ತಮ್ಮ ಪ್ರೀತಿಪಾತ್ರರಿಗಿಂತ ಯುವಜನತೆಗೆ ಮೊಬೈಲ್ ಮೇಲೆ ಕಾಳಜಿ ಹೆಚ್ಚು..!

First Published 25, Feb 2018, 6:29 PM IST
47 Percent Indians care more about Smartphones than their loved ones
Highlights

ಇಂದಿನ ದಿನ ಮಾನ ಸಂಪೂರ್ಣವಾಗಿ ತಂತ್ರಜ್ಞಾನ ಮಯವಾಗಿದೆ. ಅಲ್ಲದೇ ಮೊಬೈಲ್ ಇಲ್ಲದೇ ಬದುಕು ಅಸಾಧ್ಯವೆಂಬಂತೆ ಜನರಾಗಿದ್ದಾರೆ.  ಮೊಬೈಲ್ ಎನ್ನುವುದು ಜೀವನದ ಒಂದು ಭಾಗವೇ ಆಗಿದೆ. ಇಂದು ಸ್ಮಾರ್ಟ್ ಅಡಿಕ್ಷನ್ ಎನ್ನುವುದು ಎಲ್ಲಾ ವ್ಯಕ್ತಿಗಳನ್ನು ಕಾಡುತ್ತಿರುವಂತಹ ಸಮಸ್ಯೆಯಾಗಿದೆ.

ನವದೆಹಲಿ : ಇಂದಿನ ದಿನ ಮಾನ ಸಂಪೂರ್ಣವಾಗಿ ತಂತ್ರಜ್ಞಾನ ಮಯವಾಗಿದೆ. ಅಲ್ಲದೇ ಮೊಬೈಲ್ ಇಲ್ಲದೇ ಬದುಕು ಅಸಾಧ್ಯವೆಂಬಂತೆ ಜನರಾಗಿದ್ದಾರೆ.  ಮೊಬೈಲ್ ಎನ್ನುವುದು ಜೀವನದ ಒಂದು ಭಾಗವೇ ಆಗಿದೆ. ಇಂದು ಸ್ಮಾರ್ಟ್ ಅಡಿಕ್ಷನ್ ಎನ್ನುವುದು ಎಲ್ಲಾ ವ್ಯಕ್ತಿಗಳನ್ನು ಕಾಡುತ್ತಿರುವಂತಹ ಸಮಸ್ಯೆಯಾಗಿದೆ.

ಈ ಬಗ್ಗೆ ಇದೀಗ ಇನ್ನೊಂದು ಇಂಟರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ವಿಶ್ವದ ಶೇ.33ರಷ್ಟು ಜನತೆ ತಮ್ಮ ಪ್ರೀತಿಪಾತ್ರರಿಗಿಂತ ಮೊಬೈಲ್ ಮೇಲೆ ಹೆಚ್ಚು ಕಾಳಜಿ ವಹಿಸುತ್ತಾರಂತೆ. ಭಾರತದಲ್ಲಿ ಶೆ.47ರಷ್ಟು ಮಂದಿ ತಮ್ಮ ಪ್ರೀತಿ ಪಾತ್ರರಿಗಿಂತಲೂ ಕೂಡ ಮೊಬೈಲ್’ನ್ನೇ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಎನ್ನಲಾಗಿದೆ.

ಅದರಲ್ಲೂ ಯುವಜನಾಂಗದಲ್ಲಿ ಮೊಬೈಲ್ ಕಾಳಜಿಯೂ ಹೆಚ್ಚಾಗುವುದರೊಂದಿಗೆ ಅದರೊಂದಿಗಿನ ಅಡಿಕ್ಷನ್ ಕೂಡ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

loader