ಪವರ್ ಬ್ಯಾಂಕ್ ಖರೀದಿಸುವಾಗ ಈ 8 ವಿಷಯಗಳನ್ನು ಗಮನಿಸಿ

First Published 19, Feb 2018, 7:36 PM IST
8 not to miss things while buying a power bank
Highlights

ಮೊಬೈಲ್ ಮೇಲೆ ಅವಲಂಬನೆ ಹೆಚ್ಚಿದಂತೆ, ಅದನ್ನು ಚಾರ್ಜ್ ಮಾಡಲು ಪವರ್ ಬ್ಯಾಂಕ್’ನಂತಹ ಸಾಧನಗಳು ಇಂದಿನ ಅವಶ್ಯಕತೆಗಳಲ್ಲಿ ಒಂದು. ಆದುದರಿಂದ ಪವರ್ ಬ್ಯಾಂಕ್’ಗಳನ್ನು ಖರೀದಿಸುವಾಗ ಈ 8 ವಿಷಯಗಳನ್ನು ಗಮನಿಸುವುದು ಸೂಕ್ತ.

ಮೊಬೈಲ್ ಮೇಲೆ ಅವಲಂಬನೆ ಹೆಚ್ಚಿದಂತೆ, ಅದನ್ನು ಚಾರ್ಜ್ ಮಾಡಲು ಪವರ್ ಬ್ಯಾಂಕ್’ನಂತಹ ಸಾಧನಗಳು ಇಂದಿನ ಅವಶ್ಯಕತೆಗಳಲ್ಲಿ ಒಂದು. ಆದುದರಿಂದ ಪವರ್ ಬ್ಯಾಂಕ್’ಗಳನ್ನು ಖರೀದಿಸುವಾಗ ಈ 8 ವಿಷಯಗಳನ್ನು ಗಮನಿಸುವುದು ಸೂಕ್ತ.

1. ಪವರ್ ಬ್ಯಾಂಕ್ ಸಾಮರ್ಥ್ಯ:

ಪವರ್ ಬ್ಯಾಂಕ್ ಸಾಮರ್ಥ್ಯ ನಿಮ್ಮ ಮೊಬೈಲ್ ಬ್ಯಾಟರಿಯ ದುಪ್ಪಟ್ಟು ಸಾಮರ್ಥ್ಯ ಹೊಂದಿರಲಿ. ಅದನ್ನು ಮಿಲಿಆ್ಯಂಪ್’ಅವರ್ಸ್ (mAh)ನಲ್ಲಿ ಅಲೆಯಲಾಗುತ್ತದೆ.  mAh ಹೆಚ್ಚಿದ್ದಷ್ಟು ಪವರ್ ಬ್ಯಾಂಕ್ ಸಾಮರ್ಥ್ಯ ಹೆಚ್ಚಿರುತ್ತದೆ. ಉದಾ: ನಿಮ್ಮ ಫೋನ್ ಬ್ಯಾಟರಿ ಸಾಮರ್ಥ್ಯ 1500 mAh ಆಗಿದ್ದರೆ, ನೀವು 3000 mAh ಸಾಮರ್ಥ್ಯದ ಪವರ್ ಬ್ಯಾಂಕ್’ನ್ನು  ಖರೀದಿಸುವುದು ಸೂಕ್ತ.

2. ಗುಣಮಟ್ಟ ಮತ್ತು ಸುರಕ್ಷತೆ:

ಪವರ್ ಬ್ಯಾಂಕ್ ಗುಣಮಟ್ಟ ನಿಮ್ಮ ಫೋನ್ ಬಾಳಿಕೆಗೂ ಮುಖ್ಯ ಹಾಗೂ ಸುರಕ್ಷತೆಗೂ ಕೂಡಾ. ಕಳಪೆ ಗುಣಮಟ್ಟದ ಪವರ್ ಬ್ಯಾಂಕ್’ಗಳು ಫೋನ್ ಬಾಳಿಕೆ ಮೆಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು.

3. ಕನೆಕ್ಟಿವಿಟಿ ಆಯ್ಕೆಗಳು ಮತ್ತು ಯುಎಸ್’ಬಿ ಚಾರ್ಜಿಂಗ್:

ಪವರ್ ಬ್ಯಾಂಕಿನಲ್ಲಿ ಇಂತಹ ಆದಷ್ಟು ಹೆಚ್ಚು ಆಯ್ಕೆಗಳಿದ್ದರೆ, ಏಕಲಕಾಲದಲ್ಲಿ ಒಂದಕ್ಕಿಂತ ಹೆಚ್ಚು ಉಪಕರಣಗಳನ್ನು ಚಾರ್ಜ್ ಮಾಡಬಹುದು. ಮೊಬೈಲ್, ಟ್ಯಾಬ್ಲೆಟ್ ಮುಂತಾದ ಪಕರಣಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದು.

4. ಎಲ್’ಇಡಿ ಇಂಡಿಕೇಟರ್ಸ್:

ಪವರ್ ಬ್ಯಾಂಕಿನಲ್ಲಿ ಎಲ್’ಇಡಿ ಇಂಡಿಕೇಟರ್ಸ್ ಇದ್ದರೆ ಬಹಳ ಸೂಕ್ತ. ಪವರ್ ಬ್ಯಾಂಕ್ ಚಾರ್ಜ್ ಆಗುತ್ತಿದೆಯೋ ಇಲ್ಲವೋ, ಎಷ್ಟು ಚಾರ್ಜ್ ಆಯ್ತು ಎಂಬುವುದನ್ನು ತಿಳಿದುಕೊಳ್ಳಲು ಇದು ಸೂಕ್ತ..

