೆ ಡೊಮಿನಾರ್ ರಸ್ತೆಗಳಿಯುತ್ತಿದೆ. ನೂತನ ಬಜಾಜ್ ಡೊಮಿನಾರ್ ಬೈಕ್ ವಿಶೇಷತೆ, ಬೆಲೆ?

Bajaj Dominar to launch in India with a Major upgrade soon
Author
Bengaluru, First Published Sep 19, 2018, 4:23 PM IST
  • Facebook
  • Twitter
  • Whatsapp

ಬೆಂಗಳೂರು(ಸೆ.19): ಬಜಾಜ್ ಮೋಟಾರು ಸಂಸ್ಥೆ ಮೋಸ್ಟ್ ಪವರ್‌ಫುಲ್ ಬೈಕ್ ಡೊಮಿನಾರ್ ಇದೀಗ ಕೆಲ ಬದಲಾವಣೆಗಳೊಂದಿಗೆ ಮತ್ತೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಮಾರುಕಟ್ಟೆ, ರಾಯಲ್ ಎನ್‌ಫೀಲ್ಡ್ 230, ಡ್ಯುಕ್ 390, ಮೋಡೋ ಎಕ್ಸ್‌ಟಿ 300 ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

Bajaj Dominar to launch in India with a Major upgrade soon

ಬಜಾಜ್ ಡೊಮಿನಾರ್ ಮೊದಲ ಬಾರಿಗೆ 2016ರಲ್ಲಿ ಮಾರುಕಟ್ಟೆ ಪ್ರವೇಶಿಸಿತ್ತು. ಸ್ಪೋರ್ಟ್ಸ್ ಬೈಕ್ ಪ್ರೀಯರ ನೆಚ್ಚಿನ ಬೈಕಾಗಿ ಬದಲಾಗಿರುವ ಡೊಮಿನಾರ್ ಇದೀಗ ಕೆಲ ಬದಲಾವಣೆಯೊಂದಿಗೆ ರಸ್ತೆಗಳಿಯುತ್ತಿದೆ.

Bajaj Dominar to launch in India with a Major upgrade soon

ಉತ್ತಮ ರೈಡ್, ಸ್ಮೂತ್ ಇಂಜಿನ್ ಹೆಚ್ಚು ಆರಾಮದಾಯಕ ಪ್ರಯಾಣಕ್ಕಾಗಿ ಡೊಮಿನಾರ್ ಇಂಜಿನ್ ಹಾಗು ಕೆಲ ಬಿಡಿಭಾಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಸ್ಪೀಡ್ ಅಪ್‌ಗ್ರೇಡ್ ಜೊತೆಗೆ ಬಿಎಸ್-ವಿಐ ಇಂಜಿನ್‌ ಸೇರಿದಂತೆ ಸಣ್ಣ ಬದಲಾಣೆಗಳೊಂದಿಗೆ ಬಿಡುಗಡೆಯಾಗುತ್ತಿದೆ.

ಎಬಿಎಸ್ ಸೇರಿದಂತೆ ಹೊಸ ತಂತ್ರಜ್ಞಾನಗಳು ಈಗಾಗಲೇ ಬೈಕ್ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿದೆ. ನೂತನ ಬೈಕ್ ಮೈಲೇಜ್ ಪ್ರತಿ ಲೀಟರ್ ಪೆಟ್ರೋಲ್‌ಗೆ ಸರಿಸುಮಾರು 25 ಕೀಲೋಮೀಟರ್ ಕ್ರಮಿಸಲಿದೆ.  ಡೊಮಿನಾರ್ ಬೆಲೆ 1.62 ಲಕ್ಷ(ಎಕ್ಸ್ ಶೋ ರೂಂ) ರೂಪಾಯಿ.

Follow Us:
Download App:
  • android
  • ios