ನಮಗೆ ಈ ನೂತನ ಕೃಷಿ ಕಾಯ್ದೆ ಬೇಡವೆ ಬೇಡ. ರೈತರಿಂದ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಹುನ್ನಾರ ಇದು ಎಂದು ರೈತ ಮುಖಂಡ ರಾಕೇಶ್ ಸಿಂಗ್ ಟಿಕಾಯತ್ ಹೇಳಿದ್ದಾರೆ.
ಧಾರವಾಡ (ಮಾ.31): ರೈತರ ಅಭಿವೃದ್ಧಿಗಾಗಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡಲಾಗುತ್ತಿದೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕ್ಯಾಬಿನೆಟ್ ಮಂತ್ರಿಗಳು ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಈ ಸಂಗತಿಯನ್ನು ಏತಕ್ಕಾಗಿ ಬಳಸಲಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಪ್ರಶ್ನಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂರು ಕಾಯ್ದೆಗಳು ಅನುಷ್ಠಾನಗೊಂಡಲ್ಲಿ ಬಡ ರೈತ ತನ್ನ ಜಮೀನು ಹಾಗೂ ಇಳುವರಿ ಎರಡನ್ನೂ ಕಳೆದುಕೊಳ್ಳಲಿದ್ದಾನೆ.
ಟಿಕಾಯತ್ ವಿರುದ್ಧ ಕೇಸ್ : ಯಾವ ಪ್ರಕರಣ ...
ಗುತ್ತಿಗೆ ಕೃಷಿಗೆ ಇದು ಪ್ರೋತ್ಸಾಹ ನೀಡಿ ಭಾರತೀಯ ಕೃಷಿ ಚಟುವಟಿಕೆ ಮೇಲೆ ಬಂಡವಾಳಶಾಹಿಗಳು ತಮ್ಮ ಹಿಡಿತ ಸಾಧಿಸಲಿದ್ದಾರೆ. ತಮಗೆ ಬೇಕಾದ ಬೆಳೆಗಳನ್ನು ರೈತರಿಂದ ಬೆಳೆಸಿ ಅತಿ ಕಡಿಮೆ ದರಲ್ಲಿ ಬೆಳೆಗಳನ್ನು ಖರೀದಿಸಿ, ಜನರಿಗೆ ದುಬಾರಿ ಬೆಲೆಯಲ್ಲಿ ಮಾರುವ ಹುನ್ನಾರ ಈ ಕೃಷಿ ಕಾಯ್ದೆಗಳಲ್ಲಿದೆ. ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆ ಜಾರಿಗೆ ತರಬಾರದು ಎಂದರು.
