Asianet Suvarna News Asianet Suvarna News

Internet Connection ಶೇ.50 ರಷ್ಟು ಭಾರತೀಯರಿಗಿಲ್ಲ ಇಂಟರ್‌ ನೆಟ್‌ ಸಂಪರ್ಕ

  • ಭಾರತ ಕೃಷಿ ರಂಗದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಿಕೊಂಡರೆ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಬಹುದು
  • ಭಾರತದಲ್ಲಿ ಶೇ.50 ರಷ್ಟು ಜನರಿಗೆ ಅಂತರ್ಜಾಲ ಸೌಲಭ್ಯ ಸಿಕ್ಕುತ್ತಿಲ್ಲ. 
50 Percent of Indians have no internet connection snr
Author
Bengaluru, First Published Nov 20, 2021, 9:15 AM IST

ಬೆಂಗಳೂರು (ನ.20):  ಭಾರತ (india) ಕೃಷಿ ರಂಗದಲ್ಲಿ ಕೃತಕ ಬುದ್ಧಿ ಮತ್ತೆ ಅಳವಡಿಸಿಕೊಂಡರೆ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಬಹುದು, ಜಗತ್ತಿನಲ್ಲಿ ಈಗ ನಡೆಯುತ್ತಿರುವ ನಾಲ್ಕನೇ ಕೈಗಾರಿಕಾ  ಕ್ರಾಂತಿಯಲ್ಲಿ (Industrial revolution) ವೇಗದಿಂದ ಕೆಲಸ ಮಾಡಲು ಅಂತರ್ಜಾಲ (Internet) ಲಭ್ಯತೆ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಭಾರತದಲ್ಲಿ ಶೇ.50 ರಷ್ಟು ಜನರಿಗೆ ಅಂತರ್ಜಾಲ ಸೌಲಭ್ಯ ಸಿಕ್ಕುತ್ತಿಲ್ಲ. ಹಾಗಾಗಿ ಈ ‘ಡಿಜಿಟಲ್ ಅಂತರ’ (Digital gap) ಪರಿಹರಿಸಲು ಸರ್ಕಾರಗಳು ಆದ್ಯತೆ ನೀಡಬೇಕು ಎಂದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್‌ WEF) ಸಂಸ್ಥಾಪಕ ಪ್ರೊ. ಕ್ಲಾಸ್‌ ಶ್ವಾಬ್‌ ಸಲಹೆ ನೀಡಿದ್ದಾರೆ.

ಬೆಂಗಳೂರು (Bengaluru) ತಂತ್ರಜ್ಞಾನ ಶೃಂಗದಲ್ಲಿ (Tech Summit) ಶುಕ್ರವಾರ ನಡೆದಗೋಷ್ಠಿಯಲ್ಲಿ ವರ್ಚುಯಲ್ ಆಗಿ ಪಾಲ್ಗೊಂಡಿದ್ದ ಈಗ ನಡೆಯುತ್ತಿರುವ ಕೈಗಾರಿಕಾ ಕ್ರಾಂತಿಯಿಂದಾಗಿ 2025ರ ಹೊತ್ತಿಗೆ 35 ದಶ ಲಕ್ಷ ಉದ್ಯೋಗಗಳು (Job) ಜಾಗತಿಕವಾಗಿ ಸೃಷ್ಟಿಯಾಗಲಿವೆ. ಈ ಸದಾವಕಾಶವನ್ನು ಭಾರತ (India) ಕಳೆದುಕೊಳ್ಳಬಾರದು ಎಂದು ಹೇಳಿದರು.

