ಆಗಸ್ಟ್‌ನಲ್ಲಿ ರಸ್ತೆಗಿಳಿಯಲಿದೆ ಮಾರುತಿ ಸುಜುಕಿ ಸಿಯಾಝ್ ಫೇಸ್‌ಲಿಫ್ಟ್-ಬೆಲೆ ಎಷ್ಟು?

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 14, Jul 2018, 10:23 PM IST
2018 Maruti Ciaz Facelift Launch On 6 August
Highlights

ಮಾರುತಿ ಸುಜುಕಿ ಸಿಯಾಝ್ ಫೇಸ್‌ಲಿಫ್ಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 6 ರಂದು ಸಿಯಾಝ್ ಫೇಸ್‌ಲಿಫ್ಟ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ನೂತನ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.
 

ಬೆಂಗಳೂರು(ಜು.14): ಭಾರತದ ಅತ್ಯಂತ ಜನಪ್ರೀಯ ಕಾರುನಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಅಗ್ರಸ್ಥಾನದಲ್ಲಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರುತಿ ಸುಜುಕಿ ಸಂಸ್ಥೆ ಕಾರುಗಳನ್ನ ಬಿಡುಗಡೆ ಮಾಡಿ, ಮಾರಾಟದಲ್ಲೂ ಸೈ ಎನಿಸಿಕೊಂಡಿದೆ.

ಮಾರುತಿ ಸುಜುಕಿ ಸಿಯಾಝ್ ಬಳಿಕ ಇದೀಗ ನೂತನ ಸಿಯಾಝ್ ಫೇಸ್‌ಲಿಫ್ಟ್ ಗ್ರಾಹಕರನ್ನ ತಲುಪಲು ಸಜ್ಜಾಗಿದೆ. ಆಗಸ್ಟ್ 6 ರಂದು ಸಿಯಾಝ್ ಬಿಡುಗಡೆಯಾಗಲಿದೆ. ಆಗಸ್ಟ್ 10 ರಂದು ಭಾರತದ ಎಲ್ಲಾ ಶೋ ರೂಂಗಳಲ್ಲಿ ಸಿಯಾಝ್ ಫೇಸ್‌ಲಿಫ್ಟ್ ತಲುಪಲಿದೆ. ಇನ್ನು ಆಗಸ್ಟ್ ಅಂತಿಮ ವಾರದಲ್ಲಿ ಸಿಯಾಝ್ ಫೇಸ್‌ಲಿಫ್ಟ್ ಗ್ರಾಹಕರ ಕೈಸೇರಲಿದೆ ಎಂದು ಮಾರುತಿ ಸುಜುಕಿ ಸ್ಪಷ್ಟಪಡಿಸಿದೆ.

ನೂತನ ಸಿಯಾಝ್ ಫೇಸ್‌ಲಿಫ್ಟ್ ಬೆಲೆ 7.83 ಲಕ್ಷದಿಂದ 11.51 ಲಕ್ಷ ರೂಪಾಯಿ(ಎಕ್ಸ್ ಶೋರೂಂ) ಎಲ್ಇಡಿ ಹೆಡ್ ಲ್ಯಾಂಪ್ಸ್, ಆಕರ್ಷಕ ಫಾಗ್ ಲ್ಯಾಂಪ್ಸ್ ಸೇರಿದಂತೆ ಹಲವು ವೈಶಿಷ್ಟ್ಯದೊಂದಿಗೆ ಸಿಯಾಝ್ ಫೇಸ್‌ಲಿಫ್ಟ್ ಬಿಡುಗಡೆಯಾಗುತ್ತಿದೆ.

ಮಲ್ಟಿ ಸ್ಪೋಕ್ ಅಲಾಯ್ ಚಕ್ರಗಳು, ಹಾಗೂ ನೂತನ ವಿನ್ಯಾಸ ಕೂಡ ಹೊಂದಿದೆ. ಇದರಲ್ಲಿ 1.5 ಲೀಟರ್ ಪೆಟ್ರೋಲ್ ಇಂಜಿನ್ ಕೂಡ ಲಭ್ಯವಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ನೂತನ ಸಿಯಾಝ್ ಮಾರುಕಟ್ಟೆಯಲ್ಲಿ ಮೋಡಿ ಮಾಡಲಿದೆ ಅನ್ನೋ ವಿಶ್ವಾಸ ಮಾರುತಿ ಸುಜುಕಿ ಸಂಸ್ಥೆಯದ್ದಾಗಿದೆ.

loader