Asianet Suvarna News Asianet Suvarna News

ಸ್ತ್ರೀರೋಗ ತಜ್ಞೆ, ಖ್ಯಾತ ಸಾಹಿತಿ ಡಾ.ಎಚ್. ಗಿರಿಜಮ್ಮ ನಿಧನ

  • ವೈದ್ಯಕೀಯ ಸಾಹಿತಿ ಹಾಗು ಖ್ಯಾತ ಸ್ತ್ರಿ ರೋಗ ತಜ್ಞೆ ಡಾ. ಎಚ್. ಗಿರಿಜಮ್ಮ ನಿಧನ
  • ಹುಟ್ಟೂರಾದ ದಾವಣಗೆರೆಯಲ್ಲಿ  ಹೃದಯಾಘಾತದಿಂದ ಖ್ಯಾತ ವೈದ್ಯೆ ಗಿರಿಜಮ್ಮ ಇಂದು ನಿಧನ 
writer and famous gynaecologist Dr h girijamma passes away  snr
Author
Bengaluru, First Published Aug 17, 2021, 3:16 PM IST
  • Facebook
  • Twitter
  • Whatsapp

ದಾವಣಗೆರೆ (ಆ.17)  : ಹಿರಿಯ ಲೇಖಕಿ, ವೈದ್ಯ ಸಾಹಿತಿ, ಪ್ರಸೂತಿ ಮತ್ತು ಸೀ ರೋಗ ತe ಡಾ.ಎಚ್.ಗಿರಿಜಮ್ಮ ನಗರದ ಎಸ್.ಎಸ್.ಬಡಾವಣೆಯ ತಮ್ಮ ನಿವಾಸದಲ್ಲಿ ಮಂಗಳವಾರ ಬೆಳಗಿನ ಜಾವ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಪತಿ, ಸಹೋದರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ನಗರದ ಪಿ.ಬಿ.ರಸ್ತೆಯ ವೈಕುಂಠ ಧಾಮದಲ್ಲಿ ಮಂಗಳವಾರ ಸಂಜೆ ಡಾ.ಗಿರಿಜಮ್ಮ ಅವರ ಅಂತ್ಯಕ್ರಿಯೆ ನೆರವೇರಿತು.
ಬೆಂಗಳೂರು, ಹರಿಹರದಲ್ಲಿ ಸರ್ಕಾರಿ ವೈದ್ಯೆಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ನಿವೃತ್ತಿ ನಂತರ ನಗರದ ಎಸ್ಸೆಸ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ್ದರು. ಆರೋಗ್ಯ ಕ್ಷೇತ್ರದ ಜೊತೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಅಪರೂಪದ ಸಾಧನೆ ಮಾಡಿದವರು ಡಾ.ಗಿರಿಜಮ್ಮ. ವೃತ್ತಿಯಲ್ಲಿ ವೈದ್ಯರಾಗಿದ್ದು, ಪ್ರವೃತ್ತಿಯಲ್ಲಿ ಹೆಸರಾಂತ ಸಾಹಿತಿಯಾಗಿದ್ದವರು.

ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 17 ಕೃತಿಗಳನ್ನು ರಚಿಸಿರುವ ಡಾ.ಗಿರಿಜಮ್ಮ ಹೂ ಬನ ಸೇರಿದಂತೆ 16 ಕಾದಂಬರಿಗಳು, ಹೂ ಬಳ್ಳಿಗೆಲ್ಲಿ ಆಸರೆ ಸೇರಿದಂತೆ 9 ಕಥಾ ಸಂಕಲನ, ಆರೋಗ್ಯವಂತ ಮಗು ಸೇರಿದಂತೆ 26 ವೈದ್ಯಕೀಯ ಲೇಖನಗಳು, ಏಡ್ಸ್ ನಿವಾರಣೆ ಆಂದೋಲನ ಸೇರಿದಂತೆ 13 ಕಿರು ನಾಟಕಗಳು, 15 ನಾಟಕ ಕೃತಿಗಳು, ಟೆಲಿ ಧಾರಾವಾಹಿಗಳು, ಸಾಕ್ಷ್ಯ ಚಿತ್ರಗಳನ್ನು ರೂಪಿಸಿದ್ದಾರೆ. ಚಲನಚಿತ್ರವನ್ನೂ ಡಾ.ಗಿರಿಜಮ್ಮ ನಿರ್ದೇಶಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಹಲಿಂಗ ರಂಗ ಪ್ರಶಸ್ತಿ, ವನಿತಾ ಸಮಾಜದ ಸಾಹಿತ್ಯ ಶ್ರೀ ಪ್ರಶಸ್ತಿ ಹೀಗೆ ನೂರಾರು ಸಂಘ-ಸಂಸ್ಥೆಗಳ ಪ್ರಶಸ್ತಿಗೆ ಪಾತ್ರರಾಗಿದ್ದವರು.

ಇದು ಮಹಿಳೆಯರ ಬಂಜೆತನದ ಲಕ್ಷಣ, ಇರಲಿ ಕೊಂಚ ಎಚ್ಚರ!

