ಬಿಎಸ್ಎನ್ಎಲ್ ಗೆ ಏರ್‌ಟೆಲ್ ಟಕ್ಕರ್; ಕೇವಲ ₹75ರ ಪ್ಲ್ಯಾನ್ ಐಡಿಯಾ ಸೇವೆಯಲ್ಲೂ ಇಂತಹದ್ದೇ ಪ್ಲ್ಯಾನ್ ಲಭ್ಯ

ಮೊಬೈಲ್ ಡೇಟಾ ದರ ಸಮರ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಇದೀಗ ಬಿಎಸ್ಎನ್ಎಲ್‌ಗೆ ಸ್ಪರ್ಧೆ ನೀಡಲು ಏರ್‌ಟೆಲ್ ಹೊಸ ಡೇಟಾ ಪ್ಲ್ಯಾನನ್ನು ಬಿಡುಗಡೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವಾರದ ಆರಂಭದಲ್ಲಿ ಬಿಎಸ್ಎನ್ಎಲ್‌ ₹75 ಪ್ಲ್ಯಾನ್ ಬಿಡುಗಡೆ ಮಾಡಿತ್ತು. ಇದೀಗ ಏರ್‌ಟೆಲ್ ಕೂಡಾ ಪ್ರಿಪೇಯ್ಡ್ ಗ್ರಾಹಕರಿಗೆ 28 ದಿನಗಳ ಅವಧಿಗೆ ₹75ರ ಪ್ಲ್ಯಾನನ್ನು ಬಿಡುಗಡೆ ಮಾಡಿದೆ. 

ಈ ಪ್ಲ್ಯಾನ್‌ನಲ್ಲಿ, 28 ದಿವಸಗಳ ಅವಧಿಗೆ 1 ಜಿಬಿ ಡೇಟಾ ( 2G/3G/4G) ಜೊತೆಗೆ 300 ನಿಮಿಷಗಳ ಉಚಿತ ಕರೆಗಳು ಹಾಗೂ 100 ಎಸ್ಸೆಮ್ಮೆಸ್‌ಗಳು ಉಚಿತವಾಗಿರುತ್ತವೆ ಎಂದು ಬಿಜಿಆರ್ ವರದಿ ಮಾಡಿದೆ.

ಐಡಿಯಾ ಸೇವೆಯಲ್ಲೂ ಇಂತಹದ್ದೇ ಪ್ಲ್ಯಾನ್ ಲಭ್ಯವಿದೆ, ಆದರೆ ಡೇಟಾ ಮಾತ್ರ 4Gಗೆ ಸೀಮಿತವಾಗಿದೆ. 

ಬಿಎಸ್ಎನ್ಎಲ್‌ ಬಿಡುಗಡೆ ಮಾಡಿರುವ ₹75 ಪ್ಲ್ಯಾನ್ 15 ದಿನಗಳಿಗೆ ಮಾತ್ರ ಸೀಮಿತವಾಗಿದೆ.