ಐಫೋನ್ ಖರೀದಿಸುವವರಿಗೆ 12 ಸಾವಿರ ರೂ. ಅಫರ್ !

First Published 24, Jan 2018, 4:17 PM IST
Apple iPhone X iPhone 8 series get up to Rs 12000 cashback
Highlights

ಮಾರ್ಚ್ 11 ಆಫರ್ ಲಭ್ಯವಿರಲಿದ್ದು, ಕ್ಯಾಶ್ ಬ್ಯಾಕ್ 90 ದಿನಗಳ ಒಳಗಾಗಿ ಖರೀದಾರರ ಖಾತೆಗಳಿಗೆ ಜಮೆಯಾಗಲಿದೆ.

ಹೆಚ್'ಡಿಎಫ್'ಸಿ ಬ್ಯಾಂಕ್ ಆಪಲ್ ಐಪಾಡ್, ಮ್ಯಾಕ್, ಆಪಲ್ ವಾಚ್ ಒಳಗೊಂಡ ಫೋನ್ ಸೀರಿಸ್ ಖರೀದಿಸುವವರಿಗೆ 12 ಸಾವಿರ ರೂ. ಆಫರ್ ಪ್ರಕಟಿಸಿದೆ.

ಎಎಂಐ ಮೂಲಕ ಖರೀದಿಸುವವರಿಗೆ ಈ ಆಫರ್ ಲಭ್ಯವಾಗಲಿದ್ದು, ಆಪಲ್ ವಾಚ್'ಅನ್ನು  ನಗದು ಮೂಲಕ ಖರೀದಿಸಿ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು. ಆನ್'ಲೈನ್ ಮಾರುಕಟ್ಟೆಗಳಲ್ಲಿ ಲಭ್ಯವಾಗದೆ ಆಯ್ದ ರಿಟೇಲ್ ಸ್ಟೋರ್'ಗಳಲ್ಲಿ ಮಾತ್ರ ದೊರೆಯಲಿದೆ.

ಮಾರ್ಚ್ 11 ಆಫರ್ ಲಭ್ಯವಿರಲಿದ್ದು, ಕ್ಯಾಶ್ ಬ್ಯಾಕ್ 90 ದಿನಗಳ ಒಳಗಾಗಿ ಖರೀದಾರರ ಖಾತೆಗಳಿಗೆ ಜಮೆಯಾಗಲಿದೆ. ಆಪಲ್ ಐಫೋನ್ ಎಕ್ಸ್' 12 ಸಾವಿರ, ಐಫೋನ್ 8, 8 ಪ್ಲಸ್ 10 ಸಾವಿರ, ಫೋನ್ 7, 7 ಪ್ಲಸ್ 3 ಸಾವಿರ, ಫೋನ್ 6ಎಸ್ 6ಎಸ್ ಪ್ಲಸ್ 2 ಸಾವಿರ, ಐಫೋನ್ 6 , ಎಸ್ಇ, ಐಫೋನ್ 5ಎಸ್,ಐಪಾಡ್,ಮ್ಯಾಕ್ ಹಾಗೂ ವಾಚ್'ಗಳಿಗೆ 5,10 ಹಾಗೂ 5 ಸಾವಿರ ಕ್ಯಾಶ್ ಬ್ಯಾಕ್ ದೊರೆಯಲಿದೆ. 64 ಜಿಬಿಯ ಆಪಲ್ ಐಫೋನ್ ಎಕ್ಸ್'ನ ಭಾರತದಲ್ಲಿನ ಬೆಲೆ 92,430 ರೂ. ಇದ್ದು ಹೆಚ್'ಡಿಎಫ್'ಸಿ ಬ್ಯಾಂಕ್ ಮೂಲಕ ಖರೀದಿಸಿದರೆ 80,430ಕ್ಕೆ ದೊರೆಯಲಿದೆ. ಅಮೆಜಾನ್ ಹಾಗೂ ಫ್ಲಿಪ್'ಕಾರ್ಟ್'ನಲ್ಲಿ ಕ್ರಮವಾಗಿ 84,999 ಹಾಗೂ  84,500 ರೂ.ಗೆ ದೊರೆಯಲಿದೆ.

loader