ಏರ್ಟೆಲ್’ನಿಂದ ಐಪಿಎಲ್ ಸೀಸನ್’ನ ಬಿಗ್ ಆಫರ್

Airtel Rs 49 plan gives 3GB data for day
Highlights

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ  ವಿವಿಧ ಟೆಲಿಕಾಂ ಕಂಪನಿಗಳು ದಿನದಿಂದ ದಿನಕ್ಕೆ ಹೊಸ ಹೊಸ ಆಫರ್’ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಯತ್ನವನ್ನು ಮಾಡುತ್ತಿವೆ. ರಿಲಾಯನ್ಸ್ ಜಿಯೋ ಭರ್ಜರಿ ಆಫರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿರುವ ಬೆನ್ನಲ್ಲೇ ವಿವಿಧ ಕಂಪನಿಗಳೂ ಕೂಡ ಒಂದರ ಮೇಲೊಂದರಂತೆ ಆಫರ್’ಗಳನ್ನು ನೀಡಲಾರಂಭಿಸಿದವು. ಈ ಸಾಲಿಗೆ ಏರ್ಟೆಲ್ ಕಂಪನಿಯೂ ಸೇರಿದೆ.

ನವದೆಹಲಿ : ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ  ವಿವಿಧ ಟೆಲಿಕಾಂ ಕಂಪನಿಗಳು ದಿನದಿಂದ ದಿನಕ್ಕೆ ಹೊಸ ಹೊಸ ಆಫರ್’ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಯತ್ನವನ್ನು ಮಾಡುತ್ತಿವೆ.

ರಿಲಾಯನ್ಸ್ ಜಿಯೋ ಭರ್ಜರಿ ಆಫರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿರುವ ಬೆನ್ನಲ್ಲೇ ವಿವಿಧ ಕಂಪನಿಗಳೂ ಕೂಡ ಒಂದರ ಮೇಲೊಂದರಂತೆ ಆಫರ್’ಗಳನ್ನು ನೀಡಲಾರಂಭಿಸಿದವು. ಈ ಸಾಲಿಗೆ ಏರ್ಟೆಲ್ ಕಂಪನಿಯೂ ಸೇರಿದೆ.

ಇದೀಗ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಒಂದು ದಿನ ವ್ಯಾಲಿಡಿಟಿ ಹೊಂದಿದ ಭರ್ಜರಿ ಡೇಟಾ ಆಫರ್ ಒಂದನ್ನು ನೀಡುತ್ತಿದೆ. ಕೇವಲ 49 ರು. ರಿಚಾರ್ಜ್ ಮಾಡಿಸಿಕೊಂಡಲ್ಲಿ ಒಂದೇ ದಿನ 3ಜಿಬಿ ಡೇಟಾ ಸಿಗಲಿದೆ.  

ಇದು ಐಪಿಎಲ್ ಸೀಸನ್ ಆಗಿದ್ದು, ಐಪಿಎಲ್ ಪ್ರಿಯರು ಈಗ ಸಂಪೂರ್ಣ ಮ್ಯಾಚ್ ಲೈವ್ ಸ್ಟ್ರೀಮಿಂಗ್’ನ್ನು ನೋಡಿ ಖುಷಿ ಪಡುವ ಅವಕಾಶವನ್ನು ಈ ಮೂಲಕ ಏರ್ಟೆಲ್ ಒದಗಿಸಿದೆ.  ಒಂದೇ ದಿನಕ್ಕೆ ಅತ್ಯಧಿಕ ಪ್ರಮಾಣದಲ್ಲಿ ವಿಡಿಯೋ ಡೌನ್’ಲೋಡ್ ಮಾಡಿಕೊಳ್ಳುವಂತವರಿಗೆ ಇದು ಅನುಕೂಲವಾಗಲಿದೆ.  

ಜಿಯೋ ಕೂಡ ಇದೇ ರೀತಿಯಾದ ಆಫರ್ ಒಂದನ್ನು ನೀಡಿದ್ದು 52 ರು. ರಿಚಾರ್ಚ್ ಮಾಡಿಸಿಕೊಂಡಲ್ಲಿ 7 ದಿನಗಳ ವ್ಯಾಲಿಡಿಟಿಯೊಂದಿಗೆ 1 ಜಿಬಿ ಡೇಟಾ ಪಡೆಯಬಹುದಾಗಿದೆ.  

loader