ನೀವು ನೋಡದೆ, ಉಪಯೋಗಿಸದಿರುವ ವಾಟ್ಸ'ಪ್'ನ 10 ರೋಮಾಂಚಕ ಫೀಚರ್'ಗಳು

technology | 3/16/2018 | 10:46:00 AM
Chethan Kumar
Suvarna Web Desk
Highlights

ಗ್ರೂಪ್'ಗಳ ಮೂಲಕ ಸುದ್ದಿ, ಮಾಹಿತಿಗಳನ್ನು ಬೇಗನೆ ಹಂಚಿಕೊಳ್ಳುತ್ತಿದ್ದಾರೆ

ವಿಶ್ವದಲ್ಲಿ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಮಾಧ್ಯಮಗಳಲ್ಲಿ ವಾಟ್ಸ'ಪ್ ಮೊದಲ ಸ್ಥಾನವನ್ನು ಅಲಂಕರಿಸಿದೆ. ಸಣ್ಣ ಹುಡುಗರಿಂದ ವೃದ್ಧರವರೆಗೂ ಪ್ರತಿಯೊಬ್ಬರೂ ಇದರ ಬಳಕೆದಾರರೆ. ಗ್ರೂಪ್'ಗಳ ಮೂಲಕ ಸುದ್ದಿ, ಮಾಹಿತಿಗಳನ್ನು ಬೇಗನೆ ಹಂಚಿಕೊಳ್ಳುತ್ತಿದ್ದಾರೆ. ಈ ವಾಟ್ಸ'ಪ್'ನನಲ್ಲಿ ಬಹುತೇಕರು ಬಳಸದಿರುವ 10 ಅದ್ಭುತ ಆಪ್ಷನ್'ಗಳಿವೆ. ಇವುಗಳಿಂದ ಇನ್ನಷ್ಟು ಅನುಕೂಲ ಪಡೆಯಬಹುದು.

1) ವಾಟ್ಸ'ಪ್ ಮೂಲಕ ಶುಲ್ಕಗಳನ್ನು ಪಾವತಿಸಬಹುದು: ವಾಟ್ಸ'ಪ್ ಮೂಲಕ ನೀವು ವಿವಿಧ ಸೇವೆಗಳನ್ನು ಪಾವತಿಸಬಹುದು. ಯುಪಿಐ ಪಾವತಿ ಆಯ್ಕೆ ಮೂಲಕ ಹಣವನ್ನು ಪಾವತಿಸಬಹುದು ಹಾಗೂ ಸ್ವೀಕರಿಸಬಹುದು. ಇದಕ್ಕಾಗಿ ಕಂಪನಿಯು  ಐಸಿಐಸಿ'ಐ, ಹೆಚ್'ಡಿಎಫ್'ಸಿ, ಆಕ್ಸಿಸ್, ಎಸ್'ಬಿಐ ಎಸ್ ಬ್ಯಾಂಕ್'ಗಳಲ್ಲದೆ ಹಲವು ಬ್ಯಾಂಕ್'ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ.

2) ಡೆಲಿಟ್ ಫಾರ್ ಎವರಿ'ಒನ್:  ನೀವು ಗ್ರೂಪಿ'ನಲ್ಲಿ ಹಾಗೂ ವೈಯುಕ್ತಿಕವಾಗಿ ಕಳಿಸಿರುವ ಸಂದೇಶಗಳನ್ನು ಮೊದಲು 7 ನಿಮಿಷದೊಳಗೆ ಶಾಶ್ವತವಾಗಿ ಡಿಲೀಟ್ ಮಾಡಬಹುದಿತ್ತು. ಈಗ ಒಂದು ಗಂಟೆಗೂ ಹೆಚ್ಚು ಅವಧಿಯನ್ನು ನೀಡಲಾಗಿದೆ. ಮೆಸೇಜ್'ಅನ್ನು ಒತ್ತಿ ಹಿಡಿದರೆ ಈ ಆಯ್ಕೆ ಬರುತ್ತದೆ.

3)  ಗ್ರೂಪಿನ ಸದಸ್ಯರು ಹೆಚ್ಚು ಬರೆದುಕೊಳ್ಳಬಹುದು: ಮೊದಲು ಗ್ರೂಪಿನಲ್ಲಿ ಕೆಲ ಅಕ್ಷರಗಳನ್ನು ಮಾತ್ರ ನಮೂದಿಸಬಹುದಿತ್ತು. ಈಗ 500 ಪದಗಳವರೆಗೂ ಬರೆದುಕೊಳ್ಳಬಹುದು.

4) ಗ್ರೂಪ್ ವಿಡಿಯೋ ಕಾಲಿಂಗ್: ವಾಟ್ಸ'ಪ್ ಗ್ರೂಪ್ ವಿಡಿಯೋ ಕಾಲಿಂಗ್'ನಲ್ಲಿ ಏಕ ಕಾಲದಲ್ಲಿ 4 ಜನರೊಂದಿಗೆ ನಾಲ್ವರೊಂದಿಗೆ ಮಾತನಾಡಬಹುದು.

