ಬಲವಂತವಾಗಿ ಮದ್ಯ ಕುಡಿಸುತ್ತಿದ್ದ ಪತಿ| ಕಿರುಕುಳದಿಂದ ಬೇಸತ್ತು ಠಾಣೆ ಮೆಟ್ಟಿಲೇರಿದ ಪತ್ನಿ| ಪಬ್‌ಗಳಿಗೂ ಕರೆದುಕೊಂಡು ಹೋಗಿ ಕುಡಿಯುವಂತೆ ಬಲವಂತ ಮಾಡುತ್ತಿದ್ದ, ಕುಡಿಯದಿದ್ದರೆ ಬೆದರಿಸಿ ಮಾನಸಿಕ ಕಿರುಕುಳ ಕೊಡುತ್ತಿದ್ದ ಪತಿ|
ಬೆಂಗಳೂರು(ಸೆ.07): ಬಲವಂತವಾಗಿ ಮದ್ಯ ಕುಡಿಸುತ್ತಿದ್ದ ಪತಿಯ ಕಿರುಕುಳದಿಂದ ಬೇಸತ್ತು ಪತ್ನಿ ಠಾಣೆ ಮೆಟ್ಟಿಲೇರಿದ ಘಟನೆ ನಗರದಲ್ಲಿ ನಡೆದಿದೆ.
ಚಿಕ್ಕಮಾವಳ್ಳಿಯ ನಿವಾಸಿ 27 ವರ್ಷದ ಮಹಿಳೆ, ಪತಿ ರವೀಂದ್ರನಾಥ್‌ನ ವಿರುದ್ಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಂಪತಿ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವಾಗುತ್ತಿತ್ತು. ಆರೋಪಿ ಪತ್ನಿಯನ್ನು ನೀನು ದಪ್ಪ ಆಗಿದ್ದಿಯಾ ಎಂದು ಹೀಯಾಳಿಸುತ್ತಿದ್ದ. ಮನೆಗೆ ಮದ್ಯ ತಂದು ಪತ್ನಿಗೆ ಬಲವಂತವಾಗಿ ಕುಡಿಸುತ್ತಿದ್ದ. ನಿರಾಕರಿಸಿದರೆ ಹಲ್ಲೆ ನಡೆಸಿ ಹಿಂಸಿಸುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ.
ಸಾಲ ವಸೂಲಿಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ರೇಪ್ ಕೇಸ್ ಬೆದರಿಕೆ!
ಪಬ್‌ಗಳಿಗೂ ಕರೆದುಕೊಂಡು ಹೋಗಿ ಕುಡಿಯುವಂತೆ ಬಲವಂತ ಮಾಡುತ್ತಿದ್ದ. ಕುಡಿಯದಿದ್ದರೆ ಬೆದರಿಸಿ ಮಾನಸಿಕ ಕಿರುಕುಳ ಕೊಡುತ್ತಿದ್ದ. ನಂತರ ಪತ್ನಿಯನ್ನು ರೆಸ್ಟೋರೆಂಟ್‌ಗೆ ಕರೆದೊಯ್ದು ವಿವಿಧ ಭಂಗಿಯಲ್ಲಿ ಫೋಟೋ ತೆಗೆದಿದ್ದ ಆರೋಪಿ, ವರದಕ್ಷಿಣೆ ತರದಿದ್ದರೆ ಫೋಟೋಗಳನ್ನು ಬಹಿರಂಗ ಪಡಿಸೋದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಕೆಲಸಕ್ಕೆ ಹೋಗಿ ಮನೆಯ ಖರ್ಚು ವೆಚ್ಚ ಭರಿಸುವಂತೆ ಬೆದರಿಸುತ್ತಿದ್ದಾನೆ ಎಂದು ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.
