ನೂತನ ಹೊಂಡಾ ಜಾಝ್ ಬಿಡುಗಡೆ-ಬೆಲೆ 7.35 ಲಕ್ಷ!

First Published 19, Jul 2018, 6:36 PM IST
2018 Honda Jazz launched at Rs 7.35 lakh
Highlights

ಹೊಂಡಾ ಸಂಸ್ಥೆಯ ನೂತನ ಜಾಝ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಮಾರುತಿ ಬಲೆನೋ, ಹ್ಯುಂಡೈ ಐ20 ಕಾರುಗಳಿಗೆ ತೀವ್ರ ಪೈಪೋಟಿ ನೀಡಲು ಸಜ್ಜಾಗಿರುವ ನೂತನ ಜಾಝ್ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

ಬೆಂಗಳೂರು(ಜು.19): ಹೊಂಡಾ ಮೊಟಾರು ಸಂಸ್ಥೆಯ ಜನಪ್ರೀಯ ಕಾರು ಹೊಂಡಾ ಜಾಝ್ ಹೊಸ ಫೀಚರ್ಸ್‌ಗಳೊಂದಿಗೆ ಮತ್ತೆ ಬಿಡುಗಡೆಯಾಗಿದೆ. 2018ರ ನೂತನ ಜಾಝ್ ಕಾರು ಪ್ರೀಯರನ್ನ ಮೋಡಿ ಮಾಡಲು ಸಜ್ಜಾಗಿದೆ.

ಹಳೇ ಜಾಝ್ ಹಾಗೂ ನೂತನ ಜಾಝ್ ಕಾರಿನ ಇಂಜಿನ್ ಹಾಗೂ ಸಮಾರ್ಥ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಕೆಲ ಅಡೀಶನಲ್ ಫೀಚರ್ಸ್ ನೂತನ ಜಾಝ್ ಕಾರಿನ ವಿಶೇಷ. ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್(ಎಎಂಟಿ) ಹೊಂದಿರುವ ನೂನತ ಜಾಝ್ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. 

ಸಿವಿಟಿ ಟಕ್ನಾಲಜಿ, ಎಲ್ಇಡಿ ವಿಂಗ್ ಲೈಟ್ಸ್ ಕ್ರೋಮ್ ಡೋರ್ ಹ್ಯಾಂಡಲ್ಸ್, 7 ಇಂಚ್ ಟಚ್ ಸ್ಕ್ರೀನ್ ಹಾಗೂ ಸ್ಟೀಲ್ ಅಲೋಯ್ ವೀಲ್ಸ್ ನೂತನ ಕಾರಿನ ವಿಶೇಷತೆ. ಕೀ ಲೆಸ್ ರಿಮೂಟ್ ಜೊತೆಗೆ ಶಬ್ದ ಹಾಗೂ ವೈಬ್ರೇಶನ್ ಸಮಸ್ಯೆಯನ್ನ ನೂನತ ಕಾರಿನಲ್ಲಿ ನೀಗಿಸಲಾಗಿದೆ.

ಪೆಟ್ರೋಲ್ ಹಾಗೂ ಡಿಸೆಲ್ ಇಂಜಿನ್‌ಗಳಲ್ಲಿ ನೂತನ ಜಾಝ್ ಕಾರು ಲಭ್ಯವಿದೆ. ಬೆಲೆ 7.35 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಪ್ರಾರಂಭವಾಗಲಿದೆ. ಟಾಪ್ ವೇರಿಯೆಂಟ್ ಬೆಲೆ 9.29 ಲಕ್ಷ ರೂಪಾಯಿ (ಎಕ್ಸ್ ಶೂಂರೂಂ). ಪೆಟ್ರೋಲ್‌ನಲ್ಲಿ 1.2 ಹಾಗೂ ಡೀಸೆಲ್‌ ಕಾರಿನಲ್ಲಿ 1.5 ಲೀಟರ್ ಇಂಜಿನ್ ಹೊಂದಿದೆ. 


 

loader