ಬಜಾಜ್‌ ಬೈಕ್‌ಗಳಿಗೆ ಫ್ರೀ ಸರ್ವೀಸ್ !ಕೆಲ ದಿನಗಳು ಮಾತ್ರ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Aug 2018, 8:03 PM IST
Bajaj Auto launches free of cost service campaign in Kerala
Highlights

ಬಜಾಜ್ ಬೈಕ್‌ಗಳ ಸರ್ವೀಸ್ ಫುಲ್ ಫ್ರೀ. ಯಾವುದೇ ಶುಲ್ಕವಿಲ್ಲ. ಬೈಕ್‌ನ ಸಣ್ಣ ಪುಟ್ಟ ರಿಪೇರಿ, ಫಿಲ್ಟರ್ ಹಾಗೂ ಗಾಸ್ಕೆಟ್ ರಿಪೇರಿ, ಇಂಜಿನ ಫ್ಲಶಿಂಗ್, ಕೆಟ್ಟು ಹೋಗಿರೋ ಬಿಡಿ ಭಾಗಗಳ ಬದಲಾವಣೆ ಸೇರಿದಂತೆ ಎಲ್ಲಾ ಸರ್ವೀಸ್‌ಗೆ ಯಾವುದೇ ಶುಲ್ಕವಿಲ್ಲ. ಆದರೆ ಕಂಡೀಷನ್ ಒಂದೇ. ಅದೇನು? ಇಲ್ಲಿದೆ.

ತಿರುವನಂತಪುರಂ(ಆ.27): ಕೇರಳ ಪ್ರವಾಹದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಮೋಟಾರು ಕಂಪೆನಿಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದೆ.  ಬಜಾಜ್ ಮೋಟಾರ್ ಕಂಪೆನಿ ಕೇರಳ ಸಂತ್ರಸ್ತರ ನಿಧಿಗೆ 2 ಕೋಟಿ  ರೂಪಾಯಿ ನೀಡಿತ್ತು.

ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿದ ಬೆನ್ನಲ್ಲೇ, ಬಜಾಬ್ ಕೇರಳ ಬಜಾಜ್ ಗ್ರಾಹಕರಿಗೆ ಫ್ರೀ ಸರ್ವೀಸ್ ನೀಡಲು ನಿರ್ಧರಿಸಿದೆ. ಮಳೆ ಹಾಗೂ ಪ್ರವಾಹದಿಂದ ಕೆಟ್ಟು ಹೋಗಿರುವ ಬಜಾಜ್ ಬೈಕ್‌ಗಳನ್ನ ಯಾವುದೇ ಶುಲ್ಕವಿಲ್ಲದೆ ರೆಪೇರಿ ಹಾಗೂ ಸರ್ವೀಸ್ ಮಾಡಲು ಬಜಾಜ್ ಮೋಟಾರು ಸಂಸ್ಥೆ ಮುಂದಾಗಿದೆ.

ಬೈಕ್‌ನ ಸಣ್ಣ ಪುಟ್ಟ ರಿಪೇರಿ, ಫಿಲ್ಟರ್ ಹಾಗೂ ಗಾಸ್ಕೆಟ್ ರಿಪೇರಿ, ಇಂಜಿನ ಫ್ಲಶಿಂಗ್, ಕೆಟ್ಟು ಹೋಗಿರೋ ಬಿಡಿ ಭಾಗಗಳ ಬದಲಾವಣೆ, ಇಂಜಿನ್ ಆಯಿಲ್, ಫಿಲ್ಟರ್ ಬದಲಾವಣೆ ಸೇರಿದಂತೆ ಸರ್ವೀಸ್ ಕೂಡ ಫ್ರೀಯಾಗಿ ಮಾಡಲು ಬಜಾಜ್ ನಿರ್ಧರಿಸಿದೆ.

ಪ್ರವಾಹದಿಂದ ಹಾಳಾಗಿರುವ ಬಜಾಜ್ ಬೈಕ್‌ಗಳನ್ನ ಸರ್ವೀಸ್ ಹಾಗೂ ರಿಪೇರಿಗೆ ಇತರ ರಾಜ್ಯದ ಟಿಕ್ನಿಶಿಯನ್, ಮೆಕಾನಿಕ್‌ಗಳನ್ನ ಬಜಾಜ್ ಮೋಟಾರು ಸಂಸ್ಥೆ ಕೇರಳಗೆ ಕಳುಹಿಸಿಕೊಟ್ಟಿದೆ. ಈ ಮೂಲಕ ಕೇರಳ ಜನತೆಗೆ ಸಹಾಯದ ನೆರವು ನೀಡಿದೆ.

loader