Asianet Suvarna News Asianet Suvarna News

Puneeth Rajkumar ಪ್ರೇರಣೆಯಿಂದ ಲಕ್ಷ ದಾಟಲಿದೆ ನೇತ್ರದಾನಿಗಳ ಸಂಖ್ಯೆ; ಡಾ.ಕೆ.ಭುಜಂಗಶೆಟ್ಟಿ

‘ನಟ ಪುನೀತ್‌ ರಾಜಕುಮಾರ ಅವರ ಪ್ರೇರಣೆಯ ಪರಿಣಾಮ ನಾರಾಯಣ ನೇತ್ರಾಲಯದಲ್ಲಿ ಕಳೆದ 8 ತಿಂಗಳಲ್ಲಿ 85ಸಾವಿರಕ್ಕೂ ಅಧಿಕ ಜನತೆ ನೇತ್ರದಾನ ನೋಂದಣಿ ಮಾಡಿದ್ದು, ಈ ಸಂಖ್ಯೆ ಶೀಘ್ರವೇ ಲಕ್ಷ ದಾಟಲಿದೆ’ ಎಂದು ಆಸ್ಪತ್ರೆ ಅಧ್ಯಕ್ಷ ಡಾ.ಕೆ.ಭುಜಂಗಶೆಟ್ಟಿವಿಶ್ವಾಸ ವ್ಯಕ್ತಪಡಿಸಿದರು

With Puneeths inspiration the number of eye donors will cross one lakh says DrK Bhujang Shetty
Author
First Published Sep 7, 2022, 7:15 AM IST

\ಬೆಂಗಳೂರು (ಸೆ.6) : ‘ನಟ ಪುನೀತ್‌ ರಾಜಕುಮಾರ ಅವರ ಪ್ರೇರಣೆಯ ಪರಿಣಾಮ ನಾರಾಯಣ ನೇತ್ರಾಲಯದಲ್ಲಿ ಕಳೆದ 8 ತಿಂಗಳಲ್ಲಿ 85ಸಾವಿರಕ್ಕೂ ಅಧಿಕ ಜನತೆ ನೇತ್ರದಾನ ನೋಂದಣಿ ಮಾಡಿದ್ದು, ಈ ಸಂಖ್ಯೆ ಶೀಘ್ರವೇ ಲಕ್ಷ ದಾಟಲಿದೆ’ ಎಂದು ಆಸ್ಪತ್ರೆ ಅಧ್ಯಕ್ಷ ಡಾ.ಕೆ.ಭುಜಂಗಶೆಟ್ಟಿವಿಶ್ವಾಸ ವ್ಯಕ್ತಪಡಿಸಿದರು. ನಾರಾಯಣ ನೇತ್ರಾಲಯದಲ್ಲಿ 37ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್ ವರದಿಗೆ ಸ್ಪಂದಿಸಿದ ರಾಜ್ ಕುಟುಂಬ : ಅಭಿಮಾನಿಯ ಬಯಕೆಯಂತೆ ಮಗುವಿಗೆ ಅಪ್ಪು ಹೆಸರು ನಾಮಕರಣ!

‘ಆಸ್ಪತ್ರೆ(Hospital) ಪ್ರಾರಂಭವಾದ 28 ವರ್ಷದಲ್ಲಿ 70 ಸಾವಿರ ನೇತ್ರದಾನ ನೋಂದಣಿ ಆಗಿತ್ತು. ಕಳೆದ ವರ್ಷ ಅಪ್ಪು ನೇತ್ರದಾನದ ಬಳಿಕದಿಂದ ಈವರೆಗೆ ಆಸ್ಪತ್ರೆಯಲ್ಲಿ ಬರೋಬ್ಬರಿ 85ಸಾವಿರಕ್ಕೂ ಹೆಚ್ಚಿನ ಜನ ನೇತ್ರದಾನ ನೋಂದಣಿ ಮಾಡಿದ್ದಾರೆ. ಶೀಘ್ರ ಈ ಸಂಖ್ಯೆ ಲಕ್ಷ ದಾಟುವ ವಿಶ್ವಾಸವಿದೆ. ಡಾ.ರಾಜಕುಮಾರ ಕುಟುಂಬ ನೇತ್ರದಾನದಲ್ಲಿ ರಾಜ್ಯಕ್ಕೆ ಮಾದರಿ’ ಎಂದರು ‘ಕೋವಿಡ್‌ ಕಾರಣದಿಂದ ನೇತ್ರದಾನ ಶೇ 80ರಷ್ಟುಕುಸಿದಿತ್ತು. ಪುನೀತ್‌ ನೇತ್ರದಾನ ಮಾಡಿದ್ದು ರಾಜ್ಯದಲ್ಲಿ ಸಂಚಲನ ಮೂಡಿಸಿತು. ಹೀಗಾಗಿ ಆಸ್ಪತ್ರೆಯಿಂದ ಆನ್‌ಲೈನ್‌ ನೇತ್ರದಾನಕ್ಕೆ ವ್ಯವಸ್ಥೆ ಮಾಡಲಾಯಿತು. 88840-18800 ಸಂಖ್ಯೆಗೆ ಮಿಸ್ಡ್‌ಕಾಲ್‌ ನೀಡಿ ನೇತ್ರದಾನ ಮಾಡಿ’ ಎಂದು ಮನವಿ ಮಾಡಿಕೊಂಡರು.

