ಶೀಘ್ರವೇ ಜಿ-ಮೇಲ್‌ ಲಕ್ಷಣಗಳಲ್ಲಿ ವ್ಯಾಪಕ ಬದಲಾವಣೆ

All the New Features Coming to Your Gmail
Highlights

ಜಿ-ಮೇಲ್‌ ಬಳಕೆದಾರರಿಗೆ ಮುಂದಿನ ಕೆಲವು ವಾರಗಳಲ್ಲಿ ಹಲವು ಕುತೂಹಲಗಳಕಾರಿ ಬದಲಾವಣೆಗಳನ್ನು ನೋಡುವ ಅವಕಾಶ ದೊರೆಯಲಿದೆ. ಹೌದು, ಜಿ-ಮೇಲ್‌ನ ಕೆಲವು ಲಕ್ಷಣಗಳನ್ನು ಬದಲಾಯಿಸುವ ಬಗ್ಗೆ ಗೂಗಲ್‌ ದೊಡ್ಡಮಟ್ಟದ ಪರಿಶೀಲನೆ ನಡೆಸುತ್ತಿದೆ ಎಂದು ತಿಂಗಳಾರಂಭದಲ್ಲೇ ಸುದ್ದಿಯಾಗಿತ್ತು.

ನವದೆಹಲಿ: ಜಿ-ಮೇಲ್‌ ಬಳಕೆದಾರರಿಗೆ ಮುಂದಿನ ಕೆಲವು ವಾರಗಳಲ್ಲಿ ಹಲವು ಕುತೂಹಲಗಳಕಾರಿ ಬದಲಾವಣೆಗಳನ್ನು ನೋಡುವ ಅವಕಾಶ ದೊರೆಯಲಿದೆ. ಹೌದು, ಜಿ-ಮೇಲ್‌ನ ಕೆಲವು ಲಕ್ಷಣಗಳನ್ನು ಬದಲಾಯಿಸುವ ಬಗ್ಗೆ ಗೂಗಲ್‌ ದೊಡ್ಡಮಟ್ಟದ ಪರಿಶೀಲನೆ ನಡೆಸುತ್ತಿದೆ ಎಂದು ತಿಂಗಳಾರಂಭದಲ್ಲೇ ಸುದ್ದಿಯಾಗಿತ್ತು.

ಅದನ್ನೀಗ ನಿಜ ಎಂದಿರುವ ಗೂಗಲ್‌, ಕೆಲವೊಂದು ಮಹತ್ವದ ಬದಲಾವಣೆಗಳು ಜಿ-ಮೇಲ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದೆ. ಅದೇ ರೀತಿ ಬ್ಲಾಗ್‌ ಪೋಸ್ಟ್‌ ವಿನ್ಯಾಸದಲ್ಲೂ ಬದಲಾವಣೆಗಳಾಗಲಿವೆ.

ಸ್ನೂಜ್‌ ಬಟನ್‌, ನಡ್ಜ್‌ ಬಟನ್‌, ಸ್ಮಾರ್ಟ್‌ ರಿಪ್ಲೈಗಳು ಸೇರಿದಂತೆ ಹಲವು ಲಕ್ಷಣಗಳು ಮರು ವಿನ್ಯಾಸಗೊಳ್ಳಲಿವೆ. ದೀರ್ಘಾವಧಿಯ ಬಳಿಕ ಜಿ-ಮೇಲ್‌ ಇಷ್ಟೊಂದು ದೊಡ್ಡ ವಿನ್ಯಾಸ ಬದಲಾವಣೆ ಮಾಡುತ್ತಿದೆ.

loader