ಆಡಾಡುತಾ 'ಆಡಿ’ಕೊಳ್ಳಿ: ಬಂಪರ್ ಡಿಸ್ಕೌಂಟ್..!

Audi announces discounts on select cars
Highlights

ಆಡಿ ಕಾರಂದ್ರೆ ಅದ್ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ?. ಆಧುನಿಕ ತಂತ್ರಜ್ಞಾನ ಹಾಗೂ ತನ್ನ ಆಕರ್ಷಕ ವಿನ್ಯಾಸದಿಂದಲೇ ಆಡಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿದೆ. ಇದೇ ಕಾರಣಕ್ಕೆ ಅಬಾಲವೃದ್ಧರಾದಿಯಾಗಿ ಎಲ್ಲರೂ ಆಡಿ ಕಾರಂದ್ರೆ ತುಂಬ ಇಷ್ಟ ಪಡ್ತಾರೆ. ಆದರೆ ಈ ಕಾರಿನ ಬೆಲೆ ಕೇಳಿದಾಗ ಮಾತ್ರ ಮೂಗು ಮುರಿಯೋ ಜನರೇ ಹೆಚ್ಚು.

ಬೆಂಗಳೂರು (ಮೇ.25): ಆಡಿ ಕಾರಂದ್ರೆ ಅದ್ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ?. ಆಧುನಿಕ ತಂತ್ರಜ್ಞಾನ ಹಾಗೂ ತನ್ನ ಆಕರ್ಷಕ ವಿನ್ಯಾಸದಿಂದಲೇ ಆಡಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿದೆ. ಇದೇ ಕಾರಣಕ್ಕೆ ಅಬಾಲವೃದ್ಧರಾದಿಯಾಗಿ ಎಲ್ಲರೂ ಆಡಿ ಕಾರಂದ್ರೆ ತುಂಬ ಇಷ್ಟ ಪಡ್ತಾರೆ. ಆದರೆ ಈ ಕಾರಿನ ಬೆಲೆ ಕೇಳಿದಾಗ ಮಾತ್ರ ಮೂಗು ಮುರಿಯೋ ಜನರೇ ಹೆಚ್ಚು.

ಇನ್ಮುಂದೆ ಹಾಗಾಗಲ್ಲ ಬಿಡಿ. ಕಾರಣ ಆಡಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ನಿರ್ದಿಷ್ಟ ಆಡಿ ಕಾರುಗಳ ಮೇಲೆ ಸುಮಾರು 10 ಲಕ್ಷದವರೆಗೆ  ಡಿಸ್ಕೌಂಟ್ ಘೋಷಿಸಲಾಗಿದೆ. ಅಲ್ಲದೇ 2018 ರಲ್ಲಿ ಕೊಳ್ಳುವ ಕಾರಿಗೆ 2019 ರಲ್ಲಿ ಹಣ ಪಾವತಿಸುವ ಅವಕಾಶ ಒದಗಿಸಲಾಗಿದೆ. 

ಆಡಿಯ A3, A4, A6 and Q3 ಮಾಡೆಲ್ ಗಳ ಮೇಲೆ ಶೇ. 57 ರಷ್ಟು ಬೆಲೆ ಕಡಿತಗೊಳಿಸಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆಡಿ A3ಯ ಈ ಹಿಂದಿನ ಬೆಲೆ 33.10 ಲಕ್ಷ ರೂ. ಇತ್ತು. ಇದೀಗ ಈ ಕಾರಿನ ಬೆಲೆ 27.99 ಲಕ್ಷ ರೂ. ಆಗಿದೆ. ಅದರಂತೆ ಇತರೆ ಮಾಡೆಲ್ ಗಳ ಮೇಲೂ ಬೆಲೆ ಇಳಿಕೆ ಮಾಡಲಾಗಿದೆ. ಇದೇ ವೇಳೆ ಈ ಆಫರ್ ಸೀಮಿತ ಅವಧಿಗೆ ಮಾತ್ರ ಎಂದು ಕಂಪನಿ ಸ್ಪಷ್ಟಪಡಿಸಿದೆ.
 

loader