Asianet Suvarna News Asianet Suvarna News

ವರ್ಕ್ ಫ್ರಂ ಹೋಮ್‌ಗೆ ಸೈಬರ್‌ ಕಳ್ಳರ ಭೀತಿ!

ವರ್ಕ್ ಫ್ರಂ ಹೋಮ್‌ಗೆ ಸೈಬರ್‌ ಕಳ್ಳರ ಭೀತಿ! ಆನ್‌ಲೈನ್‌ ಖದೀಮರು| ಆಫೀಸ್‌ ನೀಡಿದ ಲ್ಯಾಪ್‌ಟಾಪನ್ನೇ ಬಳಸಿ| ವೈರಸ್‌ ದಾಳಿ, ಹ್ಯಾಕಿಂಗ್‌ ತಡೆಯಲು ಸೈಬರ್‌ ತಜ್ಞರ ಸಲಹೆ

Work From Home Fear Of Cyber Theft Arises
Author
Bangalore, First Published Apr 28, 2020, 10:11 AM IST

ಶಂಕರ್‌ ಎನ್‌.ಪರಂಗಿ

ಬೆಂಗಳೂರು(ಏ.28): ಲಾಕ್‌ಡೌನ್‌ನಿಂದಾಗಿ ವರ್ಕ್ ಫ್ರಮ್‌ ಹೋಮ್‌ ಮೊರೆ ಹೋದ ಸಾಫ್ಟವೇರ್‌ ಕಂಪನಿಗಳಿಗೆ ಇದೀಗ ವೈರಸ್‌ ಹಾಗೂ ಸೈಬರ್‌ ಖದೀಮರ ಭೀತಿ ಎದುರಾಗಿದೆ.

ಸೋಂಕಿನ ಭಯದಿಂದ ಮೈಕ್ರೋಸಾಫ್ಟ್‌, ಗೂಗಲ್ ಲಾಗ್‌ಮಿನ್‌, ಸಿಸ್ಕೊ ಸೇರಿ ಹಲವು ಬಹುರಾಷ್ಟ್ರೀಯ ಐಟಿ ಕಂಪನಿಗಳು ಹಾಗೂ ರಾಜಧಾನಿ ಸೇರಿದಂತೆ ವಿವಿಧ ನಗರದಲ್ಲಿರುವ ದೊಡ್ಡ ಹಾಗೂ ಸಣ್ಣ ಐಟಿ ಕಂಪನಿಗಳಿಗೆ ಎಚ್ಚರ ವಹಿಸುವಂತೆ ಸೈಬರ್‌ ತಜ್ಞರು ಸೂಚಿಸಿದ್ದಾರೆ.

ಪ್ರಮುಖವಾಗಿ ಕಂಪನಿಗಳ ರಿಮೋಟ್‌ ನೆಟ್‌ವರ್ಕ್ನಲ್ಲೇ ಸಭೆ ಹಾಗೂ ಚರ್ಚೆ ನಡೆಸಬೇಕೇ ಹೊರತು ಬೇರಾವುದೇ ನೆಟ್‌ವರ್ಕ್ನಡಿ ಸಹೋದ್ಯೋಗಿಗಳು ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳದಂತೆ ತಮ್ಮ ನೌಕರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿವೆ. ವಿಶೇಷವಾಗಿ ವೈಯಕ್ತಿಕ ಲ್ಯಾಪ್‌ಟಾಪ್‌ ಅಥವಾ ಮನೆಯಲ್ಲಿರುವ ಸ್ವಂತ ಕಂಪ್ಯೂಟರ್‌ ಬಳಸದಂತೆ ತಜ್ಞರು ಸಲಹೆ ನೀಡಿದ್ದಾರೆ.

ಸುರಕ್ಷತೆ ಇದ್ದರೂ ಭಯ:

ಆಫೀಸ್‌ ಲ್ಯಾಪ್‌ಟಾಪ್‌ ಇಲ್ಲದವರು ಖಾಸಗಿ ಲ್ಯಾಪ್‌ಟಾಪ್‌ಗಳು ಮತ್ತು ಹೋಮ್ ಪಿಸಿಗಳಿಂದ ಕಚೇರಿಯ ನೆಟ್‌ವರ್ಕ್ಗೆ ಲಾಗಿನ್‌ ಆಗುತ್ತಾರೆ. ಇನ್‌ ಆಫೀಸ್‌ ಸೆಟಪ್‌ಗಳ ಮಟ್ಟದಷ್ಟುಫೈರ್‌ವಾಲ್ ಮತ್ತು ಸುರಕ್ಷತೆಯನ್ನು ಖಾಸಗಿ ಕಂಪ್ಯೂಟರ್‌ಗಳು ಹೊಂದಿರುವುದಿಲ್ಲ. ಖಾಸಗಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ನೌಕರರಿಗೆ ಸಿಸ್ಟಮ್‌ ಪ್ರವೇಶಕ್ಕೆ ಒಂದು ಹಾಗೂ ಕಂಪನಿಯ ಸಾಫ್ಟವೇರ್‌ ಪ್ರವೇಶಿಸಿ ಕೆಲಸ ಮಾಡಲು ಮತ್ತೊಂದು ಯೂಸರ್‌ ನೇಮ್‌, ಪಾಸ್‌ವರ್ಡ್‌ ನೀಡಲಾಗಿರುತ್ತದೆ.

