ಅಥಣಿ: ತಾಯಿತನ ಅನ್ನುವುದು ಇಲ್ಲದಿದ್ದರೆ ಯಾವ ಶರಣ, ಸಮಾಜ ಚಿಂತಕ, ಧರ್ಮಗುರುಗಳಾಗಲು ಅಸಾಧ್ಯ. 

ಹೀಗಿರುವಾಗ ಮಠಗಳ ಗರ್ಭಗುಡಿಯಲ್ಲಿ  ಮಹಿಳೆಯರಿಗೆ ಪ್ರವೇಶ ನಿರ್ಬಂಧ ಏಕೆ ಎಂದು ಹಂಪಿಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ಪ್ರಶ್ನಿಸಿದ್ದಾರೆ. 

ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಒಂದು ದಿನದ ವಚನ ವರ್ತನಮಾನ ಎಂಬ ವಿಷಯದ ಚಿಂತನ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮವೆಂದರೆ ತನ್ನೊಳಗೆ ತಾನು ಜಾಗೃತಿಯ ವೈಚಾರಿಕೆ ಪ್ರಜ್ಞೆಯನ್ನು ಒಳಗು ಬೆಳೆಗಿಸಿ ಕೊಳ್ಳುವುದು. ಅದುವೇ ನಿಜವಾದ ಧರ್ಮ ಎಂದು ವಿಶ್ಲೇಷಿಸಿದರು.