ಕಸ್ಟಮೈಸಡ್ ಹಾಗೂ ಲಕ್ಸುರಿ ಬೈಕ್‌ಗಳಿಗಾಗಿ ಬೆಂಗಳೂರು ಜನ ಬೇರೆ ದೇಶ ಅಲೆದಾಡಬೇಕಿಲ್ಲ. ಆಮದು ಸುಂಕ ಕಟ್ಟಬೇಕಾಗಿಲ್ಲ. ಯಾಕೆಂದರೆ ಈಗ ಅವಂತುರ ಚಾಪರ್ಸ್ ಬೈಕ್ ಬೆಂಗಳೂರಿನಲ್ಲಿ ಶೋ ರೂಂ ತೆರೆದಿದೆ.

ಬೆಂಗಳೂರು(ಆ.24): ಕ್ಯಾಲಿಪೋರ್ನಿಯಾ ಮೂಲಕ ಚಾಪರ್ಸ್ ಬೈಕ್ ಇದೀಗ ಬೆಂಗಳೂರಿಗೆ ಕಾಲಿಟ್ಟಿದೆ. ಅವಂತುರ ಚಾಪರ್ಸ್ ಬೈಕ್ ಕಂಪೆನಿ ಬೆಂಗಳೂರಿನಲ್ಲಿ ಮೊದಲ ಶೋಂ ರೂಂ ಆರಂಭಿಸಿದೆ.

Scroll to load tweet…

ಕಸ್ಟಮೈಸಡ್ ಬೈಕ್‌ಗಳಿಗೆ ಹೆಸರುವಾಸಿಯಾಗಿರೋ ಅವಂತುರ ಚಾಪರ್ಸ್ ಬೈಕ್‌ನ್ನ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಿಲ್ಲ. ಇದೀಗ ಬೆಂಗಳೂರಿನಲ್ಲೇ ಅವಂತುರ ಚಾಪರ್ಸ್ ಬೈಕ್ ಲಭ್ಯವಿದೆ. ಇನ್ನು ದೆಹಲಿ ಹಾಗೂ ಹೈದರಾಬಾದ್‌ನಲ್ಲೂ ಶೋ ರೂಂ ಆರಂಭ ಮಾಡೋಲು ಕಂಪೆನಿ ಚಿಂತನೆ ನಡೆಸಿದೆ.

ಬೆಂಗಳೂರು ಶೋಂ ರೂಂನಲ್ಲಿ 2000 ಸಿಸಿ ಇಂಜಿನ ಸಾಮರ್ಥ್ಯದ ಪ್ರವೇಗ ಹಾಗೂ ರುದ್ರ ಎರುಡು ವಿದಧ ಬೈಕ್ ಲಭ್ಯವಿದೆ. ಪ್ರವೇಗ ಬೈಕ್ ಬೆಲೆ 21.4 ಲಕ್ಷ ರೂಪಾಯಿ. ಇನ್ನು ರುದ್ರ 23.9 ಲಕ್ಷ ರೂಪಾಯಿ (ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ, ಮುಂಬೈ).

Scroll to load tweet…

ದಕ್ಷಿಣ ಭಾರತದಲ್ಲಿ ಕಸ್ಟಮೈಸಡ್ ಬೈಕ್‌ಗಳಿಗೆ ಭಾರಿ ಬೇಡಿಕೆ ಇದೆ. ಗ್ರಾಹಕರ ಬೇಡಿಕೆಯನ್ನ ಅವಂತುರ ಚಾಪರ್ಸ್ ಈಡೇರಿಸಲಿದೆ. ಬೆಂಗಳೂರಿನ ನೂತನ ಶೋ ರೂಂನಲ್ಲಿ ಗ್ರಾಹಕರಿಗೆ ಬೈಕ್ ಖರೀದಿಸಲು ಹಾಗೂ ಪರೀಕ್ಷಿಸಲು ಅವಕಾಶವಿದೆ ಎಂದು ಅವಂತುರ ಚಾಪರ್ಸ್ ಸಿಇಒ ಗೌರವ್ ಎ. ಅಗರ್ವಾಲ್ ಹೇಳಿದ್ದಾರೆ.