ನೌಕರರ ಇ-ಮೇಲ್‌ಗೆ ಬರುವ ಮಾಲ್‌ವೇರ್‌ನಂತಹ ವೈರಸ್‌ಗಳು, ಸಂದೇಶಗಳು, ಫೈಲ್‌ಗಳು ಮೇಲ್‌ನ ಹೋಮ್‌ ಪೇಜ್‌ನಲ್ಲಿ ಡಿಸ್‌ಪ್ಲೇ ಆಗದಂತೆ ನೋಡಿಕೊಳ್ಳಲಾಗುತ್ತದೆ. ಐಟಿ ವಿಶೇಷ ತಂಡದಿಂದ ಕೆಲಸದ ಬಳಿಕ ಡಾಟಾ ಮೌಲ್ಯಮಾಪನ ಮಾಡಲಾಗುತ್ತದೆ. ಹೀಗಾಗಿ ಹಲವು ಸುರಕ್ಷತಾ ಕ್ರಮಗಳನ್ನು ಕಂಪನಿಗಳು ಕೈಗೊಂಡಿರುತ್ತವೆ. ಆದರೂ ಸೈಬರ್‌ ದಾಳಿ ಅಥವಾ ಮಾಹಿತಿ ಸೋರಿಕೆ ಸಾಧ್ಯತೆ ಇರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ ಎಂದು ನಗರದ ಕಂಪನಿಯೊಂದರ ಐಟಿ ವಿಭಾಗದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಸೈಬರ್‌ ದಾಳಿ ಹೇಗೆ ನಡೆಯುತ್ತದೆ?

ಫಿಶಿಂಗ್‌ ಮತ್ತು ರಾರ‍ಯನ್‌ಸಮ್‌ವೇರ್‌ ದಾಳಿ, ಇ-ಮೇಲ್‌ ಮತ್ತು ಸಂದೇಶ, ಪಿಡಿಎಫ್‌ ಫೈಲ್‌ ಕಳುಹಿಸಿ ಬಳಕೆದಾರರಿಂದ ಲಿಂಕ್‌ ತೆರೆಸಲು ಸೈಬರ್‌ ದಾಳಿ ನಡೆಸುವವರು ಯತ್ನಿಸುತ್ತಾರೆ. ಒಂದು ವೇಳೆ ಮೇಲ… ಓಪನ್‌ ಮಾಡಿದರೆ ತಕ್ಷಣ ಕಂಪ್ಯೂಟರ್‌ ಮಾತ್ರವಲ್ಲದೇ ಇಡೀ ಡಿಎನ್‌ಎಸ್‌ (ಡೊಮೈನ್‌ ನೇಮ… ಸಿಸ್ಟಮ…) ಲಾಕ್‌ ಆಗುತ್ತದೆ. ಖದೀಮರ ಸಂದೇಶಗಳು ನೌಕರರ ಸ್ವಂತ ಲ್ಯಾಪ್‌ಟಾಪ್‌ ಮತ್ತು ಹೋಮ… ಪಿಸಿಗಳ ಮೂಲಕ ಕಾರ್ಪೊರೇಟ್‌ ಸ್ವಾಮ್ಯದ ನೆಟ್‌ವರ್ಕ್ಗೆ ಬಹುಬೇಗನೆ ಪ್ರವೇಶಿಸುತ್ತವೆ. ಹಾಗಾಗಿ ಕಂಪನಿ ನೀಡಿರುವ ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ ಬಳಸಿದರೆ ಸೈಬರ್‌ ತೊಂದರೆ ಕಡಿಮೆ ಇರುತ್ತದೆ.

ಸುರಕ್ಷತಾ ಕ್ರಮ ಕೈಗೊಂಡರೂ ಸಹ ಸೈಬರ್‌ ದಾಳಿಯ ಸಾಧ್ಯತೆ ಹೆಚ್ಚಿರುತ್ತದೆ. ಸೈಬರ್‌ ತಜ್ಞರ ಸಲಹೆಯಂತೆ ನೌಕರರು ಮನೆಯಲಿದ್ದರೂ ಸಹ ಕಾಲಕಾಲಕ್ಕೆ ಕಂಪನಿ ಮಾಡುವ ಸಾಫ್ಟ್‌ವೇರ್‌ ಅಪಡೇಟ್‌ ಕಟ್ಟುನಿಟ್ಟಾಗಿ ಮಾಡಿಕೊಳ್ಳಬೇಕು. ನೌಕರರು ಕಂಪನಿಗಳು ನೀಡಿದ ಲ್ಯಾಪ್‌ಟಾಪ್‌ ಮಾತ್ರ ಬಳಸಬೇಕು.

- ಸುರೇಶ್‌, ಕಂಪನಿಯೊಂದರ ಐಟಿ ವಿಭಾಗದ ಮುಖ್ಯಸ್ಥ

Follow Us:
Download App:
  • android
  • ios