ಜನಪ್ರಿಯ ವೈದ್ಯೆಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದ ಡಾ.ಗಿರಿಜಮ್ಮಯ ಧಾರಾವಾಹಿ, ಕಿರುಚಿತ್ರಗಳನ್ನೂ ಅಭಿನಯಿಸಿ, ಸೈ ಅನಿಸಿಕೊಂಡವರು. ಕನಡ ಸಾಹಿತ್ಯ ಪರಿಷತ್ ನೀಡುವ ಬಿ.ಸರೋಜಾದೇವಿ ಸಾಹಿತ್ಯ ದತ್ತಿ ಪ್ರಶಸ್ತಿಗೆ ಪಾತ್ರರಾಗಿದ್ದ ಗಿರಿಜಮ್ಮನವರಿಗೆ ಕನ್ನಡ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು. ಚಂದಮಮಾ, ತಮಸೋಮ ಜ್ಯೋತಿರ್ಗಮಯ, ಅಂಬರ ತಾರೆ ಸೇರಿದಂತೆ 27 ಕಾದಂಬರಿ, ಅರ್ಧಾಂಗಿ, ಸಂಜೆ ಮಲ್ಲಿಗೆ, ಅನಾವರಣ ಸೇರಿದಂತೆ ಹಲವಾರು ನೀಳ್ಗತೆಗಳೂ ಸೇರಿದಂತೆ ೫೦ಕ್ಕೂ ಹೆಚ್ಚು ಕಥೆಗಳನ್ನು ಬರೆದ ಡಾ.ಗಿರಿಜಮ್ಮ ದಾವಣಗೆರೆಯ ಹೆಮ್ಮೆಯ ಲೇಖಕಿಯೂ ಆಗಿದ್ದಾರೆ.

ನಿಮ್ಮ ಮಗು, ಸೀ ದೇಹ, ಬಸಿರು, ಬಂಜೆತನ ಮತ್ತು ಪರಿಹಾರೋಪಾಯಗಳು, ಮಕ್ಕಳು ಮನಸ್ಸು ಮತ್ತು ಬೆಳವಣಿಗೆ ಗಿರಿಜಯಮ್ಮನವರ ಜನಪ್ರಿಯ ಕೃತಿಗಳ ಪೈಕಿ ಕೆಲವಾಗಿವೆ. ನಾಡಿನ ಹಲವಾರು ನಿಯಕ ಕಾಲಿಕೆಗಳಲ್ಲಿ ಡಾ.ಗಿರಿಜಮ್ಮನವರ ಕಥೆ, ಲೇಖನ, ನೀಳ್ಗತೆಗಳು ಪ್ರಕಟವಾಗಿದೆ. ದಾವಣಗೆರೆಯಲ್ಲಿ ಪಿಯುಸಿವರೆಗೆ ಓದಿದ್ದ ಡಾ.ಎಚ್.ಗಿರಿಯಮ್ಮ ನಂತರ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದರು. ತಮ್ಮ ತಾಯಿಯ ಆಸೆಯಂತೆ ಶ್ರಮಪಟ್ಟು ವೈದ್ಯೆಯಾದ ಡಾ.ಗಿರಿಜಮ್ಮ ಸಾಧನೆ ಅಷ್ಟಕ್ಕೆ ನಿಲ್ಲಲ್ಲಿಲ್ಲ. ಕಾದಂಬರಿಗಾರ್ತಿ ತ್ರಿವೇಣಿಯವರ ಬರಹಗಳಿಂದ ಪ್ರೇರಣೆಯಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದರು. ಡಾ.ಎಚ್.ಗಿರಿಜಮ್ಮನವರ ಮೊದಲ ಕಥೆ ಹೂಬಳ್ಳಿಗೆ ಈ ಆಸರೆ.

ಹೀಗೆ ದಶಕಗಳ ಕಾಲ ವೈದ್ಯಕೀಯ, ಸಾಹಿತ್ಯ, ವೈದ್ಯಕೀಯ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದ ಡಾ.ಎಚ್.ಗಿರಿಜಮ್ಮ ನಿಧನಕ್ಕೆ ಕನ್ನಡ ಸಾಹಿತ್ಯ ಲೋಕ ತೀವ್ರ ಸಂತಾಪ ಸೂಚಿಸಿದೆ. ಲೇಖಕರಾದ ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ಹಿರಿಯ ಜನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ, ಬಾ.ಮ.ಬಸವರಾಜಯ್ಯ, ಕಸಾಪದ ಡಾ.ಎಚ್.ಎಸ್.ಮಂಜುನಾಥ ಕುರ್ಕಿ, ಡಾ.ಶಶಿಕಲಾ ಪಿ.ಕೃಷ್ಣಮೂರ್ತಿ, ಬಿ.ವಾಮದೇವಪ್ಪ, ಎ.ಆರ್.ಉಜ್ಜಿನಪ್ಪ, ಎಚ್.ಎನ್.ಶಿವಕುಮಾರ, ಡಾ.ಸುರೇಶ ಹನಗವಾಡಿ, ಮೀರಾ ಹನಗವಾಡಿ, ಸಂಧ್ಯಾ ಸುರೇಶ, ಕೆ.ರಾಘವಂದ್ರ ನಾಯರಿ ಸೇರಿದಂತೆ ಅನೇಕರು ತೀವ್ರ ಸಂತಾಪ ಸೂಚಿಸಿದ್ದಾರೆ. 

Follow Us:
Download App:
  • android
  • ios