ಮುಂದಿನ ವರ್ಷದ ಮಾರ್ಚ್ ವೇಳೆಗೆ ಎಲ್ಲರಿಗೂ ಸೇವೆ ದೊರಯುವ ಸಾಧ್ಯತೆಯಿದೆ.

ಮುಂಬೈ(ಸೆ.11): ರಿಲಯನ್ಸ್ ಜಿಯೋಗೆ ಸಡ್ಡು ಹೊಡೆಯಲು ನಾನಾ ತಂತ್ರ ರೂಪಿಸುತ್ತಿರುವ ಭಾರ್ತಿ ಏರ್‌ಟೆಲ್ ಇದೀಗ, ಜಿಯೋ ಮಾದರಿಯಲ್ಲೇ ಮುಂಬೈನಲ್ಲಿ 4ಜಿ ವೋಲ್ಟ್ ಮೊಬೈಲ್ ಸೇವೆ ಆರಂಭಿಸಿದೆ.

ಇದರಿಂದಾಗಿ ಗ್ರಾಹಕರು ಎಚ್‌ಡಿ ಗುಣಮಟ್ಟದಲ್ಲಿ ಸೇವೆ ಆನಂದಿಸಬಹುದಾಗಿದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಗ್ರಾಹಕರು ಈ ಸೌಲಭ್ಯ ಪಡೆಯಬಹುದಾಗಿದೆ. ಮೊದಲಿಗೆ ಮುಂಬೈನಲ್ಲಿ ಆರಂಭಿಸಲಾಗಿದ್ದು, ಶೀಘ್ರವೇ ಇದನ್ನು ಇತರೆ ನಗರ ಮತ್ತು ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ಕಂಪನಿ ಹೇಳಿದೆ. ಜೊತೆಗೆ ಜಿಯೋ ಮಾದರಿಯಲ್ಲಿ 2500 ರು.ಗೆ ಮೊಬೈಲ್ ನೀಡುವ ಕುರಿತು ಏರ್‌ಟೆಲ್ ಮಾತುಕತೆ ನಡೆಸುತ್ತಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಎಲ್ಲರಿಗೂ ಸೇವೆ ದೊರಯುವ ಸಾಧ್ಯತೆಯಿದೆ.