ಭಾರತದಲ್ಲಿ ಈಗ 99 ಕೋಟಿ ಮೊಬೈಲ್‌ ಚಂದಾದಾರರು!

First Published 25, Feb 2018, 5:13 PM IST
99 crore Indians Mobiles Customers
Highlights

ಭಾರತದ ಒಟ್ಟು ಮೊಬೈಲ್‌ ಫೋನ್‌ ಚಂದಾದಾರರ ಸಂಖ್ಯೆ ಶೀಘ್ರವೇ 100 ಕೋಟಿಗೆ ತಲುಪಲಿದೆ. ಭಾರತೀಯ ಸೆಲ್ಯುಲರ್‌ ನಿರ್ವಾಹಕರ ಸಂಘ ಬಿಡುಗಡೆಗೊಳಿಸಿರುವ, ಕಳೆದ ತಿಂಗಳ ವರೆಗಿನ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಸುಮಾರು 98.84 ಕೋಟಿ (ಬಹುತೇಕ 99 ಕೋಟಿ) ಮೊಬೈಲ್‌ ಚಂದಾದಾರರ ಸಂಖ್ಯೆಯಿದೆ.

ನವದೆಹಲಿ: ಭಾರತದ ಒಟ್ಟು ಮೊಬೈಲ್‌ ಫೋನ್‌ ಚಂದಾದಾರರ ಸಂಖ್ಯೆ ಶೀಘ್ರವೇ 100 ಕೋಟಿಗೆ ತಲುಪಲಿದೆ. ಭಾರತೀಯ ಸೆಲ್ಯುಲರ್‌ ನಿರ್ವಾಹಕರ ಸಂಘ ಬಿಡುಗಡೆಗೊಳಿಸಿರುವ, ಕಳೆದ ತಿಂಗಳ ವರೆಗಿನ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಸುಮಾರು 98.84 ಕೋಟಿ (ಬಹುತೇಕ 99 ಕೋಟಿ) ಮೊಬೈಲ್‌ ಚಂದಾದಾರರ ಸಂಖ್ಯೆಯಿದೆ.

ಮಾರುಕಟ್ಟೆಯಲ್ಲಿ ಏರ್‌ಟೆಲ್‌ ಚಂದಾದಾರರ ಸಂಖ್ಯೆ ಅತ್ಯಧಿಕ, ಸುಮಾರು 29 ಕೋಟಿಯಷ್ಟಿದೆ. ವೊಡಾಫೋನ್‌ಗೆ 21 ಕೋಟಿ, ಐಡಿಯಾಗೆ 19 ಕೋಟಿ ಚಂದಾದಾರರಿದ್ದಾರೆ. ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಅತ್ಯಧಿಕ 85.58 ದಶಲಕ್ಷ ಚಂದಾದಾರರು ಮತ್ತು ನಂತರ ಮಹಾರಾಷ್ಟ್ರದಲ್ಲಿ 81.56 ದಶಲಕ್ಷ ಚಂದಾದಾರರಿದ್ದಾರೆ.

loader