ಬೆಂಗಳೂರು(ಅ.03): ಫೋರ್ಡ್ ಕಾರು ಸಂಸ್ಥೆಯ ಫೋರ್ಡ್ ಆಸ್ಪೈರ್ ಇದೀಗ ಹೊಸ ಅವತಾರದಲ್ಲಿ ರಸ್ತೆಗಳಿಯುತ್ತಿದೆ. ಅಸ್ಪೈರ್ ಫೇಸ್‌ಲಿಫ್ಟ್ ನಾಳೆ ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಹಲವು ವಿಶೇಷತೆ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿರುವ ಅಸ್ಪೈರ್ ಇದೀಗ ಹೊಂಡಾ ಅಮೇಜ್, ಮಾರುತಿ ಸುಜುಕಿ ಡಿಸೈರ್, ಹ್ಯುಂಡೈ ಎಕ್ಸೆಂಟ್ ಸೇರಿದಂತೆ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡಲು ರೆಡಿಯಾಗಿದೆ. 

ಮುಂಭಾಗದ ಬಂಪರ್ ಹಾಗೂ ಗ್ರಿಲ್‌ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಈ ಮೂಲಕ ನ್ಯೂ ಲುಕ್ ನೀಡಲಾಗಿದೆ. 15 ಇಂಚು ಆಲೋಯ್ ವೀಲ್ಸ್ ಬಳಸಲಾಗಿದೆ. SYNC 3 ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ.

6.5 ಇಂಚಿನ ಟಚ್ ಸ್ಕ್ರೀನ್ ಹೊಂದಿದೆ. ಇದು ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಅಟೋಗೆ ಸಪೋರ್ಟ್ ಮಾಡಲಿದೆ. 1.2 ಡ್ರಾಗನ್ ಸೀರಿಸ್ ಪೆಟ್ರೋಲ್ ಇಂಜಿನ್, ಜೊತೆಗೆ ಎಎಂಟಿ(ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್) ಹೊಂದಿದೆ. 

ಫೇಸ್‌ಲಿಫ್ಟ್ ಆಸ್ಪೈರ್ ಬೆಲೆ 5.72 ಲಕ್ಷ ರೂಪಾಯಿಯಿಂದ 8.62 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ) ಇತರ ಸೆಡಾನ್ ಕಾರುಗಳಿಗೆ ಹೋಲಿಸಿದರೆ ಬೆಲೆ ಕಡಿಮೆ ಹಾಗೂ ಗರಿಷ್ಠ ಸುರಕ್ಷತೆ ನೀಡಲಿದೆ. ಇಷ್ಟೇ ಅಲ್ಲ ಕಡಿಮೆ ಮಂಟೈನೆನ್ಸ್ ಕೂಡ ಫೋರ್ಡ್ ಆಸ್ಪೈರ್ ಕಾರಿನ ವಿಶೇಷತೆ.