ಇದರ ಜೊತೆಗೆ 86 ರೂ.ಗಳ ಮತ್ತೊಂದು ಆಫರ್ ಕೂಡ ನೀಡಿದ್ದು ಇದು ಫುಲ್ ಟಾಕ್'ಟೈಮ್ ಜೊತೆಗೆ 100 ಎಂಬಿ ಡಾಟಾ ಕೂಡ ಒಳಗೊಂಡಿರುತ್ತದೆ.

ನವದೆಹಲಿ(ಮೇ.10): ದೇಶದಾದ್ಯಂತ ಅತ್ಯದ್ಭುತ ಉಚಿತ ಆಫರ್'ಗಳನ್ನು ನೀಡಿದ ಜಿಯೋ'ಗೆ ಸ್ಪರ್ಧಿಯಾಗಿ ಉಳಿದ ಟೆಲಿಕಾಂ ಕಂಪನಿಗಳು ಸಹ ಉಚಿತ ಇಲ್ಲವೆ ಕಡಿಮೆ ಮೊತ್ತಕ್ಕೆ ಆಫರ್'ಗಳನ್ನು ನೀಡುತ್ತಿವೆ. ಈ ಸರದಿಯಲ್ಲಿ ಏರ್'ಸೆಲ್ ನಿಂತಿದೆ. ಇತ್ತೀಚಿಗಷ್ಟೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ರೋಮಿಂಗ್ ಕರೆಗಳನ್ನು ಉಚಿತವಾಗಿ ನೀಡಿದ ಏರ್'ಸೆಲ್ ಈಗ ಒಂದು ಜಿಬಿ' ಡಾಟಾ'ವನ್ನು 76 ರೂ.ಗಳಿಗೆ ನೀಡಲು ಮುಂದಾಗಿದೆ.

ಆದರೆ ಈ ಆಫರ್ 3ಜಿ ಡಾಟಾ ಒಳಗೊಂಡಿದ್ದು, ಮೊಬೈಲ್ ಆ್ಯಪ್'ನಲ್ಲಿ ಮಾತ್ರವೇ ಲಭ್ಯವಾಗಲಿದೆ. ಅವಧಿ 10 ದಿನಗಳು ಇರುತ್ತವೆ. ಇದರ ಜೊತೆಗೆ 86 ರೂ.ಗಳ ಮತ್ತೊಂದು ಆಫರ್ ಕೂಡ ನೀಡಿದ್ದು ಇದು ಫುಲ್ ಟಾಕ್'ಟೈಮ್ ಜೊತೆಗೆ 100 ಎಂಬಿ ಡಾಟಾ ಕೂಡ ಒಳಗೊಂಡಿರುತ್ತದೆ. ಗ್ರಾಹಕರು ಪ್ಲೇಸ್ಟೋರ್'ನಲ್ಲಿ ಏರ್'ಸೆಲ್ ಆ್ಯಪ್ ಡೌನ್'ಲೋಡ್ ಮಾಡಿಕೊಂಡು ಈ ಸೌಲಭ್ಯ ಪಡೆಯಬಹುದು.