Asianet Suvarna News Asianet Suvarna News

KSDLನಲ್ಲಿ ಒಡೆಯರ್‌ ಶ್ರೀಗಂಧ ವನ

  • ಸೋಪ್ ಫ್ಯಾಕ್ಟರಿಯಲ್ಲಿ ಒಡೆಯರ ಶ್ರೀಗಂಧ ವನ
  • ಮೈಸೂರ್‌ ಸ್ಯಾಂಡಲ್‌ ಕಾರ್ಖಾನೆಯಲ್ಲಿ ಲೋಕಾರ್ಪಣೆ
  • ಗುಣಮಟ್ಟಕ್ಕೆ ಒತ್ತು ನೀಡಲು ಸಿಎಂ ಬೊಮ್ಮಾಯಿ ಸಲಹೆ
Wodeyar Sandalwood Forest in KSDL bengaluru
Author
Bengaluru, First Published Aug 23, 2022, 8:08 AM IST

ಬೆಂಗಳೂರು (ಆ.23): ಮೈಸೂರು ಸ್ಯಾಂಡಲ್‌ ಸೋಪ್‌ ಎಂದಾಕ್ಷಣ ಶ್ರೀಗಂಧದ ಸುವಾಸನೆ ಮನತುಂಬುತ್ತದೆ. ಉತ್ಪನ್ನಕ್ಕೆ ಉತ್ತಮ ಹೆಸರೂ ಸಹ ಇದೆ. ರಾಜಿ ಮಾಡಿಕೊಳ್ಳದೇ ಮೊದಲಿನ ಗುಣಮಟ್ಟಕಾಪಾಡಿಕೊಳ್ಳಿ. ಮಾರುಕಟ್ಟೆವಿಸ್ತರಣೆಗೆ ಆದ್ಯತೆ ನೀಡಿ. ಇದಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಕರ್ನಾಟಕ ಸೋಫ್ಸ್‌ ಅಂಡ್‌ ಡಿಟರ್ಜೆಂಟ್ಸ್‌ (ಕೆಎಸ್‌ಡಿಎಲ್‌)ನಿಂದ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ‘ಶ್ರೀಗಂಧ ವನ’ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಲಕ್ ಬದಲಿಸುತ್ತೆ ಚಿನ್ನದಷ್ಟೆ ಬೆಲೆ ಬಾಳುವ ಈ ಮರ, Business Idea ಇಲ್ಲಿದೆ!

ಮೈಸೂರು ಸ್ಯಾಂಡಲ್‌ ಸೋಪ್‌(Mysore sandal soap) ನಮ್ಮ ಹೆಮ್ಮೆಯ ಸಂಶೋಧನೆಯಾಗಿದ್ದು ವಿಶೇಷ ಗುಣಧರ್ಮದಿಂದ ಉತ್ತಮ ಹೆಸರನ್ನೂ ಗಳಿಸಿದೆ. 2 ರುಪಾಯಿ ಬೆಲೆ ಹೆಚ್ಚಿಸಿದರೂ ಪರವಾಗಿಲ್ಲ ಜನರು ಖರೀದಿಸುತ್ತಾರೆ. ಗುಣಮಟ್ಟಕ್ಕೆ ಒತ್ತು ನೀಡಿ. ಉತ್ತಮ ಗುಣಮಟ್ಟದ ಶ್ರೀಗಂಧದ ಎಣ್ಣೆ ಬಳಸಿ. ಮೊದಲು ಇದ್ದ ಗುಣಮಟ್ಟಕಾಪಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಶ್ರೀಗಂಧ ನೀತಿ ಶೀಘ್ರ: ಬಂಡವಾಳ ತೊಡಗಿಸಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ. ಡಿಜಿಟಲ್‌ ಮಾರುಕಟ್ಟೆಪ್ರವೇಶಿಸಿ. ಮನೆ-ಮನೆಗೂ ಉತ್ಪನ್ನಗಳನ್ನು ತಲುಪಿಸಿ. 25 ಕೋಟಿ ರು. ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು ಇದು 250 ಕೋಟಿ ರು. ತಲುಪಲಿ. ವೈಯಕ್ತಿಕವಾಗಿ ಯಾರು ಬೇಕಾದರೂ ಶ್ರೀಗಂಧ ಬೆಳೆಸಲು ಅನುಕೂಲವಾಗುವಂತೆ ಸರ್ಕಾರ ಶ್ರೀಗಂಧ ನೀತಿ ರೂಪಿಸಿದ್ದು ಕೆಲವೇ ವಾರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಪ್ರಕಟಿಸಿದರು.

