ಬಜಾಜ್‌ ಬೈಕ್ 5-5-5 ಸ್ಕೀಮ್-ಗ್ರಾಹಕರಿಗೆ ಬಂಪರ್ ಆಫರ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Oct 2018, 11:11 AM IST
Bajaj bike Auto Offers 5 5 5 Festive Scheme for customer
Highlights

ಬಜಾಜ್ ಬೈಕ್ ಖರೀದಿಸೋ ಗ್ರಾಹಕರಿಗೆ ಕಂಪೆನಿ ಹೊಸ ಆಫರ್ ನೀಡಿದೆ. ಬಜಾಜ್ ಘೋಷಿಸಿರುವ 5-5-5 ಸ್ಕೀಮ್ ವಿಶೇಷತೆ ಏನು? ಇದರ ಷರತ್ತುಗಳೇನು? ಇಲ್ಲಿದೆ ವಿವರ.

ಬೆಂಗಳೂರು(ಅ.08): ಹಬ್ಬದ ಪ್ರಯುಕ್ತ ಬಜಾಜ್ ಆಟೋ ಕಂಪೆನಿ ತಮ್ಮ ಬೈಕ್‌ಗಳಿಗೆ ವಿಶೇಷ ಸ್ಕೀಮ್ ಘೋಷಿಸಿದೆ. 5-5-5 ನೂತನ ಸ್ಕೀಮ್ ಘೋಷಿಸಿರು ಬಜಾಜ್ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ.

5-5-5 ಸ್ಕೀಮ್ ಪ್ರಕಾರ ಬಜಾಬ್ ಬೈಕ್ ಖರೀದಿಸೋ ಗ್ರಾಹಕರಿಗೆ 5 ವರ್ಷದ ಉಚಿತ ಡ್ಯಾಮೇಜ್ ಇನ್ಶುರೆನ್ಸ್, 5 ವರ್ಷ ಫ್ರೀ ಸರ್ವೀಸ್ ಹಾಗೂ 5 ವರ್ಷ ಫ್ರೀ ವಾರೆಂಟಿ ನೀಡಿದೆ. ಈ ಮೂಲಕ ಬಜಾಜ್ ಗ್ರಾಹಕರು 9,800 ರೂಪಾಯಿ ಉಳಿತಾಯ ಮಾಡಬಹುದಾಗಿದೆ. 

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ಅಸ್ಸಾಂಗಳಲ್ಲಿ ಬೈಕ್ ಖರೀದಿಸೋ ಗ್ರಾಹಕರಿಗೆ ಎಲ್ಲಾ ಬಜಾಜ್ ಪಲ್ಸಾರ್ ಮಾಡೆಲಗಳಿಗೆ ಈ ಆಫರ್ ಅನ್ವಯವಾಗಲಿದೆ. ಈ ರಾಜ್ಯ ಹೊರತು ಪಡಿಸಿದರೆ ಕೆಲ ಪಲ್ಸಾರ್ ಬೈಕ್‌ಗಳಿಗೆ ಮಾತ್ರ 5-5-5 ಸ್ಕೀಮ್ ಅನ್ವಯವಾಗಲಿದೆ. ಅಕ್ಟೋಬರ್ 5 ರಿಂದ ಬಜಾಬ್ ನೂತನ ಸ್ಕೀಮ್ ಜಾರಿಯಾಗಿದೆ. 

loader