5. ವಿಶ್ವಾಸಾರ್ಹ ಬ್ರಾಂಡ್:

ಪವರ್ ಬ್ಯಾಂಕ್ ಖರೀದಿಸುವಾಗ ಮಾರುಕಟ್ಟೆಯಲ್ಲಿ ಚಿರಪರಿಚಿತವಾಗಿರುವ ಬ್ರಾಂಡ್’ನ್ನೇ ಆಯ್ಕೆ ಮಾಡಿ. ಏಕೆಂದರೆ ನಿಮ್ಮ ದುಬಾರಿ ಫೋನ್’ಗಳು ಕಳಪೆ ಚಾರ್ಜಿಂಗ್ ಸಾಧನಗಳಿಂದ ಹಾಳಾಗುವ ಸಾಧ್ಯತೆಗಳಿರುತ್ತವೆ.

6. ಸುರಕ್ಷತೆ:

ಪವರ್ ಬ್ಯಾಂಕ್ ಖರೀದಿಸುವಾಗ ಸುರಕ್ಷತೆಯನ್ನು ಗಮನದಲ್ಲಿಡಬೇಕಾದುದು ಅತೀ ಅಗತ್ಯ. ಪವರ್’ಬ್ಯಾಂಕನ್ನು ದೀರ್ಘಕಾಲ (ಉದಾ. ಮಲಗುವಾಗ) ಚಾರ್ಜಿಂಗ್’ಗಾಗಿ ಇಡುವ ಅಭ್ಯಾಸವಿದ್ದರೆ  ಕಳಪೆ ಗುಣಮಟ್ಟದ ಪವರ್ ಬ್ಯಾಂಕ್’ಗಳು  ಓವರ್ ಚಾರ್ಜಿಂಗ್’ನಿಂದ ಸ್ಫೋಟಗೊಳ್ಳುವ ಸಾಧ್ಯತೆಗಳಿರಬಹುದು.  ಆದುದರಿಂದ ಬ್ಯಾಟರಿಯಲ್ಲಿ ಲೀಥಿಯಂ-ಪಾಲಿಮರ್ ಅಂಶ ಹೆಚ್ಚಿರುವ  ಪವರ್ ಬ್ಯಾಂಕುಗಳನ್ನು ಬಳಸಿ.

7. ಆ್ಯ0ಪಿಯರ್ ಕೌಂಟ್:

ಪವರ್ ಬ್ಯಾಂಕ್ ಖರೀದಿಸುವಾಗ ಆ್ಯಂಪಿಯರ್ ಬಗ್ಗೆ ತಿಳಿದಿರಬೇಕಾದುದು ಅಗತ್ಯ. ಆ್ಯಂಪಿಯರ್  ಅಂದರೆ, ಪವರ್ ಬ್ಯಾಂಕಿನಿಂದ ಚಾರ್ಜ್ ಆಗುತ್ತಿರುವ ಉಪಕರಣಕ್ಕೆ ಪ್ರವಾಹವಾಗುತ್ತಿರುವ ವಿದ್ಯುತ್’ನ ಪ್ರಮಾಣ.  ಉದಾಹರಣೆಗೆ, ಉಪಕರಣಕ್ಕೆ 2.1 ಆ್ಯಂಪ್ ವಿದ್ಯುತ್ ಅಗತ್ಯವಿದ್ದರೆ ಪವರ್ ಬ್ಯಾಂಕ್ ಕೂಡಾ ಅಷ್ಟೇ ವಿದ್ಯುತ್’ನ್ನು ಪೂರೈಸಬೇಕು. ಈ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೆ ಒಂದೋ ಉಪಕರಣ ಚಾರ್ಜ್ ಆಗಲ್ಲ ಅಥವಾ ಬಹಳ ನಿಧಾನಗತಿಯಲ್ಲಿ ಚಾರ್ಜ್ ಆಗುವುದು.

8. ಕೇಬಲ್ಸ್:

ಪವರ್ ಬ್ಯಾಂಕಿನಷ್ಟೇ ಅದರ ಕೇಬಲ್ ಕೂಡಾ ಬಹಳ ಮುಖ್ಯ.  ಪವರ್ ಬ್ಯಾಂಕ್ ಚಾರ್ಜಿಂಗ್’ಗೆ ತೆಗೆದುಕೊಳ್ಳುವ ಸಮಯ ಅದರ ಕೇಬಲ್’ನ ಉದ್ದಳತೆ ಮೆಲೆಯೂ ಅವಲಂಬಿವಾಗಿರುತ್ತದೆ.  ಜತೆಗೆ, ವಿದ್ಯುತ್ ಪೂರೈಕೆಯಲ್ಲಾಗುವ ಏರುಪೇರುಗಳಿಂದಲೂ ಕೂಡಾ ಉಪಕರಣವನ್ನು ರಕ್ಷಿಸುತ್ತಿದೆ. ಆದುದರಿಂದ ಪವರ್ ಬ್ಯಾಂಕಿನೊಂದಿಗೆ ಬಂದಿರುವ ಕೇಬಲನ್ನೇ ಬಳಸುವುದು ಉತ್ತಮ.

loader