ಕೈಗಾರಿಕೆಗಳ ಉತ್ಪಾದನಾ ವಿಧಾನದಲ್ಲಿ ಕೂಡ ‘ಹಸಿರು ಕ್ರಾಂತಿ’ (Green Revolution) ಆಗಬೇಕಾಗಿದ್ದು, ಶೂನ್ಯ ಇಂಗಾಲದ ಗುರಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಆವಿಷ್ಕಾರಗಳು ತುರ್ತಾಗಿ ಆಗಬೇಕಾಗಿದೆ. ಮುಂದಿನ ದಿನಗಳನ್ನು ಕ್ಲೌಡ್‌, ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ, ಹೈಬ್ರಿಡ್‌ (Hybrid) ಕಾರ್ಯವಿಧಾನ ಮತ್ತು ವಿಶ್ವಾಸಾರ್ಹ ತಂತ್ರ ಜ್ಞಾನಗಳೇ ಆವರಿಸಲಿವೆ ಎಂದರು.

ಮೈಕ್ರೋಸಾಫ್ಟ್‌ (Microsoft) ಇಂಡಿಯಾದ (India) ಮುಖ್ಯಸ್ಥ ಅನಂತ್‌ ಮಹೇಶ್ವರಿ (Ananth Maheshwari) ಮಾತನಾಡಿ, ಭಾರತವು ಆರ್ಥಿಕ ಶಕ್ತಿಯಾಗಿ ಉಳಿಯಬೇಕಾದರೆ ದೇಶದ ಯುವ ಜನರಿಗೆ ಕೌಶಲ್ಯಗಳನ್ನು ಸಮರೋಪಾದಿಯಲ್ಲಿ ಒದಗಿಸಿ, ಎಲ್ಲರನ್ನೂ ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡಬೇಕು. ಕ್ಲೌಡ್‌ ತಂತ್ರಜ್ಞಾನ ಭಾರತದ ಎಲ್ಲ ಜನ ವರ್ಗಗಳನ್ನೂ ಒಳಗೊಳ್ಳುವಂತಹ ಬೆಳವಣಿಗೆಯನ್ನು ಮಾಡಲಿದೆ. ಡೇಟಾ ವಿಜ್ಞಾನ ಮತ್ತು ಕೃತಕ ಬುದ್ಧಿ ಮತ್ತೆಗಳು ದೇಶದ ಆರ್ಥಿಕ ಪುನಶ್ಚೇತನವನ್ನು ಮಾಡಲಿದೆ ಎಂದು ಅಭಿಪ್ರಾಯಪಟ್ಟರು.

ಇಂಟರ್ನೆಟ್  ಆರಂಭಕ್ಕೆ ಪೈಪೋಟಿ : 

ಉಪಗ್ರಹಗಳನ್ನು(Satellite) ಬಳಸಿ 1 ಜಿಬಿಪಿಎಸ್‌ಗಿಂತಲೂ ವೇಗದ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ದೇಶದಲ್ಲಿ ಆರಂಭಿಸಲು ವಿಶ್ವದ ಶ್ರೀಮಂತ ಉದ್ಯಮಿಗಳಾದ ಅಮೆಜಾನ್‌(Amazon) ಕಂಪನಿಯ ಜೆಫ್‌ ಬೆಜೋಸ್‌(Jeff Bezos) ಹಾಗೂ ಸ್ಪೇಸ್‌ ಎಕ್ಸ್‌ನ ಒಡೆಯ ಎಲೊನ್‌ ಮಸ್ಕ್‌(Elon Musk) ಮುಂದೆ ಬಂದಿದ್ದಾರೆ.

ದೇಶದಲ್ಲಿ ಈಗ ಕೇಬಲ್‌ ಆಧರಿತ ಬ್ರಾಡ್‌ಬ್ಯಾಂಡ್‌(Boadband) ಸೇವೆ ಬಳಕೆಯಲ್ಲಿದೆ. ಆದರೆ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್‌ ಸಂಪರ್ಕ ಸಾಧ್ಯವಾದರೆ ಗ್ರಾಮೀಣ ಪ್ರದೇಶಗಳು, ಮರುಭೂಮಿಯಲ್ಲೂ ವೇಗದ ಸಂಪರ್ಕ ಸಾಧ್ಯವಾಗಲಿದೆ. ಅಮೆಜಾನ್‌ ಹಾಗೂ ಎಲೊನ್‌ ಮಸ್ಕ್‌ರ ಸ್ಟಾರ್‌ ಲಿಂಕ್‌ ದೇಶದಲ್ಲಿ ಸೇವೆ ಆರಂಭಿಸಿದರೆ ಏರ್‌ಟೆಲ್‌ ಹಾಗೂ ರಿಲಯನ್ಸ್‌ ಜಿಯೋ ಕಂಪನಿಗಳಿಗೆ ಭಾರಿ ಪೈಪೋಟಿ ಏರ್ಪಡಲಿದೆ.