‘ದೇಶದಲ್ಲಿ ವಾರ್ಷಿಕ 60 ಸಾವಿರ ಕಣ್ಣು ಸಂಗ್ರಹವಾಗುತ್ತಿದ್ದು, 2 ಲಕ್ಷ ಕಣ್ಣನ್ನು ಸಂಗ್ರಹಿಸುವ ಗುರಿ ಇದೆ. ಭಾರತದ 15 ಲಕ್ಷ ಜನರು ಕಾರ್ನಿಯಾ ಅಂಧತ್ವದಿಂದ, ಕಾರ್ನಿಯಾ ಕಸಿಗೋಸ್ಕರ ಕಾಯುತ್ತಿದ್ದಾರೆ. ಬೆಂಗಳೂರಲ್ಲಿ ದಿನಕ್ಕೆ 300-400 ಸಾವಾಗುತ್ತದೆ. ಆದರೆ 8ಕ್ಕಿಂತ ಕಡಿಮೆ ಕಣ್ಣು ಸಂಗ್ರಹ ಆಗುತ್ತಿದೆ. ಎಲ್ಲರೂ ನೇತ್ರದಾನಕ್ಕೆ ಮುಂದಾಗಿ’ ಎಂದು ಕರೆ ಕೊಟ್ಟರು.ಡಾ.ಯತೀಶ್‌ ನೇತ್ರವನ್ನು ಅಳವಡಿಸುವ ತಾಂತ್ರಿಕ ಪ್ರಕ್ರಿಯೆ ವಿವರ ನೀಡಿದರು.

Puneeth Rajkumar Eye Donation: ಅಪ್ಪು ನಿಧನದ ಬಳಿಕ 400 ಜನ ನೇತ್ರದಾನ

ಯಲಹಂಕ ಆಸ್ಪತ್ರೆಗೆ ಪ್ರಶಸ್ತಿ: ಯಲಹಂಕದ ಸರ್ಕಾರಿ ಆಸ್ಪತ್ರೆ ದಿ. ಹರೀಶ್‌ ನಂಜಪ್ಪ ಸ್ಮರಣಾರ್ಥ ವಾರ್ಷಿಕ ಪ್ರಶಸ್ತಿ ಪಡೆಯಿತು. ಆಸ್ಪತ್ರೆಯ ಡಾ.ಪ್ರೇಮಾನಂದ, ಡಾ. ಅನೀಲ, ಡಾ.ವೆಂಕಟರಾಜು ಅವರು ಪ್ರಶಸ್ತಿ ಸ್ವೀಕರಿಸಿದರು. ಜತೆಗೆ ನೇತ್ರದಾನಕ್ಕಾಗಿ ಕೊಡುಗೆ ನೀಡುತ್ತಿರುವ ಡಾ.ಪ್ರಸನ್ನ, ಪುಷ್ಪಾ ಹೇಮಂತ, ಡಾ.ಶೈಲಜಾ, ಜಿಗಣಿ ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು. ನಾರಾಯಣ ನೇತ್ರಾಲಯದಲ್ಲಿ 37ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದಲ್ಲಿ ದಿ. ಹರೀಶ್‌ ನಂಜಪ್ಪ ಪ್ರಶಸ್ತಿಯನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಯ ಡಾ.ಪ್ರೇಮಾನಂದ, ಡಾ. ಅನೀಲ, ಡಾ.ವೆಂಕಟರಾಜು ಅವರಿಗೆ ಪ್ರದಾನಿಸಲಾಯಿತು.

Follow Us:
Download App:
  • android
  • ios