ಏರ್ಟೆಲ್ ಗ್ರಾಹರಿಗೆ ಸಿಗುತ್ತಿದೆ ಹೆಚ್ಚು ಬೆಸ್ಟ್ ಆಫರ್

Airtel unveils Rs 249 pack offers 2GB data per day
Highlights

ದಿನದಿಂದ ದಿನಕ್ಕೆ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಆಫರ್ ಬಿಟ್ಟು ಜನರನ್ನು ಸೆಳೆಯುತ್ತಿರುವ ಜಿಯೋ ವನ್ನು ಹಿಂದಿಕ್ಕಲು ಇದೀಗ  ಇತರೆ ಟೆಲಿಕಾಂ ಸಂಸ್ಥೆಗಳು ಕೂಡ ಮುಂದಾಗಿವೆ.

ನವದೆಹಲಿ : ದಿನದಿಂದ ದಿನಕ್ಕೆ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಆಫರ್ ಬಿಟ್ಟು ಜನರನ್ನು ಸೆಳೆಯುತ್ತಿರುವ ಜಿಯೋ ವನ್ನು ಹಿಂದಿಕ್ಕಲು ಇದೀಗ  ಇತರೆ ಟೆಲಿಕಾಂ ಸಂಸ್ಥೆಗಳು ಕೂಡ ಮುಂದಾಗಿವೆ.

ಈ ನಿಟ್ಟಿನಲ್ಲಿ ಇದೀಗ ಜಿಯೋಗೆ ಸಡ್ಡು ಹೊಡೆಯಲು ಏರ್ಟೆಲ್ ಕೂಡ ಸಜ್ಜಾಗಿದ್ದು, ತನ್ನ ಗ್ರಾಹಕರಿಗೆ ಬೆಸ್ಟ್ ಆಫರ್ ಒಂದನ್ನು ನೀಡುತ್ತಿದೆ. 

ಏರ್ಟೆಲ್ ನೀಡುತ್ತಿರುವ  ಹೊಸ ಆಫರ್’ನಲ್ಲಿ ಕಂಪನಿಯು ಕೇವಲ 249 ರು.ಗೆ 28 ದಿನಗಳ ಕಾಲ ಪ್ರತಿ ದಿನ 2 ಜಿಬಿ ಡಾಟಾ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಇದೂ ಅಲ್ಲದೇ ಇದಕ್ಕಿಂತಲೂ ಬೆಸ್ಟ್ ಆಫರ್’ಗಳನ್ನೂ ಕೂಡ ನೀಡುತ್ತಿದೆ.

ಅಲ್ಲದೇ ಇದಕ್ಕೆ ಅನಿಯಮಿತ ಕರೆ ಸೌಲಭ್ಯ ಹಾಗೂ  ಇನ್ ಕಮಿಂಗ್ , ರೋಮಿಂಗ್ ಉಚಿತ ಕರೆ ಸೌಲಭ್ಯ,  ದಿನಕ್ಕೆ ರಾಷ್ಟ್ರೀಯ ಹಾಗೂ ಸ್ಥಳೀಯ ನೆಟ್ ವರ್ಕ್’ಗಳಿಗೆ ಉಚಿತ  ಎಸ್’ಎಂಎಸ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

loader