ಅತೀ ಕಡಿಮೆ ಬೆಲೆಯಲ್ಲಿ ಸೂಪರ್ ಫೀಚರ್ ಆಪಲ್ ಐ ಪ್ಯಾಡ್ ಲಭ್ಯ ..!

First Published 28, Mar 2018, 11:57 AM IST
Apple launches its Cheapest iPad
Highlights

ಆಪಲ್ ಸಂಸ್ಥೆ ಅತ್ಯಂತ ಕಡಿಮೆ ಬೆಲೆಯಲ್ಲಿ ಐ ಪ್ಯಾಡ್ ಲಾಂಚ್ ಮಾಡಿದೆ. ನೀವು ಐ ಪ್ಯಾಡ್ ಕೊಳ್ಳಬೇಕೆಂದುಕೊಂಡಿದ್ದಲ್ಲಿ ನಿಮಗೆ ಇದು ಒಂದು ಗುಡ್ ನ್ಯೂಸ್ ಆಗಿದೆ. ಈ ಐ ಪ್ಯಾಡ್’ನ ಆರಂಭಿಕ ಬೆಲೆ ಹಾಗೂ ಅದರ ಬಗ್ಗೆ ಕೆಲವೊಂದು ಮಾಹಿತಿಗಳು ಇಲ್ಲಿದೆ.

ಬೆಂಗಳೂರು : ಆಪಲ್ ಸಂಸ್ಥೆ ಅತ್ಯಂತ ಕಡಿಮೆ ಬೆಲೆಯಲ್ಲಿ ಐ ಪ್ಯಾಡ್ ಲಾಂಚ್ ಮಾಡಿದೆ. ನೀವು ಐ ಪ್ಯಾಡ್ ಕೊಳ್ಳಬೇಕೆಂದುಕೊಂಡಿದ್ದಲ್ಲಿ ನಿಮಗೆ ಇದು ಒಂದು ಗುಡ್ ನ್ಯೂಸ್ ಆಗಿದೆ. ಈ ಐ ಪ್ಯಾಡ್’ನ ಆರಂಭಿಕ ಬೆಲೆ ಹಾಗೂ ಅದರ ಬಗ್ಗೆ ಕೆಲವೊಂದು ಮಾಹಿತಿಗಳು ಇಲ್ಲಿದೆ.

ಆಪಲ್ ಸಂಸ್ಥೆಯಿಂದ ಲಾಂಚ್ ಆಗಿರುವ ಅತ್ಯಂತ ಕಡಿಮೆ ಬೆಲೆಯ  ಈ ಐ ಪ್ಯಾಡ್ ಏಪ್ರಿಲ್ ವೇಳೆಗೆ ಭಾರತದಲ್ಲಿ ಲಾಂಚ್ ಆಗುತ್ತದೆ.  

ಈ ಐ ಪ್ಯಾಡ್ ಆರಂಭಿಕ ಬೆಲೆಯು 28,000ದಿಂದ ಆರಂಭವಾಗುತ್ತಿದೆ. ಇದರ ಸ್ಕ್ರೀನ್ 9.7 ಇಂಚುಗಳಾಗಿದೆ, ಅಲ್ಯುಮಿನಿ ಯುನಿಬಾಡಿಯನ್ನು ಹೊಂದಿದೆ. ಫೀಚರ್ ಟಚ್ ಐಡಿ ಹಾಗೂ ಫೇಸ್ ಐಡಿ ವ್ಯವಸ್ಥೆಯನ್ನು ಈ ಐ ಪ್ಯಾಡ್ ಹೊಂದಿದೆ. ಎಚ್’ಡಿ ಫೇಸ್ ಟೈಮ್  ಕ್ಯಾಮರಾ ವ್ಯವಸ್ಥೆಯು ಈ ಐ ಪ್ಯಾಡ್’ನಲ್ಲಿದೆ.

ಈ ಐ ಪ್ಯಾಡ್ ಮೂರು ಬಣ್ಣಗಳಲ್ಲಿ ಲಭ್ಯವಾಗುತ್ತದೆ. ಸಿಲ್ವರ್, ಸ್ಪೇಸ್ ಗ್ರೇ, ಬಂಗಾರದ ಬಣ್ಣದಲ್ಲಿ ಲಭ್ಯವಾಗುತ್ತದೆ. ಎ10 ಫ್ಯೂಷನ್ ಚಿಪ್ ವ್ಯವಸ್ಥೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅತ್ಯಂತ ಹಗುರವಾಗಿದೆ.

 

loader