ಬೆಂಗಳೂರು, (ಫೆ.18): ಬಹು ನಿರೀಕ್ಷೆ ಹುಟ್ಟಿಸಿರುವ ರಾಜ್ಯ ಬಜೆಟ್ ಮಂಡನೆಗೆ ಮೂಹೂರ್ತ ಫಿಕ್ಸ್ ಆಗಿದ್ದು, ಇಂದಿನ (ಗುರುವಾರ) ಸಂಪುಟ ಸಭೆಯಲ್ಲಿ ಬಜೆಟ್ ಅಧಿವೇಶನದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ಮುಂದಿನ ತಿಂಗಳ ಮಾರ್ಚ್ 8 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ ಮಾಹಿತಿ ನೀಡಿದರು. 

ಸಂಪುಟ ಸಭೆಯಲ್ಲಿ ಮೀಸಲಾತಿ ಬಗ್ಗೆ ಸಚಿವರಿಗೆ ಸಿಎಂ ಮಹತ್ವದ ಸೂಚನೆ

ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇಲಾಖೆವಾರು ಸರಣಿ ಸಭೆ ನಡೆಸುತ್ತಿದ್ದಾರೆ.

ಇನ್ನೂ, ಈ ವರ್ಷದ ರಾಜ್ಯ ಸರ್ಕಾರ ಬಜೆಟ್ ಮಂಡನೆ ಬಗ್ಗೆ ರಾಜ್ಯದ ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು, ಈ ಬಾರಿಯ ಬಜೆಟ್ ಯಾವ ಯಾವ ಕ್ಷೇತ್ರಕ್ಕೆ ಯಾವ ರೀತಿ ಲಾಭವಾಗಲಿದೆ?  ಜನಸಾಮಾನ್ಯರು, ರೈತರಿಗೆ ಎಷ್ಟರಮಟ್ಟಿಗೆ ಲಾಭದಾಯಕವಾಗಲಿದೆ ಎನ್ನುವುದನ್ನು ಕಾದು ನೋಡಬೇಕು.