ಅನಾವರಣಗೊಂಡಿದೆ ಮಾರುತಿ ಸುಜುಕಿ ನೂತನ ವಿಟಾರ ಬ್ರೀಜಾ ಫೇಸ್‌ಲಿಫ್ಟ್

First Published 31, Jul 2018, 5:10 PM IST
2019 Suzuki Vitara Facelift Unveiled
Highlights

ಭಾರತದ ಜನಪ್ರೀಯ ಕಾರು ಮಾರುತಿ ಸುಜುಕಿಯ ನೂತನ ವಿಟಾರ ಬ್ರೀಜಾ ಫೇಸ್‌ಲಿಫ್ಟ್ ಅನಾವರಣಗೊಂಡಿದೆ. ಈಗಾಗಲೇ ಭಾರತೀಯ ಕಾರು ಪ್ರೀಯರನ್ನ ಮೋಡಿ ಮಾಡಿರುವ ಬ್ರೀಜಾ ಇದೀಗ ಹೊಸ ತಂತ್ರಜ್ಞಾನ, ಆಕರ್ಷಕ ವಿನ್ಯಾಸದೊಂದಿಗೆ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ನೂತನ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಲಂಡನ್(ಜು.31): ಮಾರುತಿ ಸುಜುಕಿ ಕಾರು ಸಂಸ್ಥೆಯ ಜನಪ್ರೀಯ ಕಾರು ವಿಟಾರ ಬ್ರೀಜಾ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈಗಾಗಲೇ ಮಾರುತಿ ಸುಜುಕಿ ಸಂಸ್ಥೆ ನೂತನ ವಿಟಾರ ಬ್ರೀಜಾ ಫೇಸ್‌ಲಿಫ್ಟ್ ಕಾರನ್ನ ಅನಾವರಣಗೊಳಿಸಿದೆ.

ವಿಟಾರ ಬ್ರೀಜಾ ಫೇಸ್‌ಲಿಫ್ಟ್ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಬಿಡುಗಡೆಯಾಗಲಿದೆ. ಬಳಿಕ  ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ನೂತನ ಕಾರಿನ ವಿಶೇಷತೆ ಎಂದರೆ ಹಳೇ ಎಸ್‌ಯುವಿ ಬ್ರೀಜಾ ಕಾರಿಗಿಂತ ನೂತನ ವಿಟಾರ ಬ್ರೀಜಾ ಫೇಸ್‌ಲಿಫ್ಟ್ ಗಾತ್ರದಲ್ಲಿ ದೊಡ್ಡದು. ಜೊತೆಗೆ ಹೊಸ ಎರಡು ಬಣ್ಣಗಳಲ್ಲಿ ಕಾರು ಲಭ್ಯವಿದೆ.

ಹೊಸ ವಿನ್ಯಾಸ, ಹಾಗೂ ಆಡೀಶನಲ್ ಫೀಚರ್ಸ್ ಹೊಂದಿರೋ ವಿಟಾರ ಬ್ರೀಜಾ ಕಾರು ಫ್ರಂಟ್ ಬಂಪರ್, ಎಲ್ಇಡಿ, ಟಚ್ ಸ್ಕ್ರೀನ್ ಸೇರಿದಂತೆ ಬಹುತೇಕ ಭಾಗಗಳು ಹೊಸ ವಿನ್ಯಾಸಗಳೊಂದಿಗೆ ಹೆಚ್ಚು ಆಕರ್ಷಕವಾಗಿದೆ.

ನೂತನ ವಿಟಾರ ಬ್ರೀಜಾ ಫೇಸ್‌ಲಿಫ್ಟ್ 1.0 ಹಾಗೂ 1.4 ಲೀಟರ್ ಪೆಟ್ರೋಲ್ ಇಂಜಿನ್‌ನಲ್ಲೂ ಲಭ್ಯವಿದೆ. ಫೋರ್ ವೀಲ್ ಡ್ರೈವ್ ಸಿಸ್ಟಮ್ ಹಾಗೂ ಡ್ಯುಯೆಲ್ ಸೆನ್ಸಾರ್ ಬ್ರೇಕ್ ಕೂಡ ನೂನತ ಕಾರಿನ ವಿಶೇಷತೆ.

191 ದೇಶಗಳಲ್ಲಿ ವಿಟಾರ ಬ್ರೀಜಾ ಅತ್ಯಧಿಕರ ಸಂಖ್ಯೆಯಲ್ಲಿ ಮಾರಾಟವಾಗಿದೆ. ಭಾರತದಲ್ಲಿ ದಾಖಲೆ ಬರೆದಿರುವ ಬ್ರೀಜಾ ಇದೀಗ ಮತ್ತೆ ಮೋಡಿ ಮಾಡಲು ಸಜ್ಜಾಗಿದೆ. ಹ್ಯುಂಡೈ ಕ್ರೆಟಾ, ಜೀಪ್ ಕಾರುಗಳಿಗೆ ಬ್ರೀಜಾ ಫೆಸ್‍‌ಲಿಫ್ಟ್  ಭಾರಿ ಪೈಪೋಟಿ ನೀಡಡಲಿದೆ.  

ಸದ್ಯ ವಿಟಾರ ಬ್ರೀಜಾ ಫೇಸ್‌ಲಿಫ್ಟ್ ಕಾರು ಅನಾವರಣಗೊಂಡಿದೆ. 2019ರ ಆರಂಭದಲ್ಲಿ ಯುಕೆಯಲ್ಲಿ ಬಿಡುಗಡೆ ಬಳಿಕ ಭಾರತಕ್ಕೆ ಕಾಲಿಡಲಿದೆ. ಆದರೆ ಸದ್ಯ ಇದರ ಬೆಲೆ ಮಾತ್ರ ಬಹಿರಂಗ ಪಡಿಸಿಲ್ಲ. ಆದರೆ ಈ ಭಾರಿ ಪೆಟ್ರೋಲ್ ಇಂಜಿನ್ ಕೂಡ ಲಭ್ಯವಿರೋದರಿಂದ ಬೆಲೆ ಕಡಿಮೆ ಇರಲಿದೆ.

loader