ಬೆಳಗಾವಿ(ಅ.23): ಮಾಹಿತಿ ಕಣಜ ವಿಕಿಪೀಡಿಯಾ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ನಾಡಿನ ಹೆಮ್ಮೆಯ ವೀರ ರಾಣಿ ಕಿತ್ತೂರು ಚೆನ್ನಮ್ಮ ಜನ್ಮ ದಿನಾಂಕವನ್ನು ತಪ್ಪಾಗಿ ಮುದ್ರಿಸಿದೆ.

ಕಿತ್ತೂರು ಚನ್ನಮ್ಮ ಸಂಶೋಧಕರ ದಾಖಲೆಗಳ ಪ್ರಕಾರ ಚನ್ನಮ್ಮ ಜನಿಸಿದ್ದು 1778ರ ನವೆಂಬರ್ 14ರಂದು. ಆದರೆ ವಿಕಿಪೀಡಿಯಾದಲ್ಲಿ ಚೆನ್ನಮ್ಮ ಜನ್ಮ ದಿನಾಂಕವನ್ನು ಅಕ್ಟೊಬರ್ 23 ಅಂತಾ ಪ್ರಕಟಿಸಲಾಗಿದೆ.

ಕಿತ್ತೂರು‌ ವಿಜಯೋತ್ಸವದ ದಿನವನ್ನು ರಾಣಿ ಚೆನ್ನಮ್ಮ ಜನ್ಮ ದಿನಾಚರಣೆ ಎಂದು ಸರ್ಕಾರದಿಂದ ಆಚರಣೆ ಮಾಡಲಾಗುತ್ತಿದ್ದು, 1824ರಲ್ಲಿ ಅಕ್ಟೋಬರ್ 23ರಂದು ಬ್ರಿಟಿಷ್ ಅಧಿಕಾರಿ ಥ್ಯಾಕರೆ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ದಿನವನ್ನು ಕಿತ್ತೂರು ಉತ್ಸವ ಎಂದು ಆಚರಣೆ ಮಾಡಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ಕಿತ್ತೂರು ಚನ್ನಮ್ಮ ಇತಿಹಾಸ ಸಂಶೋಧಕ ಯು.ಆರ್. ಪಾಟೀಲ್, ಚೆನ್ನಮ್ಮ ಜನ್ಮ ದಿನಾಂಕವನ್ನು ವಿಕಿಪೀಡಿಯದಲ್ಲಿ ತಪ್ಪಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.