ಅಮೆರಿಕದ ಈ ಎರಡೂ ಕಂಪನಿಗಳು ಪ್ರತ್ಯೇಕ ಯೋಜನೆಗಳೊಂದಿಗೆ ಈಗಾಗಲೇ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿವೆ. ಆದರೆ ಇನ್ನೂ ಅಧಿಕೃತವಾಗಿ ಲೈಸೆನ್ಸ್‌ ಕೋರಿ ಅರ್ಜಿ ಸಲ್ಲಿಸಿಲ್ಲ. ಏತನ್ಮಧ್ಯೆ, 2022ರ ಡಿಸೆಂಬರ್‌ನಿಂದ ಭಾರತದಲ್ಲಿ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್‌ ಸೇವೆ ಆರಂಭಿಸುವುದಾಗಿ ಮಸ್ಕ್‌ರ ಸ್ಟಾರ್‌ ಲಿಂಕ್‌ ಶುಕ್ರವಾರ ಅಧಿಕೃತವಾಗಿ ಘೋಷಣೆ ಮಾಡಿದೆ.

ಸದ್ಯ ಒನ್‌ ವೆಬ್‌ ಎಂಬ ಕಂಪನಿ ಭಾರತದಲ್ಲಿ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್‌ ಸೇವೆ ಆರಂಬಿಸಲು ಅನುಮತಿ ಪಡೆದಿದ್ದು, ಮುಂದಿನ ವರ್ಷ ಸೇವೆ ಆರಂಭಿಸಲಿದೆ.

ಭೂಮಿಯಿಂದ 1000 ಕಿ.ಮೀ. ದೂರದಲ್ಲಿ ಸುತ್ತುತ್ತಿರುವ ಉಪಗ್ರಹಗಳನ್ನು ಬಳಸಿಕೊಂಡು ಇಂಟರ್ನೆಟ್‌ ಸೇವೆ ನೀಡುವುದು ಈ ಕಂಪನಿಗಳ ಉದ್ದೇಶ. ಉಪಗ್ರಹಗಳ ಬ್ಯಾಂಡ್‌ವಿಡ್‌್ತ ಅನ್ನು ಉದ್ದಿಮೆಗಳು, ರೈಲ್ವೆ, ಹಡಗು ಕಂಪನಿಗಳು, ರಕ್ಷಣಾ ಸ್ಥಾವರಗಳು, ವಿಮಾನಯಾನ ಕಂಪನಿಗಳು ಹಾಗೂ ದೂರ ಸಂಪರ್ಕ ಕಂಪನಿಗಳಿಗೆ ನೇರವಾಗಿ ಮಾರಾಟ ಮಾಡುವ ಆಲೋಚನೆಯೂ ಇದೆ. ಈ ಸೇವೆಯಿಂದ ಇಂಟರ್ನೆಟ್‌ನಿಂದ ವಂಚಿತವಾಗಿರುವ ಗ್ರಾಮೀಣ ಪ್ರದೇಶಗಳು, ಮರುಭೂಮಿ, ಪರ್ವತ ಪ್ರದೇಶಗಳಲ್ಲೂ ವೇಗದ ಇಂಟರ್ನೆಟ್‌ ಲಭ್ಯವಾಗಲಿದೆ.

Follow Us:
Download App:
  • android
  • ios