ಬೆಂಗಳೂರು(ಜ.04): ಎಲ್ಲೆಡೆ ಕಣ್ಮನ ಸೆಳೆಯುವ ವಿಭಿನ್ನ ಕಲಾಕೃತಿಗಳು, ಕಾಲಿಡದಷ್ಟುಜನಜಂಗುಳಿ, ಕ್ರಿಯಾತ್ಮಕ ಕಲೆಯೊಂದಿಗೆ ಸೆಲ್ಫಿ ಪ್ರಿಯರ ಭರಾಟೆ, ಅಲ್ಲಲ್ಲಿ ಪುಟಾಣಿಗಳ ಮೋಜು-ಮಸ್ತಿ, ಇನ್ನೊಂದೆಡೆ ಕಲಾವಿದರು-ಕಲಾಪ್ರಿಯರ ಸಂಗಮದ ಎಲ್ಲರ ನಿರೀಕ್ಷೆಯ ‘ಚಿತ್ರಸಂತೆ’ ಈ ವರ್ಷ ಕೇವಲ ವರ್ಚುವಲ್‌ಗೆ ಸೀಮಿತಗೊಂಡಿದೆ.

ಕೊರೋನಾ ವೈರಸ್‌ ‘ಚಿತ್ರಸಂತೆ’ ಜಾತ್ರೆಗೆ ಸಂಭ್ರಮವನ್ನೇ ಕಿತ್ತುಕೊಂಡಿದೆ. ಹೀಗಾಗಿ ಈ ವರ್ಷದ ಚಿತ್ರಸಂತೆ ವರ್ಚುವಲ್‌ಗೆ ಮಾತ್ರ ಮೀಸಲಾಗಿದೆ. ಆದರೆ, ಇಡೀ ಜಗತ್ತಿನ ಕಲಾಪ್ರಿಯರಿಗೆ ಕಲೆಯನ್ನು ಆಸ್ವಾದಿಸಲು ಅವಕಾಶ ಲಭಿಸಿದ್ದು, ಒಂದು ತಿಂಗಳ ಕಾಲ ಜರುಗುವ ಬಣ್ಣಗಳ ಓಕುಳಿಯ ಚಿತ್ರಸಂತೆಗೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ. 25 ರಾಷ್ಟ್ರಗಳಿಂದ 52 ಕಲಾವಿದರು, 19 ರಾಜ್ಯಗಳಿಂದ 1056 ಮಂದಿ ಭಾಗಿಯಾಗಿದ್ದಾರೆ.

ವಿಮಾನ ನಿಲ್ದಾಣಕ್ಕೆ ಮೆಜೆಸ್ಟಿಕ್‌ ನಿಂದ ರೈಲು.. ಲಾಭಗಳು ಒಂದೇ..ಎರಡೇ!

ಈ ವರ್ಷದ ಚಿತ್ರಸಂತೆಯನ್ನು ಕೊರೋನಾ ವಾರಿಯರ್ಸ್‌ಗೆ ಅರ್ಪಿಸಲಾಗಿದೆ. ಚಿತ್ರಕಲಾ ಪರಿಷತ್ತಿನ ಮುಖ್ಯ ದ್ವಾರದಲ್ಲಿ ನಿರ್ಮಿಸಿರುವ ಕೊರೋನಾ ಯೋಧರ ಬೃಹತ್‌ ಭಾವಚಿತ್ರ ಜನರನ್ನು ಸ್ವಾಗತಿಸುತ್ತಿದೆ. ಅಲ್ಲದೆ ಕೋವಿಡ್‌ 19 ಕುರಿತಂತೆ ಜಾಗೃತಿ ಮೂಡಿಸುವ ‘ಕೊರೋನಾ ವೈರಸ್‌’ ಮಾದರಿಯ ಪ್ರತಿಕೃತಿ ಎಲ್ಲರ ಗಮನಸೆಳೆಯುತ್ತಿದೆ.

ಜನಜಾತ್ರೆಯೇ ನೆರೆದಿರುತ್ತಿದ್ದ ಚಿತ್ರಸಂತೆಯಲ್ಲಿ ಈ ಬಾರಿ ಬೆರಳೆಣಿಕೆಯಷ್ಟುಜನರಿದ್ದರು. ಆದರೆ, ಆನ್ಲೈಲ್‌ ಸಂತೆಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಪ್ರತಿ ಸೆಕೆಂಡ್‌ಗೆ ಬರೋಬ್ಬರಿ 84 ಮಂದಿ ಭೇಟಿ ನೀಡಿದ್ದಾರೆ. ಎಲ್ಲಾ ಗ್ಯಾಲರಿಗಳಲ್ಲಿ ಮತ್ತು ಹೊರಗೆ ಸ್ವಯಂಸೇವಕರಾಗಿದ್ದ ಸಿಕೆಪಿಯ ವಿದ್ಯಾರ್ಥಿಗಳು ವೀಕ್ಷಕರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದರು.

ಹಾಡುಹಾಗಲೇ ದರೋಡೆ ಮಾಡಿದ್ದವನಿಗೆ ಪೊಲೀಸ್ ಗುಂಡೇಟು

ಈ ಬಾರಿಯ ವರ್ಚುಯಲ್‌ ಚಿತ್ರಸಂತೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಜಾಲತಾಣಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಹಾಗೂ http://karnatakachitrakalaparishath.com/chitra-santhe ವೆಬ್‌ಸೈಟ್‌ ಮೂಲಕ ಪ್ರವೇಶ ಪಡೆಯಬಹುದು.