ನೂತನ ಸ್ಕೂಟರ್'ನ ದೆಹಲಿ ಶೋರೂಮ್ ಬೆಲೆ 110ಸಿಸಿಗೆ 50,176 ರೂ. ಹಾಗೂ 125 ಸಿಸಿ ಬೆಲೆ 53,171 ರೂ.ಗಳಾಗಿದೆ.  ಈ ಸ್ಕೂಟರ್'ಗಳು ಬಜಾಜ್ ಅವೆಮಜರ್ ರೇಂಜ್, ನೂತನ ಕಲರ್ ಸ್ಕೀಮ್'ನ ಬಜಾಜ್ ಡೊಮಿನಾರ್ 400 ಹಾಗೂ  ಬಜಾಜ್ ವಿ15ರ ಅಪ್'ಡೆಟ್'ಗಳನ್ನು ಒಳಗೊಂಡಿದೆ.

ಭಾರತದ ಪ್ರತಿಷ್ಟಿತ ಮೋಟರ್ ಸೈಕಲ್ ಕಂಪನಿ ಬಜಾಜ್ ಮಧ್ಯಮ ವರ್ಗದ ಜನತೆಗಾಗಿ 2018ನೇ ಆವೃತ್ತಿಯ ಬಜಾಜ್ ಡಿಸ್ಕವರ್ 110 ಹಾಗೂ 125 ಸಿಸಿ 2 ಬೈಕ್'ಗಳನ್ನು ಬಿಡುಗಡೆ ಮಾಡಿದೆ.

ನೂತನ ಸ್ಕೂಟರ್'ನ ದೆಹಲಿ ಶೋರೂಮ್ ಬೆಲೆ 110ಸಿಸಿಗೆ 50,176 ರೂ. ಹಾಗೂ 125 ಸಿಸಿ ಬೆಲೆ 53,171 ರೂ.ಗಳಾಗಿದೆ. ಈ ಸ್ಕೂಟರ್'ಗಳು ಬಜಾಜ್ ಅವೆಮಜರ್ ರೇಂಜ್, ನೂತನ ಕಲರ್ ಸ್ಕೀಮ್'ನ ಬಜಾಜ್ ಡೊಮಿನಾರ್ 400 ಹಾಗೂ ಬಜಾಜ್ ವಿ15ರ ಅಪ್'ಡೆಟ್'ಗಳನ್ನು ಒಳಗೊಂಡಿದೆ.

110 ಸಿಸಿಯಲ್ಲಿ 8.6ಪಿಎಸ್ ಪವರ್ ಹಾಗೂ ಟಾರ್ಕು'ನ 9.81 ಎನ್'ಎಂ ಪವರ್, ಸೆಮಿ ಡಿಜಿಟಲ್ ಇಸ್ಟ್ರುಮೆಂಟ್ ಕ್ಲಸ್ಟ'ರ್ ಹಾಗೂ ಎಲ್'ಇಡಿ ಡಿಆರ್'ಎಲ್'ಎಸ್'ಗಳನ್ನು ಒಳಗೊಂಡಿದ್ದು ಟಿವಿಎಸ್ ವಿಕ್ಟ'ರ್ ಹಾಗೂ ಹೀರೋ ಸ್ಪ್ಲೆಂಡರ್ ಐ ಸ್ಮಾರ್ಟ್ 110ಗೆ ಸ್ಪರ್ಧಿಯಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

125 ಸಿಸಿ ಬೈಕ್ ಸಿಂಗಲ್ ಸಿಲಿಂಡರ್ ಇಂಜಿನ್, 11ಪಿಎಸ್ ಪವರ್, 10.8ಎನ್'ಎಮ್ ಟಾರ್ಕ್ಯೂ, ಸೆಮಿ ಸೆಮಿ ಡಿಜಿಟಲ್ ಇಸ್ಟ್ರುಮೆಂಟ್ ಕ್ಲಸ್ಟ'ರ್ ಹಾಗೂ ಎಲ್'ಇಡಿ ಡಿಆರ್'ಎಲ್'ಎಸ್'ಗಳನ್ನು ಹೊಂದಿದ್ದು, ಹೋಂಡಾ ಸಿಬಿ ಶೈನ್ ಹಾಗೂ ಹೀರೋ ಗ್ಲ್ಯಾಮರ್ 125 ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಗೊಳಿಸಲಾಗಿದೆ. ಈ ಬೈಕ್'ಗಳು ಶೀಘ್ರದಲ್ಲಿಯೇ ಬೆಂಗಳೂರಿನ ಮಾರುಕಟ್ಟೆಗೆ ಲಗ್ಗೆಯಿಡಲಿದೆ.