ಬೆಂಗಳೂರು(ಜು.10): ಭಾರತದಲ್ಲಿ ಹ್ಯುಂಡೈ ಸ್ಯಾಂಟ್ರೋ ಕಾರು ಬರೋಬ್ಬರಿ 2 ದಶಕಗಳ ಕಾಲ ಅಧಿಪತ್ಯ ಸಾಧಿಸಿತ್ತು. 1998ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಸ್ಯಾಂಟ್ರೋ ಕಾರು ಬಿಡುಗಡೆಯಾಗಿತ್ತು. ಇದೀಗ 20ನೇ ವರ್ಷದ ಸಂಭ್ರಮಾಚರಣೆಯಲ್ಲಿರು ಹ್ಯುಂಡೈ ಸಂಸ್ಥೆ ನೂತನ ಸ್ಯಾಂಟ್ರೋ  ಕಾರನ್ನ ಬಿಡುಗಡೆಗೊಳಿಸಲು ರೆಡಿಯಾಗಿದೆ

ಇದೇ ಅಕ್ಟೋಬರ್ 23 ರಂದು ನೂತನ ಸ್ಯಾಂಟ್ರೋ ಕಾರು ಮತ್ತೆ ಭಾರತದ ರಸ್ತೆಗಳಿಯಲಿದೆ. ಹೊಸ ಕಾರಿನ ವಿನ್ಯಾಸ ಹಳೇ ಸ್ಯಾಂಟ್ರೋದಿಂದ ಸ್ಪೂರ್ತಿ ಪಡೆದು ತಯಾರಿಸಲಾಗಿದೆ. ಇಷ್ಟೇ ಅಲ್ಲ ಅಟೋಮ್ಯಾಟಿಕ್ ಟ್ರಾನ್ಸಿಮಿಶನ್(ಎಎಂಟಿ) ವೇರಿಯೆಂಟ್ ಕೂಡ ಲಭ್ಯವಿದೆ.

ನೂತನ ಸ್ಯಾಂಟ್ರೋ ಪೆಟ್ರೋಲ್ ಕಾರು 1.0 ಲೀಟರ್, ಮೂರು ಸಿಲಿಂಡರ್ ಇಂಜಿನ್ ಹೊಂದಿದೆ. 95 ಎನ್‌ಎಮ್ ಟಾರ್ಕ್ಯೂನಲ್ಲಿ 66 ಪಿಎಸ್ ಪವರ್ ಹೊಂದಿದೆ. ವಿಶೇಷ ಅಂದರೆ ಅಟೋಮೆಟೆಡ್ ಮ್ಯಾನ್ಯುಯೆಲ್ ಟ್ರಾನ್ಸಮಿಶನ್ (ಎಎಮ್‌ಟಿ) ಹೊಂದಿದೆ.

ನೂತನ ಸ್ಯಾಂಟ್ರೋ ಬೆಲೆ 3.5 ಲಕ್ಷದಿಂದ 6 ಲಕ್ಷ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಮಾರುತಿ ಸೆಲೆರಿಯೋ, ಮಾರುತಿ ವ್ಯಾಗ್ನರ್ ಹಾಗೂ ಟಾಟಾ ಟಿಯಾಗೋ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ.

ನೂತನ ಕಾರಿನ ವಿನ್ಯಾಸ ಹಾಗೂ ಇತರ ಮಾಹಿತಿಗಳನ್ನ ಹ್ಯುಂಡೈ ಬಹಿರಂಗ ಪಡಿಸಿಲ್ಲ. ಆದರೆ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದ್ದ ಸ್ಯಾಂಟ್ರೋ ಮತ್ತೆ ಹೊಸ ವಿನ್ಯಾಸದಲ್ಲಿ ರೋಡಿಗಳಿಯುತ್ತಿರುವುದು ಕಾರು ಪ್ರೀಯರಲ್ಲಿ ಸಂತಸ ಮೂಡಿಸಿದೆ.