ಪೋರ್ಚುಗಲ್(ಅ.02): ಮೋಟಾರು ರೇಸ್ ಸ್ಪರ್ಧೆಯಲ್ಲಿ ಸ್ಪೇನ್‌ನ ಅನಾ ಕರಾಸ್ಕೋ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವಚಾಂಪಿಯನ್‌ಶಿಪ್ ಮೋಟಾರ್ ಬೈಕ್ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ವಿಶ್ವದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಗೆ ಅನಾ ಪಾತ್ರರಾಗಿದ್ದಾರೆ.

 

 

ಶ್ವಚಾಂಪಿಯನ್‌ಶಿಪ್ ಮೋಟಾರುಬೈಕ್ ಸ್ಪರ್ಧೆಯಲ್ಲಿ  21 ವರ್ಷದ ಅನಾ ಸಾಧನೆಗೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪುರುಷರ ಪ್ರಾಬಲ್ಯದ ಈ ಮೋಟಾರ್ ರೇಸ್ ಸ್ಪರ್ಧೆಯಲ್ಲಿ ಇದೀಗ ಮಹಿಳೆಯರು ಕೂಡ ಪಾಲ್ಗೊಳ್ಳುತ್ತಿರುವುದೇ ಸಂತಸ ವಿಚಾರ ಎಂದು ಟ್ವಿಟರಿಗರು ಪ್ರಶಂಸಿದ್ದಾರೆ.

ಅಂತಿಮ ಸುತ್ತಿನಲ್ಲಿ ರೇಸ್‌‌ನಲ್ಲಿ 25ನೇ ಸ್ಥಾನದಲ್ಲಿದ್ದ ಅನಾ, 13ನೇ ಸ್ಥಾನಿಯಾಗಿ ಅಂತ್ಯಗೊಳಿಸಿದರು. ಈ ಮೂಲಕ ಪ್ರಶಸ್ತಿ ಗೆದ್ದುಕೊಂಡರು. ತಮ್ಮ ಸಾಧನೆಗೆ ಕುಟುಂಬದಲ ಪ್ರೋತ್ಸಾಹವೇ ಕಾರಣ ಎಂದು ಅನಾ ಹೇಳಿದ್ದಾರೆ.