ಕೈಗಾರಿಕಾ ಸಚಿವ ಮುರುಗೇಶ ನಿರಾಣಿ(Murugesh Nirani) ಮಾತನಾಡಿ, ಕೆಎಸ್‌ಡಿಎಲ್‌ ಪ್ರಸಕ್ತ 100 ಕೋಟಿ ರು. ಲಾಭ ಗಳಿಸಿದ್ದು ಇದು ಮುಂದಿನ ದಿನಗಳಲ್ಲಿ 200 ಕೋಟಿ ರು. ಆಗಲಿ. ಮೈಸೂರು ಸ್ಯಾಂಡಲ್‌ ಉತ್ಪನ್ನ(Mysore sandal Product)ಗಳ ಬ್ರಾಂಡ್‌ ಅನ್ನು ದೇಶ-ವಿದೇಶದಲ್ಲಿ ಪಸರಿಸಬೇಕು ಎಂದು ಕರೆ ನೀಡಿದರು. ಕೆಎಸ್‌ಡಿಎಲ್‌ ಅಧ್ಯಕ್ಷ ಮಾಡಾಳು ವಿರುಪಾಕ್ಷಪ್ಪ, ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಮತ್ತಿತರರು ಹಾಜರಿದ್ದರು.

ಮುಖದಲ್ಲಿ ಕಲೆಯಿದೆ ಅನ್ನೋ ಚಿಂತೆನಾ ? ಶ್ರೀಗಂಧದ ಪೇಸ್ಟ್‌ ಹಚ್ಚಿ ನೋಡಿ

ಯಾವುದೇ ಕಾರಣಕ್ಕೂ ಕರ್ನಾಟಕ ಸೋಫ್ಸ್‌ ಅಂಡ್‌ ಡಿಟರ್ಜೆಂಟ್ಸ್‌ ಡಾಬಸ್‌ಪೇಟೆಗೆ ಸ್ಥಳಾಂತರ ಆಗಲು ಬಿಡುವುದಿಲ್ಲ. ಉದ್ಯೋಗಿಗಳು ಆತಂಕಕ್ಕೆ ಒಳಗಾಗದೇ ಉತ್ತಮವಾಗಿ ಕಾರ್ಯ ನಿರ್ವಹಿಸಿ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕು.

-ಗೋಪಾಲಯ್ಯ, ಅಬಕಾರಿ ಸಚಿವ

4 ದಶಕದ ಬಳಿಕ ಸಿಎಂ ಭೇಟಿ: ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು 1916 ರಲ್ಲಿ ಶ್ರೀಗಂಧ ತೈಲ ಕಾರ್ಖಾನೆ ಪ್ರಾರಂಭಿಸಿದ್ದು, ಇದನ್ನು 1980 ರಲ್ಲಿ ಕರ್ನಾಟಕ ಸೋಫ್ಸ್‌ ಅಂಡ್‌ ಡಿಟರ್ಜೆಂಟ್ಸ್‌(ಕೆಎಸ್‌ಡಿಎಲ್‌) ಎಂದು ನಾಮಕರಣ ಮಾಡಲಾಯಿತು. ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್‌ ಅವರು ಕೆಎಸ್‌ಡಿಎಲ್‌ನ ಎಫ್‌ಎಡಿ ವಿಭಾಗ ಉದ್ಘಾಟಿಸಲು 1981 ರಲ್ಲಿ ಆಗಮಿಸಿದ್ದನ್ನು ಹೊರತುಪಡಿಸಿದರೆ ಬೇರೆ ಯಾವ ಮುಖ್ಯಮಂತ್ರಿಯೂ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಇದೀಗ 4 ದಶಕದ ಬಳಿಕ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಭೇಟಿ ನೀಡಿದಂತಾಗಿದೆ.

Follow Us:
Download App:
  • android
  • ios