Asianet Suvarna News Asianet Suvarna News

'ಲಾಕ್ ಡೌನ್ ಇನ್ನೊಂದು ವಾರ ಮುಂದುರೆಸಬೇಕಿದೆ'

* ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೊರೋನಾ ರಣಕೇಕೆ
* ಲಾಕ್‌ಡೌನ್‌ ಮುಂದುವರಿಸುವ ಬಗ್ಗೆ ಸಚಿವರ ಅಭಿಪ್ರಾಯ
* ಇನ್ನೊಂದು ವಾರ ಲಾಕ್‌ಡೌನ್‌ ಮುಂದುವರಿಸುವಂತೆ ಸಿಎಂಗೆ ಮನವಿ ಮಾಡ್ತೇನೆ ಎಂದ ಸಚಿವ

will request To CM BSY For lockdown continue in karnataka Says BC Patil
Author
Bengaluru, First Published May 15, 2021, 3:50 PM IST

ಕೊಪ್ಪಳ, (ಮೇ.15): ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ರಾಜ್ಯ ಸರ್ಕಾರ ಲಾಕ್‌ಡೌನ್‌ ಮುಂದುವರಿಸುವ ಬಗ್ಗೆ ಚಿಂತನೆಯಲ್ಲಿದೆ. ಇನ್ನು ಈ ಬಗ್ಗೆ  ಕೃಷಿ ಸಚಿ ಬಿ ಸಿ ಪಾಟೀಲ್ ಪ್ರತಿಕ್ರಿಯಿಸಿದ್ದು ಲಾಕ್‌ಡೌನ್‌ ಮುಂದುವರಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಪ್ಪಳದಲ್ಲಿ ಇಂದು (ಶನಿವಾರ) ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಇಳಕೆಯಾಗಿದೆ. ಇತರೆ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಮೇ.24 ರ ಬಳಿಕ ಇನ್ನೊಂದು ವಾರ ಲಾಕ್ ಡೌನ್ ಮುಂದುವರೆಸುವ ಅವಶ್ಯಕತೆಯಿದೆ ಎಂದರು.

ಕೊರೋನಾ ನಿಯಂತ್ರಣಕ್ಕೆ ಕನಿಷ್ಠ 6 ರಿಂದ 8 ವಾರ ಲಾಕ್‌ಡೌನ್ ಅನಿವಾರ್ಯ; ICMR! 

 ನಾನು ಸಿಎಂ ಅವರೊಂದಿಗೆ ಮಾತನಾಡುವೆ. ಇನ್ನೊಂದು ವಾರ ಕಟ್ಟು ನಿಟ್ಟಾಗಿ ಜಾರಿಗೆ ಮನವಿ ಮಾಡುವೆ. ಕೊಪ್ಪಳ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮಕ್ಕೆ ಎಸ್ಪಿಗೆ ಸೂಚನೆ ನೀಡುವೆನು ಎಂದು ಹೇಳಿದರು.

ಉಪ ಚುನಾವಣೆಯಿಂದ ಸೋಂಕು ಹೆಚ್ಚಾಗಿದೆ ಎನ್ನಲಾಗದು. ಅದು ಬೇರೆ ಇದು ಬೇರೆ. ರಾಜ್ಯದ ಹಲವು ಕಡೆಯಲ್ಲಿ ದೊಡ್ಡ ದೊಡ್ಡವರೇ ಸಾವನ್ನಪ್ಪುತ್ತಿದ್ದಾರೆ ಎಂದರಲ್ಲದೇ ಕೊಪ್ಪಳ ಜಿಲ್ಲೆಗೆ ಆಕ್ಸಿಜನ್ ಹಂಚಿಕೆಯ ಪ್ರಮಾಣ ಹೆಚ್ಚಿಸುವ ಕುರಿತಂತೆ ಜಿಲ್ಲೆಯಲ್ಲಿ ಸೋಂಕಿತರು ದಾಖಲಾಗುವ ಸ್ಥಿತಿಗತಿ ಅವಲೋಕಿಸಿ ಅವಶ್ಯಕತೆ ಇದ್ದಲ್ಲಿ ಅಧಿಕಾರಿಗಳ ಜೊತೆಗೆ ಮಾತನಾಡಿ ಸರ್ಕಾರಕ್ಕೆ ಪತ್ರ ಬರೆದು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದರು.

Follow Us:
Download App:
  • android
  • ios