Asianet Suvarna News Asianet Suvarna News

ಮೇ 03 ವಿಶೇಷ: ಕಾರ್ಮಿಕರಿಗೆ ಸಿಎಂ ಯಡಿಯೂರಪ್ಪ ಮಹತ್ವದ ಸಂದೇಶ..!

ಇಂದು (ಮೇ.01) ಕಾರ್ಮಿಕರ ದಿನಾಚರಣೆ.  ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶುಭಾಶಯ ತಿಳಿಸಿದ್ದು, ಜತೆಗೆ ಮಹತ್ವದ ಅಭಯವೊಂದನ್ನು ನೀಡಿದ್ದಾರೆ.

Yediyurappa Appeals To Labours Over Greetings On the Occasion Of May Day
Author
Bengaluru, First Published May 1, 2020, 4:14 PM IST

ಬೆಂಗಳೂರು, (ಮೇ.01): ದೇಶದಾದ್ಯಂತ ಇಂದು (ಮೇ.01) ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶುಭಕೋರಿದ್ದಾರೆ.

ಲಾಕ್‌ಡೌನ್, ಆರ್ಥಿಕತೆ ಸೇರಿದಂತೆ ಮತ್ತಿತರ ಬಗ್ಗೆ ಮಹತ್ವದ ಸಲಹೆ ಕೊಟ್ಟ ಸಿದ್ದು

ಅಲ್ಲದೇ ರಾಜ್ಯದ ಕಾರ್ಮಿಕರಿಗೆ ಸಿಎಂ ಬಿಸ್‌ ಯಡಿಯೂರಪ್ಪ ಅಭಯವೊಂದನ್ನು ನೀಡಿದ್ದು, ಕೋವಿಡ್19 ಸೋಂಕಿನಿಂದ ಉಂಟಾಗಿರುವ ಕಠಿಣ ಸಂದರ್ಭದಲ್ಲಿ ಸರ್ಕಾರ ಕಾರ್ಮಿಕರ ಬೆನ್ನಿಗೆ ನಿಂತಿದ್ದು, ಯಾರೂ ಕೂಡ ಆತಂಕಕ್ಕೊಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ಸಿಎಂ ಪತ್ರಿಕಾ ಹೇಳಿಕೆ ಇಂತಿದೆ.
ಪತ್ರಿಕಾ ಹೇಳಿಕೆ ನೀಡಿರುವ ಬಿಎಸ್‌ವೈ, ಕೋವಿಡ್19 ಸೋಂಕಿನಿಂದ ದೇಶದಾದ್ಯಂತ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿವೆ. ಇದರಿಂದ ದುಡಿದು ತಿನ್ನುವ ಕಾರ್ಮಿಕ ಬಂಧುಗಳು ಹೆಚ್ಚಿನ ತೊಂದರೆ ಅನುಭವಿಸಬೇಕಾಯಿತು. ಇಂತಹ ಕಠಿಣ ಸಂದರ್ಭದಲ್ಲಿ ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ.

ನಿಮ್ಮೆಲ್ಲರ ಸಹಾಕಾರದಿಂದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ಪರಿಸ್ಥಿತಿ ನಿಂತ್ರಣದಲ್ಲಿದೆ. ಶೀಘ್ರದಲ್ಲೇ ಆರ್ಥಿಕ ಚಟುವಟಿಕೆಗಳು ಮತ್ತೆ ಪ್ರಾರಂಭವಾಗುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ವಾಣಿಜ್ಯೋದ್ಯಮಿಗಳೊಂದಿಗೆ ಸಭೆ ನಡೆಸಿದ್ದು, ಕಾರ್ಮಿಕರ ಹಿತ ಕಾಯುವ ಹಾಗೂ ವೇತನ ಪಾವತಿ ಮಾಡುವಂತೆ ಮನವಿ ಮಾಡಿದೆ.

ಆದರಿಂದ ವಲಸೆ ಕಾರ್ಮಿಕರು ಆತಂಕಕ್ಕೆ ಒಳಗಾಗದೆ ಕೇಂದ್ರ ಸರ್ಕಾರದ ಸೂಚನೆ ಬಂದೊಡನೆ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆ ಪುನರಾರಂಭ ಮಾಡಲು ಸಹಕರಿಸುವಂತೆ ಮನವಿ ಮಾಡುತ್ತೇನೆ.

Follow Us:
Download App:
  • android
  • ios