5) ಲೊಕೇಷನ್ ಹಾಗೂ ಟೈಮ್ ಸ್ಟಿಕರ್ಸ್: ವಾಟ್ಸಪ್'ನಲ್ಲಿ ಲೊಕೇಷನ್ ಸೇರಿಸಿಕೊಳ್ಳಬಹುದು ಹಾಗೂ ನಿಮಗೆ ಬೇಕಾದವರೊಂದಿಗೆ ಪೋಟೊ, ವಿಡಿಯೋದೊಂದಿಗೆ ಟೈಮ್ ಸ್ಟಿಕರ್ಸ್'ಗಳನ್ನು ಶೇರ್ ಮಾಡಿಕೊಳ್ಳಬಹುದು.

6) ವಾಯ್ಸ್'ನಿಂದ ವಿಡಿಯೋಗೆ ಬದಲಾಯಿಸಿಕೊಳ್ಳಬಹುದು: ಬಳಕೆದಾರರು ವಾಯ್ಸ್ ಕಾಲ್ ಮಾಡುತ್ತಲೆ ಅದನ್ನು ವಿಡಿಯೋ ಕಾಲ್'ಗೆ ಬದಲಾಯಿಸಿಕೊಳ್ಳಬಹುದು. ಆದರೆ ಇದನ್ನು ಅನುಮತಿಸುವ ಮೊದಲು ಕಾಲ್ ಮಾಡುವವರ ಒಪ್ಪಿಗೆ ಬೇಕಾಗುತ್ತದೆ.

7) ಆಪಲ್ ಕಾರ್'ಪ್ಲೈ'ನೊಂದಿಗೆ ಸಂಪರ್ಕ: ವಾಟ್ಸಪ್ ಆಪರ್ ಕಾರ್'ಪ್ಲೈ'ನೊಂದಿಗೆ ಸಂಪರ್ಕ ನೀಡಲಾಗಿದ್ದು ಐಫೋನ್ ಹಾಗೂ ಐಪಾಡ್ ಬಳಕೆದಾರರು ತಮ್ಮ ಸಂಪರ್ಕದಾರರ ಮಾಹಿತಿಗಳ ನೋಟಿಫಿಕೇಷನ್ ಪಡೆದುಕೊಳ್ಳಬಹುದು.

8) ಯುಟ್ಯೂಬ್'ನೊಂದಿಗೆ ಸಂಪರ್ಕ: ವಾಟ್ಸ'ಪ್ ಬಳಕೆದಾರರು ಯೂಟ್ಯೂಬ್ ವಿಡಿಯೋಗಳೊಂದಿಗೆ ನೇರವಾಗಿ ಚಾಟ್ ಮಾಡಬಹುದು. ಯುಟ್ಯೂಬ್ ವಿಡಿಯೋಗಳನ್ನು ಎಷ್ಟು ಬೇಕೋ ಅಷ್ಟು ಹಿಗ್ಗಿಸಿ ಕುಗ್ಗಿಸಿಕೊಳ್ಳಬಹುದು.

9) ಐಕಾನ್'ಗಳನ್ನು ಬದಲಿಸಿಕೊಳ್ಳಬಹುದು: ವಾಟ್ಸ'ಪ್ ಲೋಗೊವಿನ ಶೇಪ್'ಗಳನ್ನು ತಮ್ಮ ಮೊಬೈಲ್ ಆಯ್ಕೆಗೆ ತಕ್ಕಂತೆ ಯಾವ ರೀತಿ ಬೇಕೋ ಆ ರೀತಿ ಬದಲಿಸಿಕೊಳ್ಳಬಹುದು.

10) ಸ್ಪೆಷಲ್ ಲೈವ್ ಲೊಕೇಷನ್: ಬಳಕೆದಾರರು ಗ್ರೂಪಿನೊಂದಿಗೆ ಹಾಗೂ ವೈಯುಕ್ತಿಕವಾಗಿ ಲೈವ್ ಆಗಿ ಲೊಕೇಷನ್'ಗಳನ್ನು ಶೇರ್ ಮಾಡಿಕೊಳ್ಳಬಹುದು. ಇದರಲ್ಲಿ ಯೂಸರ್'ನ ಫೋಟೊ ಷೇರ್ ಮಾಡುವ ಬಳಕೆದಾರರಿಗೆ ಕಾಣಿಸಿಕೊಳ್ಳಲಿದೆ.

Comments 0
Add Comment

  Related Posts

  CM Two Constituencies Story

  video | 4/12/2018

  EX MLA Honey trap Story

  video | 4/12/2018

  Ex MLA Honey Trap Story

  video | 4/12/2018

  Actor Vajramuni relative Kidnap Story

  video | 4/12/2018 | 6:41:37 PM
  Chethan Kumar
  Associate Editor