ರೈಕೋಕೆ(ಜೂ.27): ಜ್ವಾಲಾಮುಖಿಯೊಂದು ಹೊಗೆ ಉಗುಳುತ್ತಾ ಪರ್ವತದಿಂದ ಸಿಡಿದೇಳುವುದನ್ನು ಬಾಹ್ಯಾಕಾಶದಿಂದ ನೋಡಿದರೆ ಹೇಗಿರಬೇಡ?. ಉಸಿರು ಬಿಗಿ ಹಿಡಿದು ಈ ಫೋಟೋ ನೋಡಿ. ಜ್ವಾಲಾಮುಖಿ ಸಿಡಿದೇಳುವ ಫೋಟೋವೊಂದನ್ನು ನಾಸಾ ಅಂತತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆ ಹಿಡಿದಿದೆ.

ಹೌದು, ಜಪಾನ್’ನ ರೈಕೋಕೆ ದ್ವೀಪದ ಪರ್ವತದಲ್ಲಿ ಜ್ವಾಲಾಮುಖಿ ಬಾಯ್ತರೆದಿದ್ದು, ದಟ್ಟವಾದ ಹೊಗೆ  ಇಡೀ ಪ್ರದೇಶವನ್ನು ಆವರಿಸಿರುವ ಫೋಟೋವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಸೆರೆ ಹಿಡಿದಿದ್ದಾರೆ.

ಸುಮಾರು 2 ಸಾವಿರ ಡಿಗ್ರಿ ತಾಪಮಾನ ಹೊಂದಿರುವ ಜ್ವಾಲಾಮುಖಿಯ ಹೊಗೆ ಸುಮಾರು 10 ಮೈಲು ಎತ್ತರಕ್ಕೆ ಚಿಮ್ಮುತ್ತಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಜಪಾನ್ ಸುಪರ್ದಿಯಲ್ಲಿದ್ದ ರೈಕೋಕೆ ಪರ್ವತ ಪ್ರದೇಶ ಎರಡನೇ ಮಹಾಯುದ್ಧದ ಬಳಿಕ ರಷ್ಯಾದ ವಶದಲ್ಲಿದ್ದು, ಉತ್ತರ ಜಪಾನ್’ನಿಂದ ಹಿಡಿದು ಈಶಾನ್ಯ ರಷ್ಯಾದ ಭೂಭಾಗದವರೆಗೆ ಹಬ್ಬಿದೆ.